ETV Bharat / business

ಸುಸ್ಥಿರವಾಗಿ ಸಾಗುತ್ತಿದ್ದ ಭಾರತ ಕೊರೊನಾ ಹೊಡೆತಕ್ಕೆ 'ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ' - ಆರ್ಥಿಕತೆ ಮೇಲೆ ಕೊರೊನಾ ಪ್ರಭಾವ

ಸುಸ್ಥಿರ ಅಭಿವೃದ್ಧಿ ಗುರಿಗಳ ಅನ್ವೇಷಣೆಯಲ್ಲಿ ವಾರ್ಷಿಕ ಆಧಾರದ ಮೇಲೆ ರಾಜ್ಯಗಳ ಮಾನದಂಡಗಳನ್ನು ಸಮಯೋಚಿತವಾಗಿ ಪರಿಶೀಲಿಸುವ ಮೂಲಕ ತನ್ನ ಆರ್ಥಿಕ ಗುರಿಗಳನ್ನು ತಲುಪಲು ಪ್ರಯತ್ನಿಸುತ್ತಿರುವ ಭಾರತ, ಕೋವಿಡ್​ ಸೋಂಕಿನಿಂದಾಗಿ ಅಕ್ಷರಶಃ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ..

Covid
ಕೋವಿಡ್​
author img

By

Published : Jul 17, 2020, 9:26 PM IST

Updated : Jul 17, 2020, 10:04 PM IST

ನವದೆಹಲಿ : ‘ಬಡತನ’ ಎಂಬುದು ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವನದೊಳಗೆ ಸದ್ದಿಲ್ಲದೆ ಆವರಿಸುವ ಶಬ್ಧವಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಜೀವನೋಪಾಯಕ್ಕೆ ಅಗತ್ಯ ಸೌಲಭ್ಯಗಳ ಕೊರತೆಯಿಂದಾಗಿ ಬಡತನ ಮತ್ತು ಹಸಿವಿನ ಜೀವನಕ್ಕೆ ಲಕ್ಷಾಂತರ ಜನರನ್ನು ನೂಕುತ್ತಿದೆ ಎಂದು ವಿಶ್ವಸಂಸ್ಥೆಯು ತನ್ನ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.

'ಮೂಲಭೂತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ ಹೋದಲಿ ಕೊರೊನಾ ಬಿಕ್ಕಟ್ಟು ಖಚಿತವಾಗಿ ಮತ್ತಷ್ಟು ಉಲ್ಬಣಗೊಳ್ಳುತ್ತದೆ' ಎಂದು ಡಬ್ಲ್ಯೂಹೆಚ್​​ಒ ಎಚ್ಚರಿಸುತ್ತಿದೆ. ಈಗಾಗಲೇ ವಿಶ್ವದಾದ್ಯಂತ ಸುಮಾರು 1.31 ಕೋಟಿ ಜನ ಸೋಂಕಿಗೆ ಒಳಗಾಗಿ, 5.72 ಲಕ್ಷ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಇದು ರಾಷ್ಟ್ರಗಳ ಆರ್ಥಿಕತೆಯನ್ನು ಛಿದ್ರಗೊಳಿಸಿದೆ. ಜನರ ಜೀವನ ಮಟ್ಟದಲ್ಲಿ ತೀವ್ರವಾಗಿ ಕುಸಿತ ಕಂಡಿದೆ. ಕಳೆದ ವರ್ಷದಲ್ಲಿ 69 ಕೋಟಿ ಜನರು ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿದ್ದರು ಎಂದು ಅಂದಾಜಿಸಿದೆ.

ಈ ವರ್ಷದ ಅಂಕಿ ಅಂಶಗಳು ಹೊಸ ಲೆಕ್ಕಾಚಾರವನ್ನು ತಂದಿಟ್ಟಿದೆ. ಇಂಡಿಯನ್ ಚೇಂಬರ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕೋವಿಡ್ -19 ಹಬ್ಬುವಿಕೆಯಿಂದಾಗಿ ಕಳೆದ ವರ್ಷಗಳ ಅಂಕಿ ಅಂಶಗಳಿಗೆ ಸುಮಾರು 13.2 ಮಿಲಿಯನ್ ಜನ ಸೇರಿರಬಹುದು ಎಂದು ಅಂದಾಜಿಸಿದೆ.

