ನವದೆಹಲಿ: ಕೇಂದ್ರ ಸರ್ಕಾರವು ಆರ್ಥಿಕ ಉತ್ತೇಜನಾ ಕೊಡುಗೆಗಳ ಭಾಗವಾಗಿ, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) 20,000 ಕೋಟಿ ರೂ. ಅಧೀನ ಸಾಲ ಖಾತರಿ ಯೋಜನೆಯನ್ನು ಪ್ರಾರಂಭಿಸಿದೆ.
ಆತ್ಮನಿರ್ಭರ ಭಾರತ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ ಘೋಷಿಸಲಾದ ಈ ಯೋಜನೆಗೆ ಬುಧವಾರ ಎಂಎಸ್‌ಎಂಇಗಳ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಟ್ವಿಟ್ಟರ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಕೆಲವು ಖಾಸಗಿ ಬ್ಯಾಂಕ್ಗಳು ಮಂಡಳಿಯಲ್ಲಿವೆ ಎಂದು ಸಚಿವಾಲಯ ಹೇಳಿದೆ.
ತೀವ್ರ ಆರ್ಥಿಕ ಒತ್ತಡಕ್ಕೊಳಗಾದ ಎಂಎಸ್‌ಎಂಇಗಳಿಗೆ ಸರ್ಕಾರ ಮತ್ತೊಂದು ಸೌಲಭ್ಯ ನೀಡಿದೆ. ಉಪ ಸಾಲ ಯೋಜನೆ ಪ್ರಾರಂಭಿಸಲಾಗಿದೆ. ಅಗತ್ಯವಾದ ಎಲ್ಲಾ ತಯಾರಿಗಳನ್ನು ಮಾಡಲಾಗುತ್ತದೆ. ಎಲ್ಲಾ ಪಿಎಸ್‌ಯು ಬ್ಯಾಂಕ್ಗಳು ಮತ್ತು ಕೆಲವು ಪ್ರೈವೇಟ್ ಬ್ಯಾಂಕ್ಗಳು ಮಂಡಳಿಯಲ್ಲಿವೆ ಎಂದು ಹೇಳಿದೆ.
-
Govt. has given yet another facility for financially stressed MSMEs. The sub-debt scheme has been launched. All preparation is done. All PSU Banks and some Pvt Banks are on board. Contact your bank & be #msmetochampions. @FinMinIndia @DFS_India @CGTMSEOfficial
— Ministry of MSME (@minmsme) August 19, 2020 " class="align-text-top noRightClick twitterSection" data="
1/2 pic.twitter.com/zqGYfFwrVA
">Govt. has given yet another facility for financially stressed MSMEs. The sub-debt scheme has been launched. All preparation is done. All PSU Banks and some Pvt Banks are on board. Contact your bank & be #msmetochampions. @FinMinIndia @DFS_India @CGTMSEOfficial
— Ministry of MSME (@minmsme) August 19, 2020
1/2 pic.twitter.com/zqGYfFwrVAGovt. has given yet another facility for financially stressed MSMEs. The sub-debt scheme has been launched. All preparation is done. All PSU Banks and some Pvt Banks are on board. Contact your bank & be #msmetochampions. @FinMinIndia @DFS_India @CGTMSEOfficial
— Ministry of MSME (@minmsme) August 19, 2020
1/2 pic.twitter.com/zqGYfFwrVA
ಸಿಜಿಎಸ್‌ಎಸ್‌ಡಿ ಅಡಿಯಲ್ಲಿ ಮಂಜೂರಾದ ಎಲ್ಲಾ ಸಾಲ ಸೌಲಭ್ಯಗಳಿಗೆ ಗ್ಯಾರಂಟಿ ಲಭ್ಯತೆ ದಿನಾಂಕದಿಂದ ಅಥವಾ 2021ರ ಮಾರ್ಚ್ 31ರಿಂದ ಗರಿಷ್ಠ 10 ವರ್ಷಗಳವರೆಗೆ ಈ ಯೋಜನೆ ಅನ್ವಯಿಸುತ್ತದೆ. ಇದಕ್ಕಾಗಿ 20,000 ಕೋಟಿ ರೂ. ಅಧೀನ ಖಾತರಿ ಮೊತ್ತ ಅನುಮೋದಿಸಲಾಗಿದೆ.
