ETV Bharat / business

400 ಕೋಟಿ ರೂ. ನಷ್ಟವಾದ್ರೂ 23,000 ನೌಕರರ ವೇತನ ಕಡಿತಗೊಳಿಸದ ತಿರುಪತಿ ದೇಗುಲ

ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಮಾತನಾಡಿ, ಕೋವಿಡ್-19 ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮಾರ್ಚ್ 24ರಂದು ಕೇಂದ್ರವು ರಾಷ್ಟ್ರವ್ಯಾಪಿ ಲಾಕ್​ಡೌನ್ ವಿಧಿಸಿದ ನಂತರ ದೇವಾಲಯ ಮುಚ್ಚಿದಾಗಿನಿಂದ ಮಂಡಳಿಗೆ ತಿಂಗಳಿಗೆ 200 ಕೋಟಿ ರೂ. ನಷ್ಟವಾಗಿದೆ. ಆದರೂ ಟಿಟಿಡಿ ತನ್ನ ಸಿಬ್ಬಂದಿಯ ವೇತನ ಕಡಿತ ಮಾಡುವುದಿಲ್ಲ ಎಂದು ಹೇಳಿದರು.

Tirumala Tirupati
ತಿರುಪತಿ ತಿರುಮಲ
author img

By

Published : May 11, 2020, 10:14 PM IST

ತಿರುಪತಿ: ದೇಶದ 'ಶ್ರೀಮಂತ' ದೇಗುಲವಾದ ತಿರುಪತಿ ಶ್ರೀ ವೆಂಕಟೇಶ್ವರ ದೇಗುಲದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್​, ಲಾಕ್​ಡೌನ್​ ವೇಳೆ ಹುಂಡಿ ಹಣ ಸಂಗ್ರಹದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದರೂ ತನ್ನ ಸುಮಾರು 23,000 ಸಿಬ್ಬಂದಿಯ ವೇತನ ಕಡಿತಕ್ಕೆ ಮುಂದಾಗಿಲ್ಲ.

ರಾಷ್ಟ್ರವ್ಯಾಪಿ ಲಾಕ್‌ಡೌನ್​ನಿಂದಾಗಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇದರಿಂದ ಹುಂಡಿಯ ಹಣ ಸಂಗ್ರಹ ಕ್ಷೀಣಿಸಿದೆ. ದೇವಾಲಯವು ತನ್ನ 8,000 ಕಾಯಂ ಉದ್ಯೋಗಿಗಳಿಗೆ ಆಹಾರ ಒದಗಿಸಲು ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯ ಇತರ ಆದಾಯದ ಮೂಲಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಬೆಟ್ಟದ ಮೇಲಿನ ದೇಗುಲದಲ್ಲಿ 15,000 ಹೊರ ಗುತ್ತಿಗೆ ಸಿಬ್ಬಂದಿ ದುಡಿಯುತ್ತಿದ್ದಾರೆ.

ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಮಾತನಾಡಿ, ಕೋವಿಡ್-19 ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮಾರ್ಚ್ 24ರಂದು ಕೇಂದ್ರವು ರಾಷ್ಟ್ರವ್ಯಾಪಿ ಲಾಕ್​ಡೌನ್ ವಿಧಿಸಿದ ನಂತರ ದೇವಾಲಯ ಮುಚ್ಚಿದಾಗಿನಿಂದ ಮಂಡಳಿಗೆ ತಿಂಗಳಿಗೆ 200 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು.

ತೀವ್ರ ಹಣಕಾಸಿನ ಅಡಚಣೆಗಳ ಹೊರತಾಗಿಯೂ ಟಿಟಿಡಿ ತನ್ನ ಎಲ್ಲಾ ಕಾಯಂ ಸಿಬ್ಬಂದಿ, ಹೊರ ಗುತ್ತಿಗೆ ಕಾರ್ಮಿಕರು ಮತ್ತು ಪಿಂಚಣಿದಾರರಿಗೆ ಮುಂದಿನ ಎರಡು ಅಥವಾ ಮೂರು ತಿಂಗಳವರೆಗೆ (ಪೂರ್ಣ) ವೇತನ ಪಾವತಿಸುವ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.

ಟಿಟಿಡಿ ಮಂಡಳಿಯು ತನ್ನ ಅಗತ್ಯತೆಗಳನ್ನು ಸ್ಥಿರ ಠೇವಣಿಗಳಂತಹ ಪರ್ಯಾಯ ಆದಾಯ ಮೂಲಗಳಿಂದ ಪೂರೈಸಿಕೊಳ್ಳುತ್ತಿದೆ. ಇದು ವಾರ್ಷಿಕ 700 ಕೋಟಿ ರೂ.ನಷ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.