ETV Bharat / business

ಕೊರೊನಾ ದಿಗ್ಬಂಧನ ಬಿಕ್ಕಟ್ಟು: ರೋಗಿಗಳ ಆಪ್ತರಕ್ಷಕ ಟೆಲಿಮೆಡಿಸಿನ್.. ಪಡೆಯುವುದು ಹೇಗೆ? - ಕೋವಿಡ್ 19

ಮೆಕಿನ್ಸೆ ಗ್ಲೋಬಲ್ ಇನ್​ಸ್ಟಿಟ್ಯೂಟ್ (ಎಂಜಿಐ) ಬಿಡುಗಡೆ ಮಾಡಿದ 2019ರ ವರದಿ ಅನ್ವಯ, ಟೆಲಿಮೆಡಿಸಿನ್ ತಂತ್ರಜ್ಞಾನದ ಅನುಷ್ಠಾನದಿಂದ ಪ್ರತಿವರ್ಷ ಭಾರತಕ್ಕೆ 4 ಬಿಲಿಯನ್​ನಿಂದ 5 ಬಿಲಿಯನ್ ಡಾಲರ್​ ಹಣ ಉಳಿತಾಯ ಆಗಬಹುದು. ದೇಶದ ಅರ್ಧದಷ್ಟು ಜನಸಂಖ್ಯೆಯ ಹೊರ ರೋಗಿಗಳೊಂದಿಗೆ ಸಮಾಲೋಚನೆ ನಡೆಸಬಹುದು ಎಂದು ಅಂದಾಜಿಸಿದೆ.

telemedicine in India
ಟೆಲಿಮೆಡಿಸಿನ್
author img

By

Published : Apr 9, 2020, 3:52 PM IST

ನವದೆಹಲಿ: ಕೋವಿಡ್ -19 ಸೋಂಕು ಹಬ್ಬಿದ ಬಳಿಕ ಲಾಕ್​ಡೌನ್ ವಿಧಿಸಿ ಜನರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು 21 ದಿನಗಳ ಕಾಲ ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ. ಇದರಿಂದ ಆಮೆ ವೇಗದಲ್ಲಿ ಸಾಗುತ್ತಿದ್ದ ಟೆಲಿಮೆಡಿಸಿನ್ ಸೇವೆಗೆ ಅಪಾರ ಜನಪ್ರಿಯತೆ ಬಂದಿದೆ.

ದೂರಸಂಪರ್ಕ ತಂತ್ರಜ್ಞಾನದ ಮೂಲಕ ರೋಗಿ ಅಥವಾ ಸಂಬಂಧಿಕರು ಟಿಲಿಫೋನ್ ಕರೆ, ಎಸ್​ಎಂಎಸ್​ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವೈದ್ಯರೊಂದಿಗೆ ಸಂವಹನ ನಡೆಸಿ ಚಿಕಿತ್ಸಾ ಸಲಹೆ ಪಡೆಯಬಹುದಾಗಿದೆ.

ಜನರು ವೈದ್ಯರೊಂದಿಗೆ ಸಮಾಲೋಚನೆಗಾಗಿ ಪ್ರಾಕ್ಟೊ, ಡಾಕ್ಸ್ಆ್ಯಪ್ ಮತ್ತು ಎಂಫೈನ್‌ನಂತಹ ಅಪ್ಲಿಕೇಷನ್‌ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಳ್ಳಬಹುದು. ಪ್ರತಿ ಸಮಾಲೋಚನೆಗೆ ಆರಂಭಿಕ ಬೆಲೆಯನ್ನು 199 ರೂ. ನಿಗದಿಪಡಿಸಿದೆ. ಸ್ಥಳೀಯ ವೈದ್ಯರೂ ಸಹ ಇವುಗಳ ಮುಖೇ ರೋಗಿಗಳೊಂದಿಗೆ ಸಂವಹನ ನಡೆಸಬಹುದು.

