ನವದೆಹಲಿ: ಕೇಂದ್ರ ಸರ್ಕಾರ ಐದು ನದಿಗಳ ಜೋಡಣೆಗೆ ಮುಂದಾಗಿದ್ದು, ಇದರಲ್ಲಿ ಕಾವೇರಿ - ಪೆನ್ನಾರ್ ನದಿ ಜೋಡಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಗೋದಾವರಿ - ಕೃಷ್ಣಾ ನದಿ ಜೋಡಣೆಯೂ ಇದರಲ್ಲಿ ಸೇರಿದೆ ಎಂದು ಬಜೆಟ್ ಮಂಡನೆ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪೆನ್ನಾರ್ ನದಿ ದಕ್ಷಿಣ ಭಾರತದ ನದಿಗಳಲ್ಲೊಂದಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಗಳಲ್ಲಿ ಉಗಮಿಸುವ ಇದು ಆಂಧ್ರ ಪ್ರದೇಶದ ಮೂಲಕ ಹರಿದು ಬಂಗಾಳ ಕೊಲ್ಲಿ ಸೇರುತ್ತದೆ.
ಚನ್ನಕೇಶವ ಬೆಟ್ಟದಲ್ಲಿ ಹುಟ್ಟುವ ಈ ನದಿಯ ಉದ್ದ ಸುಮಾರು 597 ಕಿ.ಮೀ. ಇದ್ದು, ಕರ್ನಾಟಕದಲ್ಲಿ 61 ಕಿ.ಮೀ. ಹರಿಯುತ್ತದೆ. ವಾಯುವ್ಯದಲ್ಲಿರುವ ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯಲ್ಲಿ 48 ಕಿ.ಮೀ. ದೂರ ಹರಿದು ಆಂಧ್ರ ಪ್ರದೇಶವನ್ನು ಪ್ರವೇಶಿಸುತ್ತದೆ. ಹಿಂದೂಪುರ ಮತ್ತು ಪಾವಗಡ ತಾಲೂಕಿನಲ್ಲಿ ಹರಿದು ನೆಲ್ಲೂರು ಜಿಲ್ಲೆ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