ETV Bharat / business

ಕೊರೊನಾ ಲಾಕ್​ಡೌನ್​ 630 ಭಾರತೀಯರ ಅಕಾಲಿಕ ಮರಣ ತಪ್ಪಿಸಿ, ₹ 51,734 ಕೋಟಿ ಉಳಿಸಿದೆ: ವಿಜ್ಞಾನ ವರದಿ

ಸಸ್ಟೈನೇಬಲ್ ಸಿಟಿಸ್ ಆ್ಯಂಡ್ ಸೊಸೈಟಿ ಜರ್ನಲ್​ನಲ್ಲಿ ಪ್ರಕಟವಾದ ಈ ಅಧ್ಯಯನ, ಮಾರ್ಚ್ 25ರಿಂದ ಮೇ 11ರವರೆಗಿನ ಲಾಕ್​​ಡೌನ್​ ಅವಧಿಯಲ್ಲಿ ಪಿಎಂ 2.5 ಅಂಕಿಅಂಶಗಳನ್ನು ಐದು ವರ್ಷಗಳ ಹಿಂದಿನ ಇದೇ ಅವಧಿಗೆ ಹೋಲಿಕೆ ಮಾಡಿದೆ. ವಾಯುಮಾಲಿನ್ಯದ ಮಟ್ಟಕ್ಕೆ ಸುಮಾರು 630 ಅಕಾಲಿಕ ಮರಣಗಳನ್ನು ತಡೆಗಟ್ಟಿ, ಆರೋಗ್ಯ ವೆಚ್ಚದ 690 ಮಿಲಿಯನ್ ಡಾಲರ್ ಉಳಿಸಿದೆ ಎಂದು ಉಲ್ಲೇಖಿಸಿದೆ.

lockdown
ಲಾಕ್​ಡೌನ್
author img

By

Published : Jul 17, 2020, 7:18 PM IST

ನವದೆಹಲಿ: ದೆಹಲಿ, ಮುಂಬೈ ಸೇರಿದಂತೆ ಭಾರತದ ಐದು ಪ್ರಮುಖ ನಗರಗಳಲ್ಲಿ ಕೋವಿಡ್ -19 ಪ್ರೇರೇಪಿತ ಲಾಕ್‌ಡೌನ್​ನಿಂದಾಗಿ ವಾಯುಮಾಲಿನ್ಯದ ಮಟ್ಟಕ್ಕೆ ಸುಮಾರು 630 ಅಕಾಲಿಕ ಮರಣಗಳನ್ನು ತಡೆಗಟ್ಟಿ, ಆರೋಗ್ಯ ವೆಚ್ಚದ 690 ಮಿಲಿಯನ್ ಡಾಲರ್​ (51,734 ಕೋಟಿ ರೂ.) ಉಳಿತಾಯವಾಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ ಮತ್ತು ಹೈದರಾಬಾದ್‌ನ ಐದು ಪ್ರಮುಖ ನಗರಗಳಲ್ಲಿ ಲಾಕ್‌ಡೌನ್ ಅವಧಿಯ ಪ್ರಾರಂಭ ಆದಾಗಿನಿಂದ ವಾಹನಗಳು ಮತ್ತು ಇತರ ಮೂಲಗಳ ಹಾನಿಕಾರಕ ಸೂಕ್ಷ್ಮ ಕಣಗಳ (ಪಿಎಂ 2.5) ಮಟ್ಟವನ್ನು ಇಂಗ್ಲೆಂಡ್​ನ ಸರ್ರೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಿರ್ಣಯಿಸಿದ್ದಾರೆ.

ಸಸ್ಟೈನೇಬಲ್ ಸಿಟಿಸ್ ಆ್ಯಂಡ್ ಸೊಸೈಟಿ ಜರ್ನಲ್​ನಲ್ಲಿ ಪ್ರಕಟವಾದ ಈ ಅಧ್ಯಯನ, ಮಾರ್ಚ್ 25ರಿಂದ ಮೇ 11ರವರೆಗಿನ ಲಾಕ್​​ಡೌನ್​ ಅವಧಿಯಲ್ಲಿ ಪಿಎಂ 2.5 ಅಂಕಿಅಂಶಗಳನ್ನು ಐದು ವರ್ಷಗಳ ಹಿಂದಿನ ಇದೇ ಅವಧಿಗೆ ಹೋಲಿಕೆ ಮಾಡಿ ಕಂಡುಕೊಳ್ಳಲಾಗಿದೆ.

ವಿಜ್ಞಾನಿಗಳ ಪ್ರಕಾರ, ಈ ಅವಧಿಯಲ್ಲಿ ಹಾನಿಕಾರಕ ವಾಯು ಮಾಲಿನ್ಯಕಾರಕಗಳ ಮಟ್ಟವು ಮುಂಬೈಯಲ್ಲಿ ಶೇ.10ರಷ್ಟು ಮತ್ತು ದೆಹಲಿಯಲ್ಲಿ ಶೇ.54ರಷ್ಟು ಕಡಿಮೆಯಾಗಿದೆ. ಇತರ ನಗರಗಳಿಗೆ ಶೇಕಡಾವಾರು ಕಡಿತವು ಶೇ.24 ರಿಂದ 32ರವರೆಗೆ ಇದೆ. ದೆಹಲಿ ಮತ್ತು ಮುಂಬೈಗೆ ಅಳೆಯಲಾದ ಮೌಲ್ಯಗಳಿಗಿಂತ ಸ್ವಲ್ಪ ಸಣ್ಣ ಪ್ರಮಾಣದಲ್ಲಿದೆ ಎಂದು ವಿಜ್ಞಾನಿಗಳು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.

ಪಿಎಂ2.5 ಮಾಲಿನ್ಯದ ಕಡಿತವು ಆಶ್ಚರ್ಯಕರವಲ್ಲದಿದ್ದರೂ ಕಡಿತದ ಗಾತ್ರವು ಭೂಮಿಯ ಮೇಲೆ ಬೀರುತ್ತಿರುವ ಪರಿಣಾಮವನ್ನು ಗಮನಕ್ಕೆ ತರುವಂತೆ ಮಾಡುತ್ತದೆ ಎಂದು ಅಧ್ಯಯನದ ಸಹ ಲೇಖಕ ಪ್ರಶಾಂತ್ ಕುಮಾರ್ ಹೇಳಿದರು.

ಪಿಎಂ2.5ನಲ್ಲಿನ ಈ ಕಡಿತವು ವಿಶ್ವದ ಇತರ ನಗರಗಳ ಬಗ್ಗೆಯೂ ವರದಿಯಾಗಿದ್ದು, ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ (60 ಪ್ರತಿಶತ) ಮತ್ತು ಚೀನಾದ ಶಾಂಘೈ (42 ಪ್ರತಿಶತ) ಇದೆ.

ವಾಯುಮಾಲಿನ್ಯದಿಂದಾಗಿ ಕಡಿಮೆಯಾದ ಮರಣ ಮತ್ತು ವಿತ್ತೀಯ ಮೌಲ್ಯವನ್ನು ಸಹ ಲೆಕ್ಕಹಾಕಿದ್ದಾರೆ. ಪಿಎಂ 2.5ನ ಮಟ್ಟವು 630 ಜನರನ್ನು ಅಕಾಲಿಕ ಮರಣದಿಂದ ರಕ್ಷಿಸಿರಬಹುದು. ಭಾರತದಲ್ಲಿ 690 ದಶಲಕ್ಷ ಆರೋಗ್ಯ ವೆಚ್ಚ ಉಳಿಸಿರಬಹುದು ಎಂದು ಅಂದಾಜಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.