ನವದೆಹಲಿ: ಕೋವಿಡ್-19ನ ಆರ್ಥಿಕ ಪರಿಣಾಮಗಳನ್ನು ಎದುರಿಸಲು ರಚಿಸಲಾದ ಆರ್ಥಿಕ ಪ್ರತಿಕ್ರಿಯೆ ಕಾರ್ಯಪಡೆಯ (ಎಕನಾಮಿಕ್ ರೆಸ್ಪಾನ್ಸ್ ಟಾಸ್ಕ್ಫೋರ್ಸ್) ಮೊದಲ ಸಭೆಯಲ್ಲಿ, 'ಜಾನುವಾರು ಉದ್ಯಮಕ್ಕೆ ಸಾಲಗಳ ಮರುರಚನೆ ಸೇರಿದಂತೆ ಪರಿಹಾರ ಪ್ಯಾಕೇಜ್' ನೀಡುವಂತೆ ಕೇಂದ್ರ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಅವರು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕೋರಿದ್ದಾರೆ.
ಕೊರೊನಾ ವೈರಸ್ ಏಕಾಏಕಿ ಜಾನುವಾರು ಉದ್ಯಮಕ್ಕೆ ತೀವ್ರ ಹಾನಿಯನ್ನು ಉಂಟುಮಾಡಿದೆ. ಈ ವಲಯದಲ್ಲಿ ತೊಡಗಿರುವ ಜನರಿಗೆ ಸಹಾಯ ನೆರವಾಗಲು ಸಾಲ ಪುನರ್ರಚನೆ ಸೇರಿದಂತೆ ವಿವಿಧ ರೀತಿಯ ಕ್ರಮಗಳ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ಸಿಂಗ್ ಹೇಳಿದರು.
ಭಾರತೀಯ ಕೋಳಿ ಉದ್ಯಮವು 1.5 ಲಕ್ಷ ಕೋಟಿ ರೂ. ವಹಿವಾಟು ನಡೆಸುತ್ತಿದೆ. 10 ಲಕ್ಷಕ್ಕೂ ಅಧಿಕ ಸಣ್ಣ ರೈತರು ನೇರವಾಗಿ ಕೋಳಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರೆ. ಕೋಟ್ಯಂತರ ಜನರು ಪರೋಕ್ಷವಾಗಿ ಈ ವಲಯವನ್ನು ಅವಲಂಬಿಸಿದ್ದಾರೆ ಎಂದು ಹೇಳಿದರು.
ಹಲವು ವಿಷಯಗಳ ಬಗ್ಗೆ ವಿವರಗಳಲ್ಲಿ ಚರ್ಚಿಸಲಾಗಿದೆ. ಹಣಕಾಸು ಸಚಿವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಆಶಾದಾಯಕವಾಗಿ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಹರಡಲು ಮೊಟ್ಟೆ ಮತ್ತು ಕೋಳಿ ಮಾಂಸ ಸೇವನೆ ಕಾರಣ ಎಂಬ ಸೋಷಿಯಲ್ ಮೀಡಿಯಾ ವದಂತಿಗಳಿಂದಾಗಿ ಕೋಳಿ ಮಾಂಸದ ಬೆಲೆ ಮತ್ತು ಬೇಡಿಕೆಯಿಂದಾಗಿ ಉದ್ಯಮ ಭಾರಿ ನಷ್ಟವನ್ನು ಅನುಭವಿಸುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಗುರುವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ 'ಕೋವಿಡ್-19 ಎಕನಾಮಿಕ್ ರೆಸ್ಪಾನ್ಸ್ ಟಾಸ್ಕ್ ಫೋರ್ಸ್ ರಚಿಸಲಾಗುತ್ತದೆ. ಇದು ವೈರಸ್ನಿಂದ ಹಾನಿಗೊಳಗಾದ ಕ್ಷೇತ್ರಗಳಿಗೆ ಪರಿಹಾರ ಪ್ಯಾಕೇಜ್ ಅನ್ನು ನಿರ್ಧರಿಸುತ್ತದೆ' ಎಂದಿದ್ದರು
ಉದ್ಯಮಗಳಿಗೂ ಬೆಂಬಲ: ಕೊರೊನಾ ವೈರಸ್ ಹರಡುವಿಕೆಯ ಮಧ್ಯೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸಾಲವನ್ನು ಮರುಪಾವತಿಸಲು ಈ ವಲಯಕ್ಕೆ ಬೆಂಬಲಿಸಲು ಸರ್ಕಾರವು ಅವಕಾಶ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹಣಕಾಸಿನ ನೆರವು ಸೇರಿದಂತೆ ವಿವಿಧ ವಿಷಯಗಳನ್ನು ನಾವು ಚರ್ಚಿಸಿದ್ದೇವೆ. ಕೆಲವು ರೀತಿಯ ಮುಂದೂಡಿಕೆಯನ್ನು ಸಹ ಪ್ರಸ್ತಾಪಿಸಿದ್ದೇವೆ. ಜಿಎಸ್‌ಟಿಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ನಂತರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.