ನವದೆಹಲಿ: ಕೊರೊನಾದಿಂದ ವಿಪರೀತಕ್ಕೇರಿದ ನಿರುದ್ಯೋಗ ಸೋಂಕಿಗಿಂತ ಮಹಾರೋಗವಾಯಿತು. ಈ ಮಹಾರೋಗ ಉಲ್ಬಣಿಸಿ ಅಮೆರಿಕದಂತ ದೊಡ್ಡಣ್ಣನಿಂದ ಹಿಡಿದು ಸೋಮಾಲಿಯ ತನಕ ಬೆಂಬಿಡದಂತೆ ಕಾಡಿತು. ಇದಕ್ಕೆ ಭಾರತವೂ ಹೊರತಾಗಲಿಲ್ಲ. ಲಾಕ್‌ಡೌನ್-ಪ್ರೇರಿತ ಹಿನ್ನಡೆಯ ಬಳಿಕ ಕಳೆದ ಕೆಲವು ತಿಂಗಳಲ್ಲಿ ಭಾರತದ ಉದ್ಯೋಗ ಪ್ರಮಾಣ ನವೆಂಬರ್ ಮಾಸಿಕದಲ್ಲಿ ಮತ್ತೆ ಕುಸಿದಿತ್ತು.
ದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಕ ಚಟುವಟಿಕೆ ನಡೆಸುವ ರಾಜ್ಯಗಳು ಕೋವಿಡ್ನ-19 ಸಾಂಕ್ರಾಮಿಕ ಆಘಾತಕ್ಕೆ ಒಳಗಾಗಿ ಆರ್ಥಿಕ ದುರ್ಬಲತೆಗಳ ಬಲೆಯಲ್ಲ ಸಿಲುಕಿದವು.
ಜಿವಿಎ (ಒಟ್ಟು ಮೌಲ್ಯ ಸೇರ್ಪಡೆ), ಕಾರ್ಮಿಕ ಮಾರುಕಟ್ಟೆ ಮತ್ತು ಹಣಕಾಸಿನ ಸ್ಥಿತಿಯಂತಹ ಕೊರೊನಾ ಸೋಂಕಿನ ಪ್ರಭಾವದ ಸೂಕ್ಷ್ಮತೆಯನ್ನು ಈ ಮೂರು ರಂಗಗಳಲ್ಲಿ ವ್ಯಾಖ್ಯಾನಿಸಬಹುದು. ಅತ್ಯಧಿಕ ಉತ್ಪಾದನಾ ಕೊಡುಗೆ ನೀಡುವ ರಾಜ್ಯಗಳು ದೇಶದ -19 ಕೇಂದ್ರಬಿಂದುವಾದವು. ಮಹಾರಾಷ್ಟ್ರವು ಸಂಪರ್ಕ ಸೂಕ್ಷ್ಮ ಸೇವಾ ವಲಯದ ಆಘಾತಕ್ಕೆ ಒಳಗಾಯಿತು. ಅದರ ಉತ್ಪಾದನೆಯ ಶೇ 56ರಷ್ಟು ಈ ವಲಯದಿಂದ ಬರುತ್ತಿದೆ. ಕಾರ್ಮಿಕ ಮಾರುಕಟ್ಟೆಯ ಒತ್ತಡಗಳಿಂದಾಗಿ ಎಂಎಸ್‌ಎಂಇಗಳ ಹೆಚ್ಚಿನ ಪಾಲು ಕ್ಷೀಣಿಸಿತು.
ನಿರ್ಮಾಣ ಕ್ಷೇತ್ರದ ಆಘಾತವು ತಮಿಳುನಾಡು ಮತ್ತು ಕೇರಳ ರಾಜ್ಯಗಳನ್ನು ದುರ್ಬಲವಾಗಿಸಿದ್ದರೇ ಉತ್ಪಾದನಾ ಕುಸಿತವು ಗುಜರಾತ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಚೇತರಿಕೆಗೆ ಅಪಾಯಗಳನ್ನು ತಂದೊಡ್ಡಿತ್ತು. ಕೃಷಿ ಕ್ಷೇತ್ರದಿಂದ ಪಂಜಾಬ್ ಆಶ್ರಯ ಪಡೆದಿದ್ದರೂ ಸೇವಾ ವಲಯದಲ್ಲಿ ಅನೌಪಚಾರಿಕ ಕಾರ್ಮಿಕ ಆಘಾತಗಳು ಅನುಭವಿಸುವ ನಿರೀಕ್ಷೆಯಿದೆ.
ಸೇವೆ ವಲಯದ ಆಘಾತಗಳು ದೆಹಲಿ ಮತ್ತು ತೆಲಂಗಾಣದಂತಹ ರಾಜ್ಯಗಳನ್ನು ಸಹ ದುರ್ಬಲಗೊಳಿಸಲಿದೆ. ದೆಹಲಿಯ ಆರಾಮದಾಯಕ ಹಣಕಾಸಿನ ಪರಿಸ್ಥಿತಿಯು ಆರೋಗ್ಯದ ಆಘಾತವನ್ನು ಎದುರಿಸಲು ನೆರವಾಯಿತು. ನಿರ್ಮಾಣದ ಸರ್ವವ್ಯಾಪಿ ಅನೌಪಚಾರಿಕ ವಲಯದ ಆಘಾತಗಳು ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ಮೇಲೆ ಪರಿಣಾಮ ಬೀರಿತು.
