ETV Bharat / business

ಕ್ರಿಪ್ಟೋಕರೆನ್ಸಿಗೆ ಕಾನೂನು ಅನುಮತಿ ನೀಡುವಿಕೆ ಪರಿಶೀಲನೆಗೆ ಸಮಿತಿ ರಚನೆ - ಭಾರತದಲ್ಲಿ ವರ್ಚುವಲ್ ಕರೆನ್ಸಿ

ಬ್ಲಾಕ್‌ಚೇನ್ ಒಂದು ಹೊಸ ಉದಯೋನ್ಮುಖ ತಂತ್ರಜ್ಞಾನವಾಗಿದೆ. ಕ್ರಿಪ್ಟೋಕರೆನ್ಸಿ ಡಿಜಿಟಲ್ ಕರೆನ್ಸಿಯ ಒಂದು ರೂಪವಾಗಿದೆ. ನಾವು ಯಾವಾಗಲೂ ಹೊಸ ಆಲೋಚನೆಗಳನ್ನು ಮುಕ್ತ ಮನಸ್ಸಿನಿಂದ ಮೌಲ್ಯಮಾಪನ ಮಾಡಬೇಕು, ಅನ್ವೇಷಿಸಬೇಕು ಮತ್ತು ಪ್ರೋತ್ಸಾಹಿಸಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಕ್ರಿಪ್ಟೋಕರೆನ್ಸಿಯ ಬಗ್ಗೆ ಮಾಧ್ಯಮ ಪ್ರಶ್ನೆಗೆ ಉತ್ತರಿಸುವಾಗ ಠಾಕೂರ್ ಹೇಳಿದರು.

Cryptocurrency
Cryptocurrency
author img

By

Published : Mar 7, 2021, 8:36 PM IST

ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಬಿಟ್‌ಕಾಯಿನ್‌ ಮತ್ತು ಇತರ ವರ್ಚುವಲ್ ಕರೆನ್ಸಿ ಕುರಿತಾದ ಕಳವಳಕಾರಿ ವರದಿಗಳ ನಡುವೆಯೂ ಕಾನೂನಿನ ಚೌಕಟ್ಟಿನೊಳಗೆ ಕ್ರಿಪ್ಟೋಕರೆನ್ಸಿ ಪರಿಶೀಲಿಸಲು ಸರ್ಕಾರವು ಉನ್ನತ ಮಟ್ಟದ ಸಚಿವರ ಸಮಿತಿ ರಚಿಸಿದೆ. ಅದರ ಆಧಾರದ ಮೇಲೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ ಠಾಕೂರ್ ಅವರು ಅದರ ಶಿಫಾರಸುಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪವನ್ನು ಮಂಡಿಸಬಹುದು.

ಬ್ಲಾಕ್‌ಚೇನ್ ಒಂದು ಹೊಸ ಉದಯೋನ್ಮುಖ ತಂತ್ರಜ್ಞಾನವಾಗಿದೆ. ಕ್ರಿಪ್ಟೋಕರೆನ್ಸಿ ಡಿಜಿಟಲ್ ಕರೆನ್ಸಿಯ ಒಂದು ರೂಪವಾಗಿದೆ. ನಾವು ಯಾವಾಗಲೂ ಹೊಸ ಆಲೋಚನೆಗಳನ್ನು ಮುಕ್ತ ಮನಸ್ಸಿನಿಂದ ಮೌಲ್ಯಮಾಪನ ಮಾಡಬೇಕು, ಅನ್ವೇಷಿಸಬೇಕು ಮತ್ತು ಪ್ರೋತ್ಸಾಹಿಸಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಕ್ರಿಪ್ಟೋಕರೆನ್ಸಿಯ ಬಗ್ಗೆ ಮಾಧ್ಯಮ ಪ್ರಶ್ನೆಗೆ ಉತ್ತರಿಸುವಾಗ ಠಾಕೂರ್ ಹೇಳಿದರು.

ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗೆ ಟಾಯ್ಲೆಟ್ ಪೈಪ್‌ಲೈನ್ ಜೋಡಣೆ!

ಕ್ರಿಪ್ಟೋಕರೆನ್ಸಿಯನ್ನು ಭಾರತದಲ್ಲಿ ಕಾನೂನುಬದ್ಧ ಮತ್ತು ಕಾನೂನಿನ ಚೌಕಟ್ಟಾಗಿ ಸ್ವೀಕರಿಸಲು ಕೇಂದ್ರ ಸರ್ಕಾರವು ಉನ್ನತ ಮಟ್ಟದ ಅಂತರ್ ಸಚಿವರ ಸಮಿತಿ ರಚಿಸಿದೆ ಎಂದು ಅವರು ಹೇಳಿದರು.

ಸಮಿತಿಯ ಶಿಫಾರಸುಗಳ ಬಗ್ಗೆ ಸರ್ಕಾರವು ನಿರ್ಧಾರ ತೆಗೆದುಕೊಳ್ಳುತ್ತದೆ (ಕ್ರಿಪ್ಟೋಕರೆನ್ಸಿಯ ಬಗ್ಗೆ) ಮತ್ತು ಶಾಸಕಾಂಗದ ಪ್ರಸ್ತಾಪವು ಯಾವುದಾದರೂ ಇದ್ದರೆ, ಸರಿಯಾದ ಪ್ರಕ್ರಿಯೆಯ ನಂತರ ಸಂಸತ್ತಿನಲ್ಲಿ ಪರಿಚಯಿಸಲಾಗುವುದು. ಈ ವಿಷಯದ ಬಗ್ಗೆ ನಿಮ್ಮ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ನಾನು ಸ್ವಾಗತಿಸುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.