ETV Bharat / business

ಅರ್ಧಕ್ಕಿಳಿದ ಸರಕು ರಫ್ತು, ವಾಹನೋದ್ಯಮ: ಭಾರತದ ಜಿಡಿಪಿ ನಿರೀಕ್ಷೆ ಇಳಿಸಿದ ಕ್ರಿಸ್ಸಿಲ್​ ರಿಸರ್ಚ್​ - India's GDP News

ಒಂದು ವಾರದ ಹಿಂದಿನ ದೇಶೀಯ ಖಾಸಗಿ ಬಳಕೆಯ ಬೇಡಿಕೆಯಲ್ಲಿನ ಕುಸಿತ, ಉತ್ಪಾದನಾ ಕ್ಷೇತ್ರದಲ್ಲಿನ ಇಳಿಕೆ, ಅರ್ಧದಷ್ಟು ಕ್ಷೀಣಿಸಿದ ಸರಕುಗಳ ರಫ್ತು ಬೆಳವಣಿಗೆ ಸೇರಿದಂತೆ ಇತರೆ ಕಾರಣಗಳಿಂದ ಒಟ್ಟು ದೇಶಿಯ ಉತ್ಪಾದನೆ (ಜಿಡಿಪಿ) ಬೆಳವಣಿಗೆ ನಿರೀಕ್ಷೆಯಲ್ಲಿ ಇಳಿಕೆಯಾಗಿದೆ. ಕಳೆದ ವರ್ಷದಿಂದಲೂ ದೊಡ್ಡ ಪರಿಣಾಮಗಳು ಉಂಟಾಗದ ಹಿನ್ನಲೆ ಯಲ್ಲಿ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯು ಶೇ 5ಕ್ಕೆ ತಲುಪಿದೆ.

ಸಾಂದರ್ಭಿಕ ಚಿತ್ರ
author img

By

Published : Sep 5, 2019, 2:18 PM IST

ನವದೆಹಲಿ: ಭಾರತದ 2020ರ ಸಾಲಿನ ಹಣಕಾಸು ವರ್ಷದಲ್ಲಿನ ಜಿಡಿಪಿ ಬೆಳವಣಿಗೆಯ ದರವನ್ನು ಈ ಹಿಂದೆ ನಿರೀಕ್ಷಿಸಿದ್ದ ಶೇ 6.9ರಷ್ಟು ಪ್ರಗತಿಯನ್ನು ಶೇ 6.3ಕ್ಕೆ ಇಳಿಸಲಾಗಿದೆ ಎಂದು ಕ್ರಿಸ್ಸಿಲ್​ ರಿಸರ್ಚ್ ತಿಳಿಸಿದೆ.

ಒಂದು ವಾರದ ಹಿಂದೆಯಷ್ಟೇ ದೇಶೀಯ ಖಾಸಗಿ ಬಳಕೆಯ ಬೇಡಿಕೆಯಲ್ಲಿನ ಕುಸಿತ, ಉತ್ಪಾದನಾ ಕ್ಷೇತ್ರದಲ್ಲಿ ಇಳಿಕೆ, ಅರ್ಧದಷ್ಟು ಕ್ಷೀಣಿಸಿದ ಸರಕುಗಳ ರಫ್ತು ಬೆಳವಣಿಗೆ ಸೇರಿದಂತೆ ಇತರೆ ಕಾರಣಗಳಿಂದ ಒಟ್ಟು ದೇಶಿಯ ಉತ್ಪಾದನೆ (ಜಿಡಿಪಿ) ಬೆಳವಣಿಗೆ ನಿರೀಕ್ಷೆಯಲ್ಲಿ ಇಳಿಕೆಯಾಗಿದೆ. ಕಳೆದ ವರ್ಷದಿಂದಲೂ ದೊಡ್ಡ ಪರಿಣಾಮಗಳು ಉಂಟಾಗದ ಹಿನ್ನೆಲೆಯಲ್ಲಿ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯು ಶೇ 5ಕ್ಕೆ ತಲುಪಿದೆ.

2020ರ ಹಣಕಾಸು ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷಿಸಲಾಗಿರುವ ಜಿಡಿಪಿ ಬೆಳವಣಿಗೆಯು ಈ ಹಿಂದಿನ 25 ತ್ರೈಮಾಸಿಕಗಳಲ್ಲಿನ ಕನಿಷ್ಠ ಮಟ್ಟದಾಗಿರಲಿದೆ ಎಂದು ಕ್ರಿಸ್ಸಿಲ್​ ಹೇಳಿದೆ.

ಈ ತ್ರೈಮಾಸಿಕದಲ್ಲಿ ನಿಧಾನಗತಿಯ ಖಾಸಗಿ ಬಳಕೆ ಮತ್ತು ಉತ್ಪಾದನೆ ವಲಯದ ಹಿಂಜರಿಕೆಯನ್ನು ಪರಿಗಣಿಸಲಾಗಿದೆ. ಉಳಿದ ತ್ರೈಮಾಸಿಕಗಳು ವರ್ಷಾಂತ್ಯದ ನಿಗದಿತ ಸಂಖ್ಯೆ ತಲುಪಿಲಿದೆ ಎಂಬುದು ನಾವು ಈ ಹಿಂದೆ ನಿರೀಕ್ಷಿಸಿದ್ದ ಶೇ 6.9ಕ್ಕೆ ತಲುಪಲು ಅಸಂಭವ ಎಂದು ಕ್ರಿಸ್ಸಿಲ್​​ ಸಂಸ್ಥೆ ವಿವರಿಸಿದೆ.

ಕ್ರಿಸ್ಸಿಲ್​, ಶೇ 6.3ರಷ್ಟು ಇರಲಿರುವ ಜಿಡಿಪಿ ಬೆಳವಣಿಗೆ ದರವು ಎರಡನೇ ತ್ರೈಮಾಸಿಕದಲ್ಲಿ ಸ್ವಲ್ಪ ಮಟ್ಟಿನ ಬೆಳವಣಿಗೆ ಕಾಣಬಹುದು ಇಲ್ಲವೇ ವರ್ಷದುದ್ದಕ್ಕೂ ಮುಂದುವರಿಯ ಬಹುದೆಂದು ಶಂಕೆ ವ್ಯಕ್ತಪಡಿಸಿದೆ. ಕಡಿಮೆ ಮೂಲದ ಪರಿಣಾಮದಿಂದ ಬೆಳವಣಿಗೆಯು ಸ್ವಲ್ಪ ಮಟ್ಟಿಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ (2019ರ ಹಣಕಾಸು ವರ್ಷದ ದ್ವಿತೀಯಾರ್ಧ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ 6.2ರಷ್ಟು) ಎಂದು ತಿಳಿಸಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.