ETV Bharat / business

ಲಾಕ್​ಡೌನ್: ಹಣ್ಣು, ತರಕಾರಿ ಬೆಳೆದ ಬಡ ರೈತರ ಬದುಕು ಕಸಿದುಕೊಂಡ ಕೊರೊನಾ!

ಕೃಷಿ ಮತ್ತು ಆಹಾರ ನೀತಿ ತಜ್ಞ ದೇವಿಂದರ್ ಶರ್ಮಾ, "ಈಟಿವಿ ಭಾರತ್‌" ಜತೆ ಮಾತನಾಡಿ, ಅನೇಕ ಬೆಳೆಗಳು ಮತ್ತು ತರಕಾರಿಗಳ ‘ರಬಿ’ ಸುಗ್ಗಿಯ ಋತುಮಾನ ಈಗಾಗಲೇ ಆರಂಭವಾಗಿದೆ. ಆದರೆ, ಗೋಧಿಗೆ ಕೆಲವೇ ದಿನಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಸರ್ಕಾರಿ ಖರೀದಿ ಸಂಸ್ಥೆಗಳಿಂದ ಗೋಧಿಯನ್ನು ತೆಗೆದುಕೊಳ್ಳುವ ನಿರೀಕ್ಷೆಯಿದ್ದರೂ ತರಕಾರಿ, ಹಣ್ಣು ಮತ್ತು ಹೂವುಗಳಿಗೆ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬಹುದಾದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ಸಹ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Indian agriculture
ಭಾರತದ ಕೃಷಿಕರು
author img

By

Published : Apr 6, 2020, 9:57 PM IST

ನವದೆಹಲಿ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಮತ್ತು ರಸ್ತೆ ಸಂಚಾರ ಸ್ಥಗಿತ ‘ರಬಿ’ ಸೀಸನ್​ನ ತರಕಾರಿ, ಹಣ್ಣು, ಹೂವು ಮತ್ತು ಹಾಲ ಕೃಷಿಕರಿಗೆ ತೀವ್ರ ಹೊಡೆತ ನೀಡಿದ್ದು, ಇದರಿಂದ ಅವರು ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳಬಹುದು.

ಈ ವರ್ಷ ‘ರಬಿ’ ಬೆಳೆ ಮತ್ತು ಉತ್ಪನ್ನಗಳ ಇಳುವರಿಯು ನಿರೀಕ್ಷಿತ ಮಟ್ಟದಲ್ಲಿ ಬರಲಿವೆ ಎಂದು ಅಂದಾಜಿಸಲಾಗಿತ್ತು. ಆದರೆ, ಲಾಕ್‌ಡೌನ್ ಪರಿಣಾಮ ಪೂರೈಕೆಯ ಸರಪಳಿ ಕಡಿದುಕೊಂಡು ರೈತರ ಬದುಕನ್ನು ಹಿಂಡುತ್ತಿದೆ.

ಕೃಷಿ ಮತ್ತು ಆಹಾರ ನೀತಿ ತಜ್ಞ ದೇವಿಂದರ್ ಶರ್ಮಾ, "ಈಟಿವಿ ಭಾರತ್‌" ಜತೆ ಮಾತನಾಡಿ, ಅನೇಕ ಬೆಳೆಗಳು ಮತ್ತು ತರಕಾರಿಗಳ ‘ರಬಿ’ ಸುಗ್ಗಿಯ ಋತುಮಾನ ಈಗಾಗಲೇ ಆರಂಭವಾಗಿದೆ. ಆದರೆ, ಗೋಧಿಗೆ ಕೆಲವೇ ದಿನಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಸರ್ಕಾರಿ ಖರೀದಿ ಸಂಸ್ಥೆಗಳಿಂದ ಗೋಧಿಯನ್ನು ತೆಗೆದುಕೊಳ್ಳುವ ನಿರೀಕ್ಷೆಯಿದ್ದರೂ ತರಕಾರಿ, ಹಣ್ಣು ಮತ್ತು ಹೂವುಗಳಿಗೆ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬಹುದಾದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ಸಹ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರೈತರ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರೇ ಇಲ್ಲ. ಮಾರುಕಟ್ಟೆಗಳಿಗೆ ಜನರ ಪ್ರವೇಶ ನಿರ್ಬಂಧಿಸಲಾಗಿದೆ. ಕಾರ್ಮಿಕರ ಕೊರತೆಯಿಂದಾಗಿ ಸಕಾಲದಲ್ಲಿ ಉತ್ಪನ್ನಗಳು ಮಾರುಕಟ್ಟೆಗೆ ತಲುಪಿಸಲು ಆಗದೆ ಬೇಗನೆ ಹಾಳಾಗಿ ಕೊಳೆಯುತ್ತಿವೆ.

