ETV Bharat / business

ಮೋದಿ ಸರ್ಕಾರದಿಂದ ಬರಲಿದೆ ಮತ್ತೊಂದು ಸುತ್ತಿನ ಆರ್ಥಿಕ ಉತ್ತೇಜನ ಪ್ಯಾಕೇಜ್!

ಸಾಂಕ್ರಾಮಿಕ ರೋಗದ ಮಧ್ಯೆಯೂ ಮುಂದಿನ ದಿನಗಳಲ್ಲಿನ ಕ್ರಮಗಳ ಬಗ್ಗೆ ಹಣಕಾಸು ಇಲಾಖೆಗೆ ಸಲಹೆಗಳು ಬಂದಿವೆ. ಈ ಕುರಿತು ಸಚಿವಾಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಇದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಲಿದ್ದಾರೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

tarun bajaj
ತರುಣ್ ಬಜಾಜ್
author img

By

Published : Nov 3, 2020, 8:21 PM IST

ನವದೆಹಲಿ: ಹಣಕಾಸು ಸಚಿವಾಲಯ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಹೊಸ ಆರ್ಥಿಕ ಉತ್ತೇಜನ ಪ್ಯಾಕೇಜ್​ ಘೋಷಿಸಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗದ ಮಧ್ಯೆಯೂ ಮುಂದಿನ ದಿನಗಳಲ್ಲಿನ ಕ್ರಮಗಳ ಬಗ್ಗೆ ಹಣಕಾಸು ಇಲಾಖೆಗೆ ಸಲಹೆಗಳು ಬಂದಿವೆ. ಈ ಕುರಿತು ಸಚಿವಾಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಇದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಲಿದ್ದಾರೆ ಎಂದರು.

ಆರ್ಥಿಕತೆಯನ್ನು ಉತ್ತೇಜಿಸಲು ಮುಂದಿನ ಕ್ರಮಗಳಿಗಾಗಿ ಕೇಂದ್ರ ಮುಕ್ತವಾಗಿದೆ ಎಂದು ಹಣಕಾಸು ಸಚಿವರು ಹೇಳಿದ ಒಂದು ವಾರದ ನಂತರ ಬಜಾಜ್ ಈ ಹೇಳಿಕೆ ನೀಡಿದ್ದಾರೆ.

ಕಳೆದ ತಿಂಗಳು ಹಣಕಾಸು ಸಚಿವರು, 'ಕೇಂದ್ರವು ಮತ್ತೊಂದು ಆರ್ಥಿಕ ಉತ್ತೇಜನ ಪ್ಯಾಕೇಜ್ ಆಯ್ಕೆಯನ್ನು ಹಿಡಿದಿಟ್ಟಿಲ್ಲ' ಎಂದು ಹೇಳಿದ್ದರು.

ಮೇ ತಿಂಗಳಲ್ಲಿ ಸರ್ಕಾರವು 20 ಲಕ್ಷ ಕೋಟಿ ರೂ. 'ಆತ್ಮ ನಿರ್ಭರ ಭಾರತ' ಆರ್ಥಿಕ ಪ್ಯಾಕೇಜ್ ಘೋಷಿಸಿತ್ತು. ಇದುವರೆಗಿನ ಎರಡೂ ಸುತ್ತುಗಳ ಉತ್ತೇಜನವು ಉದ್ಯಮ ತಜ್ಞರಿಂದ ಮೆಚ್ಚುಗೆ ಪಡೆದುಕೊಂಡಿದ್ದರೂ ಬೇಡಿಕೆ ಹೆಚ್ಚಿಸುವ ದೃಷ್ಟಿಯಿಂದ ಅವುಗಳು ಅಸಮರ್ಪಕವೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಮೂಡಿಸ್​ ವರದಿಯ ಪ್ರಕಾರ, ಎರಡನೇ ಸುತ್ತಿನ ಹಣಕಾಸಿನ ಉತ್ತೇಜನವು 2021ರ ಆರ್ಥಿಕ ವರ್ಷದ ನೈಜ ಜಿಡಿಪಿ ಮುನ್ಸೂಚನೆಯ ಕೇವಲ 0.2 ಪ್ರತಿಶತದಷ್ಟು ಇರಬಹುದು. ಎರಡು ಸುತ್ತಿನ ಉತ್ತೇಜನವು ಸರ್ಕಾರದ ನೇರ ಖರ್ಚಿನಲ್ಲಿ ಜಿಡಿಪಿಯ ಶೇ. 1.2ರಷ್ಟು ಇರಬಹುದು ಎಂದು ಅಂದಾಜಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.