ಮಾರ್ಗಸೂಚಿಗಳ ಪ್ರಕಾರ, 2018ರ ಮಾರ್ಚ್ 31 ವೇಳೆಗೆ ಪ್ರಮಾಣಿತವಾದ ಮತ್ತು ನಿಯಮಿತವಾಗಿ ಕಾರ್ಯಾಚರಣೆಯಲ್ಲಿ ಇರುವ ಎಂಎಸ್ಎಂಇಗಳಿಗೆ ಹಾಗೂ 2018-19ರ ಮತ್ತು 2019 ಹಣಕಾಸು ವರ್ಷದಲ್ಲಿ ಎನ್‌ಪಿಎ ಖಾತೆಗಳು ಈ ಯೋಜನೆಗೆ ಅನ್ವಯಿಸುತ್ತವೆ.
ಆರ್‌ಬಿಐ ಮಾರ್ಗಸೂಚಿಗಳ ಅನ್ವಯ, ಸಾಲ ಪುನರ್ರಚನೆಗೆ ಅರ್ಹರಾಗಿರುವ ಎಸ್‌ಎಂಎ -2 ಮತ್ತು ಎನ್‌ಪಿಎ ಖಾತೆಗಳಡಿ 2020ರ ಏಪ್ರಿಲ್ 30ರ ವೇಳೆಗೆ ಒತ್ತಡಕ್ಕೊಳಗಾದ ಎಂಎಸ್‌ಎಂಇ ಘಟಕಗಳಿಗೆ ಸಾಲ ಸೌಲಭ್ಯ ಸಿಗಲಿದೆ.
ಎಂಎಸ್‌ಎಂಇ ಘಟಕದ ಪ್ರವರ್ತಕರಿಗೆ ಅವನ/ಅವಳ ಪಾಲಿನ 15 ಪ್ರತಿಶತದಷ್ಟು (ಈಕ್ವಿಟಿ ಜೊತೆಗೆ ಸಾಲ) ಅಥವಾ 75 ಲಕ್ಷ ರೂ.ಗಳಲ್ಲಿ ಯಾವುದು ಕಡಿಮೆಯೋ ಅದಕ್ಕೆ ಸಾಲ ನೀಡಲಾಗುವುದು ಎಂದು ಮಾರ್ಗಸೂಚಿ ತಿಳಿಸಿದೆ.
ಯೋಜನೆಯ ಅಡಿಯಲ್ಲಿ ಯಾವುದೇ ವಿಧದ ಶ್ಯೂರಿಟಿ ಅನ್ನು ಅನುಮೋದಿಸಲಾಗುತ್ತದೆ. ಟ್ರಸ್ಟ್‌ನಿಂದ ಮಂಜೂರಾದ ಅಸ್ತಿತ್ವದಲ್ಲಿರುವ ಸಾಲ / ಗ್ಯಾರಂಟಿಗಿಂತ ಹೆಚ್ಚಿನದಾಗಿರಬೇಕು. ಈ ಖಾತೆಗಳ ಎನ್‌ಪಿಎ ವರ್ಗೀಕರಣವು ಅಸ್ತಿತ್ವದಲ್ಲಿರುವ ಆದಾಯ ಗುರುತಿಸುವಿಕೆ ಮತ್ತು ಆಸ್ತಿ ವರ್ಗೀಕರಣ (ಐಆರ್‌ಎಸಿ) ಮಾನದಂಡಗಳ ಪ್ರಕಾರ ಇರಬೇಕೆಂಬ ನಿಯಮವಿದೆ.