ಸ್ಟ್ರಾಬೆರಿಗಳಂತಹ ದುಬಾರಿ ಹಣ್ಣನ್ನು ದನ-ಕರುಗಳಿಗೆ ನೀಡುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಹಾಲನ್ನು ಬೀದಿ, ರಸ್ತೆ, ಚರಂಡಿ, ಕಾಲುವೆಗಳಲ್ಲಿ ಸುರಿಯಲಾಗುತ್ತಿದೆ. ಇದೊಂದು ದೊಡ್ಡ ಹೊಡೆತವಾಗಿದ್ದು, ರೈತರು ಚೇತರಿಸಿಕೊಂಡು ಇದರಿಂದ ಹೊರ ಬರಲು ಬಹಳ ಕಷ್ಟ ಪಡಬೇಕಾಗುತ್ತೆ. ಸರ್ಕಾರ ನೇರ ನಗದು ರೂಪದಲ್ಲಿ ಅವರ ನೆರನಿಗೆ ಧಾವಿಸಬೇಕಿದೆ ಎಂದರು.

ಈಗಿನ ಪರಿಸ್ಥಿತಿ ಚಿಂತಾಜನಕವಾಗಿದೆ. ಹಿಂದಿನ ಸಂದರ್ಭಗಳಲ್ಲಿ ಇಂತಹ ಸಮಸ್ಯೆಗಳು ಒಂದು ಅಥವಾ ಎರಡು ಬೆಳೆಗೆ ಮಾತ್ರ ಇರುತ್ತಿತ್ತು. ಈ ಬಾರಿ ಅದು ಎಲ್ಲಾ ಬೆಳೆಗಳಿಗೆ ದೇಶದ ಉದ್ದಗಲಕ್ಕೂ ಹಬ್ಬಿದೆ. ತರಕಾರಿಗಳಲ್ಲಿ ಹೆಚ್ಚು ಪರಿಣಾಮ ಬೀರುವುದು ಸೋರೆಕಾಯಿ, ಮೂಲಂಗಿ, ಬಟಾಣಿ , ಎಲೆಕೋಸಿಗೆ. ಇನ್ನು ಸ್ಟ್ರಾಬೆರಿ, ಕಿತ್ತಳೆಯಂತಹ ಇತರೆ ಹಣ್ಣುಗಳು ಬೀದಿಪಾಲಾಗುತ್ತಿವೆ.

ಸುಮಾರು 23 ಬೆಳೆಗಳು ಎಂಎಸ್​ಪಿ ವ್ಯಾಪ್ತಿ ಒಳಗೆ ಬರುತ್ತವೆ. ಗೋಧಿ ಮತ್ತು ಭತ್ತಕ್ಕೆ ಮಾತ್ರ ಸರ್ಕಾರದಿಂದ ಸಾಕಷ್ಟು ಬೇಡಿಕೆ ಇದೆ. ಆದರೆ, ಇತರ ಬೆಳೆಗಳನ್ನು ಹೆಚ್ಚಾಗಿ ಕೃಷಿ ಉತ್ಪನ್ನಗಳ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇದು ಒಂದು ರೀತಿಯಲ್ಲಿ ಶೋಷಣೆಯಂತಿದೆ ಎಂಬುದು ಕೃಷಿ ಅರ್ಥಶಾಸ್ತ್ರಜ್ಞರ ಅಭಿಪ್ರಾಯ.

ಉದ್ಯೋಗಸ್ಥರು ಮಾಸಿಕ ಸಂಬಳ ಪಡೆಯುತ್ತಾರೆ. ಆದರೆ, ರೈತರಿಗೆ ಖಚಿತವಾದ ಆದಾಯವಿಲ್ಲ. ಅವರ ಏಕೈಕ ಜೀವನೋಪಾಯವೆಂದರೆ ಬೆಳೆದ ಉತ್ಪನ್ನಗಳ ಮಾರಾಟದಿಂದ ಬರುವ ಅಲ್ಪ ಆದಾಯ. ಅದೂ ಕೂಡ ಕೊರೊನಾ ಸೋಂಕು ಹಾಗೂ ಲಾಕ್​ಡೌನ್​ನಿಂದ ಈ ಆದಾಯಕ್ಕೂ ಹೊಡೆತ ಬಿದ್ದಿದೆ.

ಲಾಕ್​ಡೌನ್​ನಿಂದ ರಸ್ತೆ ಮತ್ತು ಹೆದ್ದಾರಿಗಳು ಮುಚ್ಚಿದ್ದರಿಂದ ದೇಶಾದ್ಯಂತ ಸುಮಾರು 5,00,000 ಟ್ರಕ್‌ಗಳು ಸಿಲುಕಿಕೊಂಡಿವೆ. ಅಂತರ್ ರಾಜ್ಯ ಪರವಾನಗಿ ನಿರ್ಬಂಧಗಳನ್ನು ಸರಾಗಗೊಳಿಸುವಂತೆ ಹಾಗೂ ಅಗತ್ಯ ಸರಕುಗಳನ್ನು ಸಾಗಿಸುವ ಟ್ರಕ್‌ಗಳಿಗೆ ಆದ್ಯತೆಯ ಮಾರ್ಗಕ್ಕೆ ಸರ್ಕಾರ ಆದೇಶಿಸಿದ್ದರೂ ಸಮಸ್ಯೆಗಳು ನೆಲಮಟ್ಟದಿಂದ ಮೇಲೆ ಎದ್ದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.