ಬೀಜಿಂಗ್: ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಮೇಯರ್ ಒಬ್ಬರನ್ನು ತನಿಖೆಗೆ ಒಳಪಡಿಸಿ ಮನೆಯಲ್ಲಿ ಶೋಧ ನಡೆಸುತ್ತಿದ್ದ ವೇಳೆ ಪೊಲೀಸರಿಗೇ ಶಾಕ್ ಆಗಿದೆ. ನೆಲಮಾಳಿಗೆಯಲ್ಲಿ 13 ಟನ್‌ಗೂ ಅಧಿಕ ಚಿನ್ನ ಸಂಗ್ರಹಿಸಿಟ್ಟಿದ್ದು ಚೀನಾದ ಈ ಭೂಪನನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಈ ಹಿಂದೆ ಕಮ್ಯೂನಿಷ್ಟ್ ಪಕ್ಷದ ಅಧಿಕಾರಿ ಹಾಗೂ ಡ್ಯಾನ್‌ಝೋನ ಸಿಟಿಯ ಮಾಜಿ ಮೇಯರ್ ಆಗಿದ್ದ ಜಾಂಗ್ ಕಿ ಅವರ ಮನೆಯಲ್ಲಿನ ರಹಸ್ಯ ನೆಲಮಾಳಿಗೆಯಲ್ಲಿದ್ದ ನೂರಾರು ಮಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂಬುದು ವರದಿಯಾಗಿದೆ.
13 ಟನ್ ಚಿನ್ನದ ಜೊತೆಗೆ 37 ಬಿಲಿಯನ್ಗೂ ಅಧಿಕ ಮೊತ್ತದ ಹಣ ಮತ್ತು ಆಸ್ತಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭ್ರಷ್ಟಾಚಾರವನ್ನು ತೊಡೆದು ಹಾಕುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಪ್ರತಿಯಾಗಿ 250ಕ್ಕೂ ಹೆಚ್ಚು ಮಾಜಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆಪಾದನೆಯ ಮೇರೆಗೆ ಈತನನ್ನು ಅಮಾನತುಗೊಳಿಸಲಾಗಿತ್ತು.