ಇತ್ತೀಚಿನ ಅಧ್ಯಯನಗಳ ಅನ್ವಯ, ಪ್ರಪಂಚದಾದ್ಯಂತ ಸುಮಾರು 300 ಕೋಟಿ ಜನರಿದ್ದು, ಆರೋಗ್ಯಕರವಾದ ಪೌಷ್ಠಿಕ ಆಹಾರ ಖರೀದಿಸಲು ಮತ್ತು ತಿನ್ನಲು ಶಕ್ತರಾಗಿಲ್ಲ. ಕೊರೊನಾ ಉದ್ಯೋಗಾವಕಾಶಗಳನ್ನು ಕಡಿತಗೊಳಿಸಿದೆ. ವಯಸ್ಕರಿಗೆ ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದೆ. ಶಾಲೆಗಳು ಬಾಗಿಲು ಹಾಕಿದ್ದರಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ಇಲ್ಲದಂತಾಗಿದೆ. ಹಸಿವಿನ ದೊಡ್ಡ ಬಿಕ್ಕಟ್ಟು, ಬಡವರು, ಯುವಕರು ಮತ್ತು ವೃದ್ಧರನ್ನು ಕಾಡುತ್ತಿದೆ.

ತಮ್ಮ ನಾಗರಿಕರಿಗೆ ಸರಿಯಾದ ಪೌಷ್ಠಿಕಾಂಶ ಒದಗಿಸಬಹುದಾದ್ರೆ 2030ರ ವೇಳೆಗೆ ಆರೋಗ್ಯ ವೆಚ್ಚದಲ್ಲಿ ಪ್ರತಿವರ್ಷ ಕನಿಷ್ಠ 1.30 ಲಕ್ಷ ಕೋಟಿ ಡಾಲರ್​ ಉಳಿಸಬಹುದೇ ಎಂಬ ಸಂದಿಗ್ಧತೆಗೆ ಸರ್ಕಾರಗಳನ್ನು ತಳ್ಳಿದೆ. ಜಾಗತಿಕ ಆರ್ಥಿಕತೆಯು ಆಳವಾದ ಆರ್ಥಿಕ ಹಿಂಜರಿತಕ್ಕೆ ಇಳಿಯುತ್ತಿದ್ದಂತೆ 2030ರ ವೇಳೆಗೆ ಸಾಧಿಸಬೇಕಾದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಪ್ಪಿಸಿಕೊಳ್ಳುವ ಅಪಾಯವಿದೆ.

ಕೊರೊನಾದ ಜೊತೆಗೆ ಪ್ರವಾಹ ಮತ್ತು ಮಿಡತೆ ಹಾವಳಿಯಂತಹ ನೈಸರ್ಗಿಕ ವಿಕೋಪಗಳು ಸಹ ಜನರ ಸಾಮಾಜಿಕ ಜೀವನ ಪರಿಸ್ಥಿತಿಗಳನ್ನು ತಗ್ಗಿಸುತ್ತಿರುವುದರ ಬಗ್ಗೆಯೂ ಗಂಭೀರ ಕಾಳಜಿ ಮಾಡಬೇಕಿದೆ. 2015ರಲ್ಲಿ 193 ರಾಷ್ಟ್ರಗಳು ವಿಶ್ವಸಂಸ್ಥೆ ರೂಪಿಸಿದ 17 ಸುಸ್ಥಿರ ಅಭಿವೃದ್ಧಿ ಗುರಿಗಳ ಕಾರ್ಯಸೂಚಿಯನ್ನು ಎಲ್ಲಾ ದೇಶಗಳನ್ನು ಪ್ರಗತಿಯ ಹಾದಿಯಲ್ಲಿ ಸಂಯೋಜಿಸುವ ಗುರಿಯೊಂದಿಗೆ ಅಂಗೀಕರಿಸಿತು.

ಕೋವಿಡ್​​-19 ಸಾಂಕ್ರಾಮಿಕವು ತೀವ್ರ ಹೊಡೆತ ನೀಡಿದೆ. ಭಾರತದಂತಹ ದೇಶಗಳ ಉಪಕ್ರಮವು ಹದಿನೈದು ವರ್ಷಗಳ ಕಾರ್ಯಾಚರಣೆಯ ವಾರ್ಷಿಕ ಮೌಲ್ಯಮಾಪನದೊಂದಿಗೆ ಮುಂದುವರಿಯುತ್ತಿದೆ. ವಿಶ್ವಾದ್ಯಂತ ಬಡತನ ನಿವಾರಣೆಯು ಮೊದಲ ಆದ್ಯತೆ ಆಗಿದ್ದರೇ ಹಸಿವಿನ ನಿರ್ಮೂಲನೆ ಮಾಡುವುದು ಎರಡನೆಯದಾಗಿದೆ. ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆಯಂತಹ ಅಂಶಗಳಿಗೆ ಮಹತ್ವ ನೀಡುತ್ತಿವೆ.