ಇದನ್ನೂ ಓದಿ: ಆತ್ಮನಿರ್ಭರ ಭಾರತ 29.87 ಲಕ್ಷ ಕೋಟಿ ರೂ. ಹಣಕಾಸು ಉತ್ತೇಜಕ ಪ್ಯಾಕೇಜ್ ಕ್ಷೇತ್ರವಾರು ಹಂಚಿಕೆ
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಮಾಹಿತಿ ಪ್ರಕಾರ, ನವೆಂಬರ್ನಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಸತತ ಎರಡನೇ ತಿಂಗಳ ಸಂಕೋಚನವಾಗಿದೆ. ಅಕ್ಟೋಬರ್ನಲ್ಲಿ ಉದ್ಯೋಗಿಗಳ ಸಂಖ್ಯೆ 0.1ರಷ್ಟು ಕಡಿಮೆಯಾಗಿದ್ದರೇ ನವೆಂಬರ್ನಲ್ಲಿನ ಕುಸಿತವು 0.9 ಪ್ರತಿಶತದಷ್ಟು ದೊಡ್ಡದಾಗಿದೆ. ನವೆಂಬರ್ ಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ 3.5 ಮಿಲಿನ್ಗೆ ಏರಿಕೆಯಾಗಿದೆ.
ಲಾಕ್‌ಡೌನ್ ಸಮಯದಲ್ಲಿ ಕುಸಿದು ಈ ಬಳಿಕ ಕಂಡು ಬಂದ ಉದ್ಯೋಗದಲ್ಲಿ ಚೇತರಿಕೆ ಪೂರ್ಣಗೊಳ್ಳುವ ಮೊದಲೇ ಮತ್ತೆ ನಿಧಾನದತ್ತ ಮುಖಮಾಡಿದೆ ಎಂಬುದನ್ನು ಡೇಟಾ ತೋರಿಸುತ್ತಿದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಚೇತರಿಕೆ ತ್ವರಿತವಾಗಿ ನಂತರ ಹಂತಹಂತವಾಗಿ ನಿಧಾನವಾಯಿತು. ಆದರೆ, ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ವ್ಯತಿರಿಕ್ತವಾಗಿದೆ. 2020ರ ನವೆಂಬರ್ನಲ್ಲಿ ಉದ್ಯೋಗ ಪ್ರಮಾಣವು 393.6 ಮಿಲಿಯನ್ ಆಗಿತ್ತು. ವರ್ಷದ ಹಿಂದೆ ಇದ್ದಕ್ಕಿಂತ ಶೇ 2.4ರಷ್ಟು ಕಡಿಮೆಯಾಗಿದೆ.
2020ರಲ್ಲಿ ಭಾರತದಲ್ಲಿನ ಉದ್ಯೋಗದ ಮೇಲೆ ಕೋವಿಡ್-19 ಪ್ರಭಾವ ವ್ಯಾಪಕವಾಗಿ ಸಣ್ಣ ವ್ಯಾಪಾರಿಗಳಿಂದ ಹಿಡಿದು ವಲಸೆ ಕಾರ್ಮಿಕರ ತನಕ ಆಕ್ರಮಿಸಿಕೊಂಡಿತು. 2020ರ ಏಪ್ರಿಲ್‌ನಲ್ಲಿ 91 ದಶಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡರು. ಲಾಕ್‌ಡೌನ್ ಬಳಿಕ ಉದ್ಯಮಿಗಳು ಮತ್ತು ಸಂಬಳ ಪಡೆಯುವ ಕಾರ್ಮಿಕರು ಸೇರಿ 119 ದಶಲಕ್ಷಕ್ಕೂ ಅಧಿಕ ಜನರ ಕೆಲಸ ಕತ್ತರಿ ಬಿತ್ತು. ಕಳೆದ ಆರ್ಥಿಕ ವರ್ಷ ಹೋಲಿಸಿದರೆ ಕೃಷಿಕ ರೈತರಿಂದ ಐದು ಪ್ರತಿಶತದಷ್ಟು ಸೇರ್ಪಡೆ ಕಂಡು ಬಂದಿದೆ.
ಕೊರೊನಾ ವೈರಸ್ ಲಾಕ್‌ಡೌನ್ ಏಪ್ರಿಲ್‌ನಲ್ಲಿ ಸುಮಾರು 35 ಪ್ರತಿಶತದಷ್ಟು ಕಾರ್ಮಿಕರು ಮಾತ್ರವೇ ಭಾಗವಹಿಸಿದರು. ಆ ಸಮಯದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡರು. ಉದ್ಯೋಗ ಭಾಗವಹಿಸುವಿಕೆಯ ಪ್ರಮಾಣ ನಿಧಾನವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಶೇ 40.6ಕ್ಕೆ ಏರಿತು.
2020ರ ಸೆಪ್ಟೆಂಬರ್‌ನಲ್ಲಿ ಭಾರತವು ನಿರುದ್ಯೋಗ ದರ ಆರು ಪ್ರತಿಶತಕ್ಕಿಂತಲೂ ಹೆಚ್ಚಾಯಿತು. ಹಿಂದಿನ ತಿಂಗಳಿಗಿಂತ ಇದು ಗಮನಾರ್ಹ ಸುಧಾರಣೆಯಾಗಿದೆ. ಒಟ್ಟು ಲಾಕ್‌ಡೌನ್ ಕಾರಣದಿಂದಾಗಿ ಭಾರತದಷ್ಟು ದೊಡ್ಡದಾದ ಆರ್ಥಿಕತೆಯ ಮೇಲೆ ಹಾನಿಕಾರಕ ಪರಿಣಾಮದ ಸನ್ನಿಹಿತ ಬಂದಿತು. 2020ರ ಮೇನಲ್ಲಿ ನಿರುದ್ಯೋಗವು ಶೇ 24ಕ್ಕೆ ಏರಿತು.