ETV Bharat / business

ಕೊರೊನಾ ವೈರಸ್​ ಮೂಲ ಚೀನಾ ಆರ್ಥಿಕತೆ ಈಗ ಭರ್ಜರಿ ಪ್ರಗತಿ!

author img

By

Published : Jan 18, 2021, 5:42 PM IST

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ 2.3ರಷ್ಟು ಏರಿಕೆಯಾಗಿದ್ದು, 2020ರಲ್ಲಿ 15.42 ಟ್ರಿಲಿಯನ್ ಡಾಲರ್‌ಗೆ ವಿಸ್ತರಣೆಯಾಗಿದೆ ಎಂದು ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ಎನ್‌ಬಿಎಸ್) ಸೋಮವಾರ ಬಿಡುಗಡೆ ಮಾಡಿದ ಮಾಹಿತಿಯಿಂದ ತಿಳಿದುಬಂದಿದೆ.

China
ಚೀನಾ

ಬೀಜಿಂಗ್: ಕೊರೊನಾ ವೈರಸ್ ಮೂಲವಾಗಿರುವ ಚೀನಾ ಭರ್ಜರಿ ಆರ್ಥಿಕತೆ ದಾಖಲಿಸಿದೆ.

ಸಾಂಕ್ರಾಮಿಕ ರೋಗದಿಂದ ಮೊದಲ ಬಾರಿಗೆ ಹಾನಿಗೊಳಗಿ ಅದರ ಪ್ರಭಾವದಿಂದ ಚೇತರಿಸಿಕೊಳ್ಳುವ ಮುಂಚೆಯೇ ಇದ್ದ ಚೀನಾದ ಆರ್ಥಿಕತೆಯು 2020ರಲ್ಲಿ ಶೇ 2.3ರಷ್ಟು ಏರಿಕೆಯಾಗಿದೆ. 45 ವರ್ಷಗಳಲ್ಲಿ ಅತ್ಯಂತ ಕಡಿಮೆ ವಾರ್ಷಿಕ ಬೆಳವಣಿಗೆಯ ದರ ದಾಖಲಿಸಿದೆ.

ಸ್ಥಳೀಯ ಕರೆನ್ಸಿಯಲ್ಲಿ ಜಿಡಿಪಿ 100 ಟ್ರಿಲಿಯನ್ ಯುವಾನ್ (15.42 ಟ್ರಿಲಿಯನ್) ಮಿತಿ ಮೀರಿ 101.5986 ಟ್ರಿಲಿಯನ್ ಯುವಾನ್‌ಗೆ ತಲುಪಿದೆ ಎಂದು ಹೇಳಿದೆ.

ವುಹಾನ್‌ನಲ್ಲಿ ಮಾರಕ ಕೊರೊನಾ ವೈರಸ್ ಹೊರಹೊಮ್ಮಿದ ನಂತರ ಲಾಕ್‌ಡೌನ್‌ಗೆ ಮೋರೆಹೋದ ಬಳಿಕ 2020ರ ಮೊದಲ ತ್ರೈಮಾಸಿಕದಲ್ಲಿ ಶೇ 6.8ರಷ್ಟು ಕುಸಿತ ಅನುಭವಿಸಿದ ಚೀನಾದ ಆರ್ಥಿಕತೆ, ಕೋವಿಡ್ -19 ಅನ್ನು ತ್ವರಿತವಾಗಿ ಎದುರಿಸಿ ಚೇತರಿಕೆ ಕಂಡಿತು. ಆದರೆ, ವೈರಸ್ ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿದ್ದು, ಭಾರತ ಸೇರಿದಂತೆ ವಿಶ್ವದಾದ್ಯಂತದ ಎಲ್ಲಾ ಪ್ರಮುಖ ಆರ್ಥಿಕತೆಗಳನ್ನು ಹೊಡೆದುರುಳಿಸಿದೆ.

ಇದನ್ನೂ ಓದಿ: ಮೋದಿ ತನ್ನ ಉದ್ಯಮಿ ಸ್ನೇಹಿತರ 8.75 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ: ರಾಗಾ

ಕಟ್ಟುನಿಟ್ಟಾದ ವೈರಸ್ ನಿಯಂತ್ರಣ ಕ್ರಮಗಳು ಮತ್ತು ವ್ಯವಹಾರಗಳಿಗೆ ತುರ್ತು ಪರಿಹಾರದ ನೆರವಿನಿಂದಾಗಿ ಚೀನಾದ ಆರ್ಥಿಕತೆಯು ಸ್ಥಿರವಾದ ಚೇತರಿಕೆ ಕಾಣಿಸುತ್ತಿದೆ. 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ವರ್ಷಕ್ಕೆ ಶೇ 6.5ರಷ್ಟು ವಿಸ್ತರಿಸಿದೆ. ಇದು ಮೂರನೇ ತ್ರೈಮಾಸಿಕದಲ್ಲಿ ಶೇ 4.9ರಷ್ಟು ಬೆಳವಣಿಗೆಗಿಂತ ವೇಗವಾಗಿದೆ ಎಂದು ಎನ್​ಬಿಎಸ್ ತಿಳಿಸಿದೆ.

ದೇಶದ ಆರ್ಥಿಕ ಕಾರ್ಯಾಚರಣೆಯು ಉದ್ಯೋಗ ಮತ್ತು ಜನರ ಯೋಗಕ್ಷೇಮದೊಂದಿಗೆ ಸ್ಥಿರವಾಗಿ ಚೇತರಿಸಿಕೊಂಡಿದೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಪ್ರಮುಖ ಕಾರ್ಯಗಳು ನಿರೀಕ್ಷೆಗಿಂತ ಉತ್ತಮವಾಗಿ ಪೂರ್ಣಗೊಂಡಿವೆ. ಭಾಗಶಃ ಚೀನಾದ ಜಾಗತಿಕ ವೈದ್ಯಕೀಯ ಉತ್ಪಾದನೆ ಮತ್ತು ರಫ್ತು ಸರಬರಾಜು ಬೆಳವಣಿಗೆಗೆ ಕಂಡಿದೆ.

ಚೀನಾದ ಉದ್ಯೋಗ ಮಾರುಕಟ್ಟೆ ಶೇ 5.6ಕ್ಕೆ ಏರಿದೆ. ಆದರೆ ಸರ್ಕಾರದ ವಾರ್ಷಿಕ ಗುರಿ ಶೇ 6ರಷ್ಟಿದೆ. 2020ರಲ್ಲಿ ಒಟ್ಟು 11.86 ಮಿಲಿಯನ್ ಹೊಸ ನಗರ ಉದ್ಯೋಗಗಳು ಸೃಷ್ಟಿಸಲಾಗಿದ್ದು, ಇಡೀ ವರ್ಷ ನಿಗದಿಪಡಿಸಿದ ಗುರಿಯ ಶೇ 131.8ರಷ್ಟು ಪೂರ್ಣಗೊಳಿಸಲಾಗಿದೆ ಎಂದು ಎನ್​ಬಿಎಸ್ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.