ನವದೆಹಲಿ: ಆರ್ಥಿಕತೆಯ ಮೇಲೆ ಕೋವಿಡ್-19 ಬಿಕ್ಕಟ್ಟಿನ ಪರಿಣಾಮದಿಂದಾಗಿ ಆದಾಯದಲ್ಲಿನ ನಿರೀಕ್ಷಿತ ಕೊರತೆ ಎದುರಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ 4.2 ಲಕ್ಷ ಕೋಟಿ ರೂ.ನಿಂದ 12 ಲಕ್ಷ ಕೋಟಿ ರೂ. ಮಾರುಕಟ್ಟೆ ಸಾಲದ ಮೊತ್ತವನ್ನು ಕೇಂದ್ರ ಸರ್ಕಾರ ಅಂದಾಜಿಸಿದೆ.
2020-21ರ ಆರ್ಥಿಕ ವರ್ಷದಲ್ಲಿ ಅಂದಾಜು ಒಟ್ಟು ಮಾರುಕಟ್ಟೆ ಸಾಲವು ಬಜೆಟ್ ಅಂದಾಜಿನ (ಬಿಇ) 2020-21ರ ಪ್ರಕಾರ 7.80 ಲಕ್ಷ ಕೋಟಿ ರೂ. ಬದಲಿಗೆ 12 ಲಕ್ಷ ಕೋಟಿ ರೂ. ಆಗಲಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸಾಲದ ಪರಿಷ್ಕರಣೆ ಅಗತ್ಯವಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 31ರಂದು ನಿಗದಿಪಡಿಸಿದ 21,000 ಕೋಟಿ ರೂ.ಗಳಿಂದ ವಾರಕ್ಕೊಮ್ಮೆ ಸಾಲ ಪಡೆಯುವ ಗುರಿಯನ್ನು ಸರ್ಕಾರ 30,000 ಕೋಟಿಗೆ ಹೆಚ್ಚಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020-21ರ ಬಜೆಟ್‌ನಲ್ಲಿ ಹೊಸ ಹಣಕಾಸು ವರ್ಷದಲ್ಲಿ ಒಟ್ಟು ಸಾಲವನ್ನು 7.8 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಿದ್ದರು. ಎರವಲು ಅಂದಾಜಿನ ಹೆಚ್ಚಳದೊಂದಿಗೆ ಸರ್ಕಾರವು ತನ್ನ ಹಣಕಾಸಿನ ಕೊರತೆಯ ಗುರಿಯನ್ನು ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ಶೇ. 3.5ರಿಂದ ಪರಿಷ್ಕರಿಸಬೇಕಾಗುತ್ತದೆ.