ETV Bharat / business

ಕೊರೊನಾ ಭೀತಿ: ಚೀನಾ, ಮ್ಯಾನ್ಮಾರ್​ನ ಈ ಆಹಾರ ಪದಾರ್ಥಗಳನ್ನು ಬಳಸದಂತೆ ಎಚ್ಚರಿಕೆ - ಚೀನಾದ ಪ್ಯಾಕೇಜ್ ಆಹಾರ ಪದಾರ್ಥ

ಮಣಿಪುರ ಸರ್ಕಾರ ನೀಡಿದ ಅಧಿಸೂಚನೆಯನ್ನು ಉಲ್ಲೇಖಿಸಿ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಹೆಚ್ಚುವರಿ ಆಹಾರ ಸುರಕ್ಷತಾ ಆಯುಕ್ತರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.

packaged food
ಪ್ಯಾಕೇಜ್ ಆಹಾರ
author img

By

Published : Feb 7, 2020, 5:58 PM IST

ಇಂಫಾಲ್​: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ನಿಯಮಗಳನ್ನು ಪಾಲಿಸದ ಚೀನಾ, ಮ್ಯಾನ್ಮಾರ್ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಪ್ಯಾಕೇಜ್ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವುದನ್ನು ಮಣಿಪುರ ಸರ್ಕಾರ ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರ ಸರ್ಕಾರದ ಅಧಿಸೂಚನೆ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಹೆಚ್ಚುವರಿ ಆಹಾರ ಸುರಕ್ಷತಾ ಆಯುಕ್ತರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ. 'ಚೀನಾ, ಮ್ಯಾನ್ಮಾರ್ ಮತ್ತು ಇತರ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ತಯಾರಿಸಿದ ಯಾವುದೇ ಪ್ಯಾಕೇಜ್ ಮಾಡಲಾದ ಆಹಾರ ಪದಾರ್ಥಗಳನ್ನು ಯಾವುದೇ ವ್ಯಕ್ತಿಯು ಆಮದು ಮಾಡಿಕೊಳ್ಳಬಾರದು. ಅದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಆಮದು) 2017ರ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ನಿಷೇಧಕ್ಕೆ ಸ್ಪಷ್ಟನೆ ನೀಡಿದೆ.

ಯಾವುದೇ ವ್ಯಕ್ತಿಯು ಮಾರಾಟದ ಉದ್ದೇಶಕ್ಕಾಗಿ ಯಾವುದೇ ಮಧ್ಯವರ್ತಿ ಅಥವಾ ಮಧ್ಯವರ್ತಿಯಾಗಿ ತಯಾರಿಸಲು, ವಿತರಿಸಲು, ಮಾರಾಟ ಮಾಡಲು ಅಥವಾ ರವಾನಿಸಲು ಅಥವಾ ತಲುಪಿಸಲು, ಯಾವುದೇ ಪ್ಯಾಕ್ ಮಾಡಲಾದ ಆಹಾರ ಉತ್ಪನ್ನಗಳನ್ನು ಗುರುತಿಸದ ನಿಯಮಗಳಿಂದ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಲೇಬಲ್ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.

ಚೀನಾ, ಮ್ಯಾನ್ಮಾರ್ ಮತ್ತು ಇತರ ಆಗ್ನೇಯ ಏಷ್ಯಾದ ದೇಶಗಳಲ್ಲಿ ತಯಾರಿಸಿದ ಯಾವುದೇ ಪ್ಯಾಕೇಜ್ಡ್ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಕೋರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.