ಟೆಲಿಮೆಡಿಸಿನ್ ಸೇವೆ ಎಂದರೇನು?: ಟೆಲಿಮೆಡಿಸಿನ್‌ ಸೇವೆ ಇಚ್ಛಿಸುವ ರೋಗಿಗಳು ಸಂಬಂಧಪಟ್ಟ ವೈದ್ಯರ ವಾಟ್ಸ್​​ಆ್ಯಪ್‌ ನಂಬರ್‌ಗೆ ರೋಗ ಲಕ್ಷಣಗಳ ಮಾಹಿತಿ ಕಳುಹಿಸಬೇಕು. ತಮ್ಮ ಹೆಸರು, ವಯಸ್ಸು, ಲಿಂಗ, ತೂಕ, ಕಾಯಿಲೆಯ ವಿವರ ಹಾಗೂ ಈ ಹಿಂದೆ ಪಡೆದ ಔಷಧ ಬಗೆಯೂ ಹಂಚಿಕೊಳ್ಳಬೇಕು. ವೈದ್ಯರು, ರೋಗಿಯ ಪ್ರಾಥಮಿಕ ಮಾಹಿತಿ ಪರಿಶೀಲಿಸಿ ಅಗತ್ಯವಿದರೇ ಸಂಬಂಧ ಪಟ್ಟ ರೋಗಿಗೆ ಕರೆ ಮಾಡುತ್ತಾರೆ. ಇಲ್ಲವಾದರೇ ಯಾವ ಔಷಧ ಸೂಕ್ತವೆಂದು ತಮ್ಮ ನೋಂದಣಿ ಸಂಖ್ಯೆಯಿಂದ ಚಿಟಿಯಲ್ಲಿ ಬರೆದು ರೋಗಿಗೆ ಕಳುಹಿಸುತ್ತಾರೆ. ಈ ಔಷಧವನ್ನ ಮೆಡಿಕಲ್‌ನಲ್ಲಿ ಪಡೆಯಬಹುದು.

ಭಾರತದ ಕೆಲವು ಖಾಸಗಿ ಆರೋಗ್ಯ ಸೇವಾ ಕೇಂದ್ರಗಳಾದ ನಾರಾಯಣ ಹೃದಯಾಲಯ, ಅಪೊಲೊ ಟೆಲಿಮೆಡಿಸಿನ್ ಎಂಟರ್‌ಪ್ರೈಸಸ್, ಏಷ್ಯಾ ಹಾರ್ಟ್ ಫೌಂಡೇಷನ್, ಎಸ್ಕೋರ್ಟ್ಸ್ ಹಾರ್ಟ್ ಇನ್​ಸ್ಟಿಟ್ಯೂಟ್, ಅರವಿಂದ್ ಐ ಕೇರ್ ಸೇರಿದಂತೆ ಇತರರು ಟೆಲಿಮೆಡಿಸಿನ್ ಸೇವೆ ನೀಡುತ್ತಿವೆ. ಸರ್ಕಾರಗಳು ಹಾಗೂ ನವಿನ ತಂತ್ರಜ್ಞಾನದ ಮಾರ್ಗದರ್ಶನ ನೀಡುವ ಇಸ್ರೊದಂತಹ ಸಂಸ್ಥೆಗಳು ಇದಕ್ಕೆ ಕೈಜೋಡಿಸಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿ ಓರ್ವ ವೈದ್ಯನಿಗೆ 1000 ಜನರು ಹೋಲಿಸಿದರೆ ಭಾರತದಲ್ಲಿ ಪ್ರಸ್ತುತ ವೈದ್ಯರು ಮತ್ತು ಜನಸಂಖ್ಯೆಯ ನಡುವಿನ ಅನುಪಾತ 0.62: 1000ರಷ್ಟಿದೆ. ಇಂತಹ ಅಗಾದ ಅಂತರದ ಕೊರತೆ ನೀಗಿಸುವಲ್ಲಿ ಟೆಲಿಮೆಡಿಸಿನ್ ದೊಡ್ಡ ಪಾತ್ರ ವಹಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟೆಲಿಮೆಡಿಸಿನ್ ಪ್ರಯಾಣದ ವೆಚ್ಚ ಕಡಿಮೆ ಮಾಡುತ್ತದೆ. ಸಮಯ ಉಳಿಸುತ್ತದೆ. ವೈದ್ಯಕೀಯ ವೆಚ್ಚವನ್ನು ಸಹ ಕಡಿತಗೊಳಿಸುತ್ತದೆ. ಗ್ರಾಮೀಣ ಪ್ರದೇಶಗಳ ಜನರು ಸಹ ತಜ್ಞ ವೈದ್ಯರನ್ನು ಸುಲಭವಾಗಿ ಸಂಪರ್ಕಿಸಬಹುದು. ಈ ಮೂಲಕ ಆರೋಗ್ಯ ಸೇವೆ ಒದಗಿಸುವವರ ಜೀವನವನ್ನು ಸುಲಭಗೊಳಿಸುತ್ತದೆ.

