ETV Bharat / business

ಪಾಪರ್‌ ಪಾಕಿಸ್ತಾನ‌.. ಕತ್ತೆ, ಬೀದಿ ನಾಯಿ ಬಳಿಕ ಮೀನು ಮಾರಾಟಕ್ಕಿಳಿದ ಇಮ್ರಾನ್​ ಖಾನ್!! - Business News

ಪಾಕ್‌ನ ಸಮುದ್ರ ಸಂಪನ್ಮೂಲ ಮತ್ತಷ್ಟು ಕುಸಿಯುತ್ತದೆ ಎಂಬ ಭಯದಿಂದಾಗಿ ಪಿಎಫ್‌ಎಫ್ ಚೀನಾ ಹಡಗುಗಳ ಆಗಮನದ ವಿರುದ್ಧ ದೊಡ್ಡ ಅಭಿಯಾನ ಆರಂಭಿಸಲು ಘೋಷಿಸಿದೆ. ವರದಿಯ ಪ್ರಕಾರ, ಪಾಕಿಸ್ತಾನದ ಕರಾವಳಿ ಪಟ್ಟಣಗಳಲ್ಲಿ 2.5 ದಶಲಕ್ಷಕ್ಕೂ ಹೆಚ್ಚು ಜನರಿಗೆ ಮೀನುಗಾರಿಕೆ ಜೀವನೋಪಾಯವಾಗಿದೆ..

fishing
ಮೀನುಗಾರಿಕೆ
author img

By

Published : Sep 4, 2020, 6:23 PM IST

ಬೀಜಿಂಗ್​/ ಇಸ್ಲಮಾಬಾದ್​: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್ ಇತರೆ ರಾಷ್ಟ್ರಗಳ ಮುಂದೆ ಕೈಚಾಚಿ ನಿಂತಿದ್ದಾರೆ. ಆದರೆ, ಯಾವುದೇ ರಾಷ್ಟ್ರಗಳು ಅನುದಾನ ನೀಡಲು ಮುಂದೆ ಬರುತ್ತಿಲ್ಲ. ಕೊರೊನಾ ಬಳಿಕ ಉಂಟಾದ ಮತ್ತಷ್ಟು ಹಣಕಾಸಿನ ಅಭಾವ ಸರಿದೂಗಿಸಲು ಚೀನಾ ನಾವಿಕರಿಗೆ ತನ್ನ ಸಮುದ್ರ ಗಡಿಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡಿದೆ.

ಈ ಹಿಂದೆ ಚೀನಾಗೆ ಪಾಕ್ ಕತ್ತೆ ರಫ್ತು ಮಾಡಿತ್ತು. ಬಳಿಕ ಚೀನಾ ಹಾಗೂ ಫಿಲಿಫೈನ್ಸ್​ಗಳಿಗೆ ಬೀದಿ ನಾಯಿ ರಫ್ತು ಮಾಡಲು ನಿರ್ಧರಿಸಿತ್ತು. ತನ್ನ ನೆರೆಯ ಚೀನಾ ಜೊತೆಗೆ ಬಾಂಧವ್ಯ ವೃದ್ಧಿಸಿಕೊಳ್ಳಲು ಪಾಕಿಸ್ತಾನ, ದೇಶದ ವಿಶೇಷ ಆರ್ಥಿಕ ವಲಯದಲ್ಲಿ ಚೀನಾದ ಹಡಗುಗಳಿಗೆ ಮೀನುಗಾರಿಕೆ ಮಾಡಲು ಅವಕಾಶ ನೀಡಿದೆ.