ಕಳೆದ ಐದು ವರ್ಷಗಳಿಂದ ಭಾರತ ಈ ಗುರಿಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿರುವಾಗ ಕೋವಿಡ್-19 ಸಾಂಕ್ರಾಮಿಕ ಮಾರಣಾಂತಿಕ ಹೊಡೆತ ನೀಡಿದೆ. ಇದುವರೆಗೂ ಮಾಡಿದ ಕಾರ್ಯಗಳೆಲ್ಲವೂ ಕೊಚ್ಚಿ ಹೋಗುತ್ತಿವೆ. ಆರ್ಥಿಕತೆಯ ಸ್ಥಿತಿ ಕೂಡ ಕುಸಿದಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಅನ್ವೇಷಣೆಯಲ್ಲಿ ವಾರ್ಷಿಕ ಆಧಾರದ ಮೇಲೆ ರಾಜ್ಯಗಳ ಮಾನದಂಡಗಳನ್ನು ಸಮಯೋಚಿತವಾಗಿ ಪರಿಶೀಲಿಸುವ ಮೂಲಕ ತನ್ನ ಆರ್ಥಿಕ ಗುರಿಗಳನ್ನು ತಲುಪಲು ಪ್ರಯತ್ನಿಸುತ್ತಿರುವ ಭಾರತದ ಪರಿಸ್ಥಿತಿ ಈಗ ಅಕ್ಷರಶಃ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

ಒಂದು ವಾರದ ಹಿಂದೆ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ, ಸುಮಾರು 160 ಕೋಟಿ ಕಾರ್ಮಿಕರನ್ನು ಹೊಂದಿರುವ ವಿಶ್ವದ ಅರ್ಧದಷ್ಟು ಕಾರ್ಮಿಕರನ್ನು ಹೊಂದಿರುವ ಅಸಂಘಟಿತ ವಲಯದ ಕಾರ್ಮಿಕರ ಆದಾಯ ಕಡಿತಗೊಂಡಿದೆ. ಇದು ಜಾಗತಿಕ ಆರ್ಥಿಕ ಸೂಚ್ಯಂಕವನ್ನು ತೀವ್ರವಾಗಿ ತಗ್ಗಿಸಿದೆ. ರೋಗನಿರೋಧಕ ಶಕ್ತಿ ಮತ್ತು ಇತರ ಪೌಷ್ಠಿಕಾಂಶ ಕಾರ್ಯಕ್ರಮಗಳ ಅಡಚಣೆಗಳು, ಈ ವರ್ಷದ ತಾಯಂದಿರ ಸಾವಿನ ಪ್ರಮಾಣದ ಏರಿಕೆಗೆ ಕಾರಣವಾಗಬಹುದು ಎಂಬ ಕಳವಳದ ಅಂದಾಜು ಇರಿಸಿಕೊಂಡಿದೆ.

ಕೋವಿಡ್ -19ನಿಂದ ಶಾಲೆಗಳು ಮುಚ್ಚುವುದರಿಂದ ಸುಮಾರು 157 ಕೋಟಿ ಮಕ್ಕಳು ಶಾಲಾ ಅವಕಾಶದಿಂದ ಹೊರಗುಳಿದಿದ್ದಾರೆ ಎಂದು ಯುಎನ್ ಅಂದಾಜಿಸಿದೆ. ಕಂಪ್ಯೂಟರ್ ಮತ್ತು ಇಂಟರ್​ನೆಟ್​ ಸೌಲಭ್ಯಗಳ ಕೊರತೆಯಿಂದಾಗಿ ಶತಕೋಟಿ ಮಕ್ಕಳ ಶಿಕ್ಷಣಕ್ಕೆ ಹಾನಿಯಾಗಿದೆ.

ಕೊರೊನಾ ಪ್ರಸ್ತುತ ಪೀಳಿಗೆಯ ಮೇಲೆ ಮಾತ್ರವಲ್ಲದೆ ರಾಷ್ಟ್ರದ ಭವಿಷ್ಯದ ಮೇಲೂ ಪರಿಣಾಮ ಬೀರುತ್ತಿದೆ. 'ಭಾರತ ಸರ್ಕಾರ ತನ್ನ ಜಿಡಿಪಿಯ ಶೇ 6.2ರಷ್ಟು ಹೆಚ್ಚುವರಿ ಖರ್ಚು ಮಾಡಿದರೆ ಮಾತ್ರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಬಹುದು' ಎಂದು ಸರ್ಕಾರದ ಥಿಂಕ್ ಟ್ಯಾಂಕ್ ಆಗಿರುವ ನೀತಿ ಆಯೋಗ ಹೇಳುತ್ತದೆ. ಪ್ರತಿ ರಾಷ್ಟ್ರವು ಒಡ್ಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ಪ್ರಸ್ತುತ ಸನ್ನಿವೇಶದಲ್ಲಿ ಸರ್ಕಾರಗಳ ಕಾರ್ಯಕ್ಷಮತೆಗೆ ಇದೊಂದು ದೊಡ್ಡ ಅಗ್ನಿ ಪರೀಕ್ಷೆಯಾಗಲಿದೆ.

Last Updated : Jul 17, 2020, 10:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.