ನವದೆಹಲಿ: ದೇಶದ ಎಂಟು ಪ್ರಮುಖ ಕೈಗಾರಿಕೆಗಳು 2020ರ ಜನವರಿ ಮಾಸಿಕದಲ್ಲಿ ಶೇ 2.2 ರಷ್ಟು ಬೆಳವಣಿಗೆ ದಾಖಲಿಸಿವೆ.
ಕಲ್ಲಿದ್ದಲು, ಸಂಸ್ಕರಣಾಗಾರ ಉತ್ಪನ್ನಗಳು ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಏರಿಕೆಯಾಗಿದೆ. ಮೂಲಸೌಕರ್ಯ ಕ್ಷೇತ್ರಗಳು 2019ರ ಜನವರಿಯಲ್ಲಿ ಶೇ 1.5ರಷ್ಟು ವಿಸ್ತರಿಸಿದ್ದವು ಎಂದು ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಕಲ್ಲಿದ್ದಲು, ಸಂಸ್ಕರಣಾಗಾರ ಉತ್ಪನ್ನಗಳು ಮತ್ತು ವಿದ್ಯುತ್ ಉತ್ಪಾದನೆಯು ಕ್ರಮವಾಗಿ ಶೇ 8, ಶೇ 1.9 ಮತ್ತು ಶೇ 2.8 ರಷ್ಟು ಏರಿಕೆಯಾಗಿದೆ. ಪರಿಶೀಲನಾ ತಿಂಗಳಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ರಸಗೊಬ್ಬರ ಕ್ಷೇತ್ರಗಳು ಋಣಾತ್ಮಕ ಬೆಳವಣಿಗೆ ದಾಖಲಿಸಿವೆ.
ಏಪ್ರಿಲ್-ಜನವರಿ ಅವಧಿಯಲ್ಲಿ ಪ್ರಮುಖ ಕೈಗಾರಿಕೆಗಳ ಬೆಳವಣಿಗೆಯು ಹಿಂದಿನ ವರ್ಷದ ಅವಧಿಯಲ್ಲಿನ ಶೇ 4.4ರಿಂದ ಶೇ 0.6ಕ್ಕೆ ಇಳಿದಿವೆ. ಎಂಟು ಪ್ರಮುಖ ವಲಯಗಳು 2019ರ ಆಗಸ್ಟ್ನಿಂದ ನವೆಂಬರ್ರವರೆಗೆ ನಕಾರಾತ್ಮಕ ಬೆಳವಣಿಗೆ ದಾಖಲಿಸಿವೆ.