ಆಗಸ್ಟ್ ಮೊದಲ ವಾರದಲ್ಲಿ ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳ ಹೊರಗಿನ ಆರ್ಥಿಕ ವಲಯಕ್ಕೆ ಕನಿಷ್ಠ 20 ಚೀನಾದ ಆಳ ಸಮುದ್ರದ ಟ್ರಾಲರ್‌ಗಳು ಆಗಮಿಸಿದ್ದಾರೆ. ಈ ಭಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದರ ಪರಿಣಾಮವಾಗಿ ಚೀನಾದ ಮೆಗಾ ಅಣೆಕಟ್ಟೆಗಳ ಯೋಜನೆಗೆ ತನ್ನ ಭೂಮಿಯನ್ನು ಮಾರಾಟ ಮಾಡಿದ ನಂತರ ಬೀಜಿಂಗ್‌ಗೆ ಸಮುದ್ರಗಳನ್ನು ಮಾರಾಟ ಮಾಡುವ ಇಸ್ಲಾಮಾಬಾದ್ ನಿರ್ಧಾರವನ್ನು ವಿರೋಧಿಸಲು ಪಾಕಿಸ್ತಾನ ಮೀನುಗಾರ ವೇದಿಕೆ (ಪಿಎಫ್‌ಎಫ್) ಭಾರಿ ಪ್ರತಿಭಟನೆ ನಡೆಸಿದೆ.

ಇದರಿಂದ ಪಾಕಿಸ್ತಾನದ ಸಮುದ್ರ ಸಂಪನ್ಮೂಲ ಮತ್ತಷ್ಟು ಕುಸಿಯುತ್ತದೆ ಎಂಬ ಭಯದಿಂದಾಗಿ ಪಿಎಫ್‌ಎಫ್ ಚೀನಾ ಹಡಗುಗಳ ಆಗಮನದ ವಿರುದ್ಧ ದೊಡ್ಡ ಅಭಿಯಾನ ಆರಂಭಿಸಲು ಘೋಷಿಸಿದೆ. ವರದಿಯ ಪ್ರಕಾರ, ಪಾಕಿಸ್ತಾನದ ಕರಾವಳಿ ಪಟ್ಟಣಗಳಲ್ಲಿ 2.5 ದಶಲಕ್ಷಕ್ಕೂ ಹೆಚ್ಚು ಜನರಿಗೆ ಮೀನುಗಾರಿಕೆ ಜೀವನೋಪಾಯವಾಗಿದೆ. ಪಾಕಿಸ್ತಾನದ ಮೀನುಗಾರರು ಚೀನಿಯರು ತಮ್ಮ ನೀರಿನಲ್ಲಿ ಮೀನು ಹಿಡಿಯುವುದನ್ನು ಬಯಸುವುದಿಲ್ಲ.

ಅವರೆಲ್ಲ ಸಾಮಾನ್ಯವಾಗಿ ಆಳವಾದ ನೀರಿನಲ್ಲಿ ಇಳಿಯಲು ಸಾಧ್ಯವಾಗದ ಸಣ್ಣ ದೋಣಿಗಳನ್ನು ಬಳಸುವುದರಿಂದ, ಸುಸಜ್ಜಿತವಾದ ಚೀನಿ ಹಡಗುಗಳ ಬಗ್ಗೆ ಅವರಿಗೆ ಹೆದರಿಕೆ ಇದೆ. ಉತ್ತಮ ಮೀನುಗಾರಿಕೆಯಿಂದ ಸ್ಥಳೀಯರು ವಂಚಿತರಾಗಲಿದ್ದಾರೆ.

ಈ ಹಿಂದೆ, ನೀಲಂ-ಝೇಲಂ ನದಿಗೆ ಮೆಗಾ ಅಣೆಕಟ್ಟೆಗಳ ನಿರ್ಮಾಣ ವಿರೋಧಿಸಿ ಪಾಕಿಸ್ತಾನದ ಮುಜಫರಾಬಾದ್ ಹಾಗೂ ಕಾಶ್ಮೀರ ಕಣಿವೆ ವ್ಯಾಪ್ತಿಯಲ್ಲಿ ಕಳೆದ ವಾರ ಬೃಹತ್ ಪ್ರತಿಭಟನೆ ಮತ್ತು ಟಾರ್ಚ್ ರ್ಯಾಲಿ ನಡೆದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.