ನವದೆಹಲಿ: ಅಮೆರಿಕ ತೈಲ ಸಂಸ್ಥೆ ಕೊನೊಕೊ ಫಿಲಿಪ್ಸ್ ವೆನಿಜುವೆಲಾದ ಆಸ್ತಿ ಸಂಬಂಧ ಮಧ್ಯಸ್ಥಿಕೆ ತೀರ್ಪು ಜಾರಿಗೊಳಿಸಿದಂತೆಯೇ ಭಾರತೀಯ ರೆಟ್ರೊ ಟ್ಯಾಕ್ಸ್ (ಹಿಂದಿನ ತೆರಿಗೆ) ವಿರುದ್ಧ ಬ್ರಿಟನ್ನ ಕೈರ್ನ್ ಎನರ್ಜಿಗೆ ನೀಡಲಾದ 1.4 ಬಿಲಿಯನ್ ಡಾಲರ್ ಸಂಗ್ರಹಿಸಲು ಭಾರತೀಯ ಬ್ಯಾಂಕ್ ಖಾತೆಗಳು, ವಿಮಾನಗಳು ಮತ್ತು ಇತರ ವಿದೇಶಿ ಆಸ್ತಿಗಳನ್ನು ವಶಪಡಿಸಿಕೊಳ್ಳಬಹುದು ಎಂದು ಸುದ್ದಿ ಸಂಸ್ಥೆ ಪಿಟಿಐ ಗಮನಿಸಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಧ್ಯಸ್ಥಿಕೆ ತೀರ್ಪು ಗೌರವಿಸಲು ಭಾರತ ಸರ್ಕಾರ ವಿಫಲವಾದರೆ, ಬ್ರಿಟಿಷ್ ಸಂಸ್ಥೆ ಕೈರ್ನ್ ಎನರ್ಜಿ ಸಾಗರೋತ್ತರ ಭಾರತೀಯ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಕಾರ್ಯ ಪ್ರಾರಂಭಿಸಲಿದೆ.
ಕೈರ್ನ್ ಸಿಇಒ ಸೈಮನ್ ಥಾಮ್ಸನ್ ಜನವರಿ 22ರಂದು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನರ್‌ಗೆ ಪತ್ರ ಬರೆದಿದ್ದರು. ಇದೇ ಪ್ರತಿಗಳನ್ನು ಪ್ರಧಾನ ಮಂತ್ರಿಗಳ ಕಚೇರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೂ ಕಳುಹಿಸಿದ್ದಾರೆ. ಮಧ್ಯಸ್ಥಿಕೆ ತೀರ್ಪಿನ ಅಂತಿಮ ಮತ್ತು ಒಗ್ಗೂಡಿಸುವಿಕೆ ಹಾಗೂ ಅದರ ನಿಯಮಗಳನ್ನು ಅನುಸರಿಸುವ ಜವಾಬ್ದಾರಿ ಭಾರತ ಸರ್ಕಾರ ಹೊಂದಿದೆ.
ಭಾರತವು ನ್ಯೂಯಾರ್ಕ್ ಸಮಾವೇಶಕ್ಕೆ ಸಹಿ ಹಾಕಿದ ಕಾರಣ, ವಿಶ್ವದಾದ್ಯಂತ ಹಲವು ನ್ಯಾಯವ್ಯಾಪ್ತಿಗಳಲ್ಲಿ ಭಾರತೀಯ ಆಸ್ತಿಗಳ ವಿರುದ್ಧ ನಿರ್ಣಯ ಜಾರಿಗೊಳಿಸಬಹುದು. ಇದಕ್ಕಾಗಿ ಅಗತ್ಯವಾದ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: ನಿರ್ಮಲಾ ಬಜೆಟ್: ಮುಂದಿನ ಆಯವ್ಯಯದಲ್ಲಿ ಬೆಳೆ ಸಾಲ ಗುರಿ 19 ಲಕ್ಷ ಕೋಟಿ ರೂ.ಗೆ ಏರುವ ಸಂಭವ
ವೆನಿಜುವೆಲಾದ 2007ರ ಆಸ್ತಿ ಸ್ವಾಧೀನಪಡಿಸಿಕೊಂಡಿದ್ದರ ವಿರುದ್ಧವಾಗಿ ಮಧ್ಯಸ್ಥಿಕೆ ತೀರ್ಪು ಗೆದ್ದು 2 ಬಿಲಿಯನ್ ಡಾಲರ್ ಪರಿಹಾರ ಸಂಗ್ರಹಿಸಲು ವೆನಿಜುವೆಲಾದ ಸರ್ಕಾರಿ ತೈಲ ಕಂಪನಿ ಪಿಡಿವಿಎಸ್ಎ ಆಸ್ತಿ ವಶಪಡಿಸಿಕೊಳ್ಳಲು 2019ರಲ್ಲಿ ಕೊನೊಕೊಫಿಲಿಪ್ಸ್ ಅಮೆರಿಕದ ನ್ಯಾಯಾಲಯಗಳನ್ನು ಕೋರಿತ್ತು.
ಭಾರತ ನೇಮಕ ಮಾಡಿದ ನ್ಯಾಯಾಧೀಶರನ್ನು ಒಳಗೊಂಡ ಮೂವರು ಸದಸ್ಯರ ನ್ಯಾಯಮಂಡಳಿ, ಕಳೆದ ತಿಂಗಳು ಸರ್ವಾನುಮತದಿಂದ ಕೈರ್ನ್‌ನ ಮೇಲಿನ 10,247 ಕೋಟಿ ರೂ.ಗಳ ಹಿಂದಿನ ತೆರಿಗೆ ಬೇಡಿಕೆ ರದ್ದುಗೊಳಿಸಿತು. ಭಾರತ ಸರ್ಕಾರ ತಾನು ಮಾರಾಟ ಮಾಡಿದ ಷೇರುಗಳ ಮೌಲ್ಯವನ್ನು ಹಿಂದಿರುಗಿಸಲು, ತೆರಿಗೆ ಜಾರಿ ನಿಲ್ಲಿಸಿ ಲಾಭಾಂಶ ವಶಪಡಿಸಿಕೊಳ್ಳಲು ಮತ್ತು ತೆರಿಗೆ ಮರುಪಾವತಿ ತಡೆಯುವಂತೆ ಕೇಳಿದೆ.
ಹೇಗ್‌ನಲ್ಲಿರುವ ಶಾಶ್ವತ ನ್ಯಾಯಾಲಯದ ಮಧ್ಯಸ್ಥಿಕೆ ನ್ಯಾಯಮಂಡಳಿಯ ಆದೇಶವನ್ನು ಭಾರತ ಪಾಲಿಸದಿದ್ದರೆ, ನ್ಯೂಯಾರ್ಕ್ ಕನ್ವೆನ್ಷನ್ ಎಂದು ಕರೆಯಲ್ಪಡುವ ಆರ್ಬಿಟ್ರಲ್ ತೀರ್ಪಿನ ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಾಗಲಿದೆ. ಈ ವಿಷಯದ ಬಗ್ಗೆ ತಿಳಿದವರು, ಭಾರತ ಸರ್ಕಾರದ ಮುಂದಿರುವ ಆಯ್ಕೆಗಳು ತುಂಬ ಸೀಮಿತವಾಗಿವೆ ಎಂದು ಹೇಳಿದರು.