ETV Bharat / business

3.7 ಕೋಟಿ ನೌಕರರ ವಾಹನೋದ್ಯಮ ತಲ್ಲಣ​: ಬದಲಿ ಕೆಲಸಕ್ಕೆ ಸಿದ್ಧರಾಗಿ!

author img

By

Published : Aug 2, 2019, 11:53 PM IST

ಉದ್ಯಮದ ವಿಶ್ಲೇಷಕರ ಪ್ರಕಾರ, ತಿಂಗಳಿಂದ ತಿಂಗಳಿಗೆ ಮಾರಾಟದ ಬೆಳವಣಿಗೆ ಕುಂಠಿತಗೊಳ್ಳುತ್ತಾ ಹೋದರೆ ಮತ್ತು ದಾಸ್ತಾನು ರಾಶಿ ಹಾಗೇ ಉಳಿದರೆ ಕಂಪನಿಗಳು ಉತ್ಪಾದನೆಯನ್ನು ಮೊಟಕುಗೊಳಿಸುತ್ತವೆ. ಅಂತಿಮವಾಗಿ ಕಾರ್ಖಾನೆ ಮತ್ತು ಚಿಲ್ಲರೆ ಮಟ್ಟದಲ್ಲಿ ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ. ಮಳೆಗಾಲದ ನಂತರ ಮತ್ತು ಹಬ್ಬದ ತಿಂಗಳುಗಳಲ್ಲಿ ಮಾರಾಟ ಹೆಚ್ಚಳವಾಗದಿದ್ದರೇ ಉದ್ಯೋಗ ನಷ್ಟ ಉಂಟಾಗುವ ಸಾಧ್ಯತೆ ಇದೆ. ಆಟೋ ಉದ್ಯಮ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 3.7 ಕೋಟಿ ಉದ್ಯೋಗಿಗಳಿಗೆ ಆಸೆರೆಯಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ/ ಮುಂಬೈ: ಕಳೆದ ಕೆಲವು ತಿಂಗಳಿಂದ ಭಾರತದ ಆಟೋಮೊಬೈಲ್​​ ಕ್ಷೇತ್ರ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಮಾರಾಟ ದಾಖಲೆಯ ಕುಸಿತ ಕಂಡಿದೆ.

ಆಟೋ ಉದ್ಯಮವನ್ನು ನೆಚ್ಚಿಕೊಂಡಿರುವ ಸಣ್ಣ ಉದ್ಯಮ ಕಂಪನಿಗಳು ನಷ್ಟಕ್ಕೆ ಒಳಗಾಗಿವೆ. ವಾಹನಗಳ ಮಾರಾಟ ಕ್ಷೀಣಿಸುತ್ತಿದ್ದಂತೆ ಉದ್ಯೋಗಗಳ ಸಂಖ್ಯೆ ಕಡಿತಕ್ಕೆ ಕಂಪನಿಗಳು ಮುಂದಾಗುವ ಆತಂಕ ಸೃಷ್ಟಿಯಾಗಿದೆ.

ಆಟೋ ಉದ್ಯಮ ಕುಸಿಯಲು ಕಾರಣ?

ಗ್ರಾಹಕರ ಖರೀದಿ ಸಾಮರ್ಥ್ಯ ಕಡಿಮೆ ಇರುವುದರಿಂದಾಗಿ ವಾಹನ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, 2018ರ ಜೂನ್​ನಿಂದಲೂ ವಾಹನ ಮಾರಾಟ ಇಳಿಮುಖವಾಗುತ್ತಾ ಸಾಗುತ್ತಿದೆ. ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾದ ಮಾರಾಟ ಶೇ 36.3ರಷ್ಟು ಇಳಿಕೆಯಾಗಿದೆ.

ಯಾವ್ಯಾವ ಕಂಪನಿಗಳ ಮಾರಾಟಕ್ಕೆ ಹೊಡೆತ?

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್​ ಮಾರಾಟದಲ್ಲಿ ಶೇ 10ರಷ್ಟು ಕ್ಷೀಣಿಸಿದೆ. ಯುಟಿಲಿಟಿ ವಾಹನ ತಯಾರಿಕೆಯಲ್ಲಿ ಮುಂದಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿ ವಾಹನಗಳ ಮಾರಾಟವು ಶೇ 16ರಷ್ಟು ಇಳಿಕೆ ಕಂಡಿದೆ. ಹೋಂಡಾ ಕಾರ್ಸ್​ ಇಂಡಿಯಾದ ಮಾರಾಟ ಶೇ 49ರಷ್ಟು ಕುಸಿದಿದೆ. ಜೊತೆಗೆ ದ್ವಿಚಕ್ರ ವಾಹನ ವಿಭಾಗದಲ್ಲಿ ಇದೇ ರೀತಿಯ ಇಳಿಕೆ ಕಂಡು ಬಂದಿದ್ದು, ಬಜಾಜ್ ಶೇ 13ರಷ್ಟು ಹಾಗೂ ಟಿವಿಎಸ್​ ಮೋಟಾರ್ ಶೇ 15.72ರಷ್ಟು ಮಾರಾಟ ನಕಾರಾತ್ಮಕ ಹಾದಿಯಲ್ಲಿದೆ.

ಮಾರುಕಟ್ಟೆ ವಿಶ್ಲೇಷಕರೇನು ಹೇಳ್ತಾರೆ?

ಉದ್ಯಮದ ವಿಶ್ಲೇಷಕರ ಪ್ರಕಾರ, ತಿಂಗಳಿಂದ ತಿಂಗಳಿಗೆ ಮಾರಾಟದ ಬೆಳವಣಿಗೆ ಕುಂಠಿತಗೊಳ್ಳುತ್ತಾ ಹೋದರೆ ಮತ್ತು ದಾಸ್ತಾನು ರಾಶಿ ಹಾಗೇ ಉಳಿದರೆ ಕಂಪನಿಗಳು ಉತ್ಪಾದನೆಯನ್ನು ಮೊಟಕುಗೊಳಿಸುತ್ತವೆ. ಅಂತಿಮವಾಗಿ ಕಾರ್ಖಾನೆ ಮತ್ತು ಚಿಲ್ಲರೆ ಮಟ್ಟದಲ್ಲಿ ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ. ಮಳೆಗಾಲದ ನಂತರ ಮತ್ತು ಹಬ್ಬದ ತಿಂಗಳುಗಳಲ್ಲಿ ಮಾರಾಟ ಹೆಚ್ಚಳವಾಗದಿದ್ದರೆ ಉದ್ಯೋಗ ನಷ್ಟ ಉಂಟಾಗುವ ಸಾಧ್ಯತೆ ಇದೆ.

ಆಟೋ ಉದ್ಯಮ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 3.7 ಕೋಟಿ ಉದ್ಯೋಗಿಗಳಿಗೆ ಆಸರೆಯಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.