ಮೆಕಿನ್ಸೆ ಗ್ಲೋಬಲ್ ಇನ್​ಸ್ಟಿಟ್ಯೂಟ್ (ಎಂಜಿಐ) ಬಿಡುಗಡೆ ಮಾಡಿದ 2019ರ ವರದಿ ಅನ್ವಯ, ಟೆಲಿಮೆಡಿಸಿನ್ ತಂತ್ರಜ್ಞಾನದ ಅನುಷ್ಠಾನದಿಂದ ಪ್ರತಿವರ್ಷ ಭಾರತಕ್ಕೆ 4 ಬಿಲಿಯನ್​ನಿಂದ 5 ಬಿಲಿಯನ್ ಡಾಲರ್​ ಹಣ ಉಳಿತಾಯ ಆಗಬಹುದು. ದೇಶದ ಅರ್ಧದಷ್ಟು ಜನಸಂಖ್ಯೆಯ ಹೊರರೋಗಿಗಳೊಂದಿಗೆ ಸಮಾಲೋಚನೆ ನಡೆಸಬಹುದು ಎಂದು ಅಂದಾಜಿಸಿದೆ.

ಈ ತಂತ್ರಜ್ಞಾನವು ಭಾರತಕ್ಕೆ 4- 5 ಬಿಲಿಯನ್ ಡಾಲರ್ ಉಳಿಸಬಹುದು. ಆದರೆ, ಗ್ರಾಮೀಣ ಪ್ರದೇಶದ ಜನರಿಗೆ ಅನರ್ಹ ವೈದ್ಯಕೀಯ ವೈದ್ಯರ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ. ತಜ್ಞರ ಸಲಹೆ ಪಡೆಯಲು ಹಾಗೂ ಹತ್ತಿರದ ನಗರಗಳಿಗೆ ಪ್ರಯಾಣಿಸುವ ಸಮಯದ ಜೊತೆಗೆ ಹಣದ ಉಳಿಕೆಗೆ ನೆರವಾಗುತ್ತಿದೆ.

ಹಲವು ಆಶಾಭಾವದ ಜತೆಗೆ ಒಂದಿಷ್ಟು ಅವಗುಣಗಳನ್ನು ಹೊಂದಿದೆ. ತಾಂತ್ರಿಕ ಮೂಲಸೌಕರ್ಯಗಳ ಬೆಂಬಲದ ಕೊರತೆ, ವೈದ್ಯರಿಗೆ ಪರಿಹಾರ ಮತ್ತು ರೋಗಿಗಳ ಗೌಪ್ಯತೆ ಬಗೆಗಿನ ಕಳವಳದಿಂದಾಗಿ ಟೆಲಿಮೆಡಿಸಿನ್ ಇನ್ನೂ ಪೂರ್ಣ ಪ್ರಮಾಣ ಸಾಮರ್ಥ್ಯದ ಮಟ್ಟ ತಲುಪಿಲ್ಲ. ಹೊಸ ತಂತ್ರಜ್ಞಾನದ ಅರಿವು ಮತ್ತು ಸ್ವೀಕಾರದ ಕೊರತೆಯು ಸಾರ್ವಜನಿಕರು ಮತ್ತು ವೃತ್ತಿಪರರಿಂದ ದೂರ ಇರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.