ETV Bharat / business

ಕೇಂದ್ರದ ಬಳಿ 48,000 ಕೋಟಿ ರೂ. ರಾಜ್ಯಗಳ ಜಿಎಸ್​ಟಿ ಪರಿಹಾರ ನಿಧಿ ಬಾಕಿ.. - ಜಿಎಸ್​ಟಿ ಬಾಕಿ

ಡಿಸೆಂಬರ್-ಜನವರಿ ಅವಧಿಯಲ್ಲಿ ರಾಜ್ಯಗಳಿಗೆ ಪಾವತಿಸದ ಜಿಎಸ್​ಟಿ ಪರಿಹಾರ ಬಾಕಿ ಸುಮಾರು 34,000 ಕೋಟಿ ರೂ.ಯಷ್ಟಿದೆ ಎಂದು ಮೂಲಗಳು ಈಟಿವಿ ಭಾರತ್​ಗೆ ತಿಳಿಸಿವೆ. ಸುಮಾರು 48,000 ಕೋಟಿ ರೂ. ಬಾಕಿ ಮೊತ್ತ ಅಕ್ಟೋಬರ್-ನವೆಂಬರ್ ಮತ್ತು ಡಿಸೆಂಬರ್- ಜನವರಿ ಅವಧಿಗೆ ಸಂಬಂಧಿಸಿದೆ.

GST Compensation
ಜಿಎಸ್​ಟಿ ಪರಿಹಾರ
author img

By

Published : Apr 4, 2020, 4:44 PM IST

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಪರಿಹಾರ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಿ ಕೇಂದ್ರ ಸರ್ಕಾರವು ಕಳೆದ ಹಣಕಾಸು ವರ್ಷದ ಅಕ್ಟೋಬರ್-ಜನವರಿ ಅವಧಿಯಲ್ಲಿ ರಾಜ್ಯ ಸರ್ಕಾರಗಳಿಗೆ ನೀಡಬೇಕಿದ್ದ ಸುಮಾರು 48,000 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

2017ರ ಜುಲೈ ಜಿಎಸ್​ಟಿ ಅನುಷ್ಠಾನದ ಪರಿಹಾರ ಕಾನೂನು ಅಡಿ ತಮ್ಮ ಆದಾಯ ಸಂಗ್ರಹಣೆಯಲ್ಲಿ ಶೇ.14ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸದ ರಾಜ್ಯಗಳಿಗೆ ಐದು ವರ್ಷಗಳ ಅವಧಿಗೆ ಕೇಂದ್ರ, ಕಾನೂನು ಬದ್ಧವಾಗಿ ಪರಿಹಾರ ನೀಡಬೇಕು. ಪ್ರತಿ ರಾಜ್ಯಕ್ಕೆ ಪರಿಹಾರದ ಪ್ರಮಾಣವನ್ನು 2015-16ನೇ ಸಾಲಿನ ಬೇಸ್ ಇಯರ್​ ಆದಾಯ ಸಂಗ್ರಹಣೆ ಗಣನೆಗೆ ತೆಗೆದುಕೊಳ್ಳಬೇಕು.

ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಜಿಎಸ್​ಟಿ ಪರಿಹಾರ ಕಾನೂನಿನಡಿಯಲ್ಲಿ ರಾಜ್ಯಗಳಿಗೆ 14,000 ಕೋಟಿ ರೂ. ಬಾಕಿ ಉಳಿದಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ಡಿಸೆಂಬರ್-ಜನವರಿ ಅವಧಿಯಲ್ಲಿ ರಾಜ್ಯಗಳಿಗೆ ಪಾವತಿಸದ ಜಿಎಸ್​ಟಿ ಪರಿಹಾರ ಬಾಕಿ ಸುಮಾರು 34,000 ಕೋಟಿ ರೂ.ಯಷ್ಟಿದೆ ಎಂದು ಮೂಲಗಳು ಈಟಿವಿ ಭಾರತ್​ಗೆ ತಿಳಿಸಿವೆ. ಸುಮಾರು 48,000 ಕೋಟಿ ರೂ. ಬಾಕಿ ಮೊತ್ತ ಅಕ್ಟೋಬರ್-ನವೆಂಬರ್ ಮತ್ತು ಡಿಸೆಂಬರ್- ಜನವರಿ ಅವಧಿಗೆ ಸಂಬಂಧಿಸಿದೆ.

2017ರ ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆಯ ಸೆಕ್ಷನ್ 7 (2)ರ ಪ್ರಕಾರ, ಪರಿಹಾರದ ಮೊತ್ತವನ್ನು ತಾತ್ಕಾಲಿಕವಾಗಿ ಲೆಕ್ಕ ಹಾಕಲಾಗುತ್ತದೆ ಮತ್ತು ಪ್ರತಿ ಎರಡು ತಿಂಗಳ ಅವಧಿಯ ಕೊನೆಯಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಕಂಟ್ರೋಲರ್ ಮತ್ತು ಆಡಿಟರ್-ಜನರಲ್ ಆಫ್ ಇಂಡಿಯಾ (ಸಿಎಜಿ) ಲೆಕ್ಕ ಪರಿಶೋಧಿಸಿದಂತೆ ಅಂತಿಮ ಆದಾಯದ ಅಂಕಿ-ಅಂಶಗಳನ್ನು ಸ್ವೀಕರಿಸಿದ ನಂತರ ಹಣಕಾಸಿನ ವರ್ಷದ ಅಂತಿಮ ಪರಿಹಾರ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.