ETV Bharat / business

ಕೆಟ್ಟ ಸಾಲಗಳ ಪರಿಹಾರಕ್ಕೆ Bad bank​: ಕೇಂದ್ರದಿಂದ ಶೀಘ್ರ ಅನುಮೋದನೆ ಸಾಧ್ಯತೆ

ಬ್ಯಾಡ್​ ಬ್ಯಾಂಕ್ ಸ್ಥಾಪಿಸುವ ಯೋಜನೆ ಹಿನ್ನೆಯಲ್ಲಿ ಇದರ ಜವಾಬ್ದಾರಿಯನ್ನು ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ವಹಿಸಿಕೊಂಡಿದೆ. ಇದಕ್ಕಾಗಿ ಸರ್ಕಾರ ಸುಮಾರು 31 ಸಾವಿರ ಕೋಟಿ ರೂ. ಖಾತರಿ ನೀಡುವ ಸಾಧ್ಯತೆಗಳಿವೆ.

ಬ್ಯಾಡ್​ ಬ್ಯಾಂಕ್ ಸ್ಥಾಪಿಸುವ ಯೋಜನೆ
ಬ್ಯಾಡ್​ ಬ್ಯಾಂಕ್ ಸ್ಥಾಪಿಸುವ ಯೋಜನೆ
author img

By

Published : Jun 29, 2021, 4:54 PM IST

ನವದೆಹಲಿ: ಕೆಟ್ಟ ಸಾಲಗಳ ಪರಿಹಾರದ ಭಾಗವಾಗಿ ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ (ಎನ್‌ಎಆರ್‌ಸಿಎಲ್) ನೀಡುವ ಭದ್ರತಾ ರಶೀದಿಗಳಿಗೆ ಸರ್ಕಾರದ ಖಾತರಿ ನೀಡುವ ಪ್ರಸ್ತಾಪವನ್ನು ಕೇಂದ್ರ ಸಚಿವ ಸಂಪುಟ ಶೀಘ್ರದಲ್ಲೇ ಸಮ್ಮತಿ ಸೂಚಿಸುವ ಸಾಧ್ಯತೆಗಳಿವೆ.

ಬ್ಯಾಡ್​ ಬ್ಯಾಂಕ್ ಸ್ಥಾಪಿಸುವ ಯೋಜನೆ ಹಿನ್ನೆಯಲ್ಲಿ ಇದರ ಜವಾಬ್ದಾರಿಯನ್ನು ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ವಹಿಸಿಕೊಂಡಿದೆ. ಇದಕ್ಕಾಗಿ ಸರ್ಕಾರ ಸುಮಾರು 31 ಸಾವಿರ ಕೋಟಿ ರೂ. ಖಾತರಿ ನೀಡುವ ಸಾಧ್ಯತೆಗಳಿವೆ. ಪ್ರಸ್ತಾವಿತ ಬ್ಯಾಡ್​ ಬ್ಯಾಂಕ್ ಅಥವಾ ಎನ್‌ಎಆರ್‌ಸಿಎಲ್ ಸಾಲಗಳಿಗೆ ಖಾತರಿಯಾಗಿ ಶೇ 15 ರಷ್ಟು ಹಣವನ್ನು ನಗದು ರೂಪದಲ್ಲಿ ಪಾವತಿಸಲಾಗುತ್ತದೆ. ಉಳಿದ ಶೇ 85ರಷ್ಟು ಹಣವನ್ನು ಸರ್ಕಾರ ಖಾತರಿ ನೀಡುತ್ತದೆ.

ಒಂದು ಮೂಲದ ಪ್ರಕಾರ ಈ ಯೋಜನೆಗೆ ಕೇಂದ್ರ ಸಂಪುಟದ ಮುಂದೆ ಪ್ರಸ್ತಾವ ಇಟ್ಟು ಒಪ್ಪಿಗೆ ಪಡೆಯಬೇಕಾದ ಅಗತ್ಯತೆ ಇದೆ. ಎನ್​ಎಆರ್​ಸಿಎಲ್​( NARCL) ಹೊರಡಿಸಿದ ಭದ್ರತಾ ರಶೀದಿಗಳಿಗೆ ಸಾರ್ವಭೌಮ ಖಾತರಿ ನೀಡಲು ಕೇಂದ್ರ ಸರ್ಕಾರದ ಅನುಮತಿಯ ಅಗತ್ಯತೆ ಇದೆ.

ಈ ನಡುವೆ, ಕೆಟ್ಟ ಸಾಲಗಳ ಹಾವಳಿ ಹಾಗೂ ನಷ್ಟವನ್ನು ತಪ್ಪಿಸಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಕೇಂದ್ರ ಬಜೆಟ್​ ವೇಳೆ ಬ್ಯಾಡ್​ ಬ್ಯಾಂಕ್​ ಸ್ಥಾಪನೆ ಪ್ರಸ್ತಾಪ ಇಟ್ಟಿದ್ದರು. ಹೀಗಾಗಿ ಈ ಬ್ಯಾಂಕ್​ ಆರಂಭಕ್ಕೆ ಶೀಘ್ರವೇ ಕ್ಯಾಬಿನೆಟ್ ಅನುಮೋದನೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಕೊಟ್ಟಿರುವ ಸಾಲ ಮರು ವಸೂಲಾಗದೇ ಹಾಗೇ ಉಳಿದುಕೊಂಡಿದ್ದು, ಇವು ಬ್ಯಾಂಕ್​ಗಳಿಗೆ ಹೊರೆ ಆಗಿದೆ. ಈ ಕೆಟ್ಟ ಸಾಲದ ವಸೂಲಿಗೆ ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ (ಎನ್‌ಎಆರ್‌ಸಿಎಲ್) ಸ್ಥಾಪನೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ಘೋಷಣೆ ಮಾಡಿದ್ದರು.

ಈಗಾಗಲೇ ಬ್ಯಾಡ್​ ಬ್ಯಾಂಕ್​ ಸುಮಾರು 22 ಪ್ರಮುಖ 22 ಸಾಲಗಳನ್ನು ಗುರುತಿಸಿದ್ದು, ಅದರ ಒಟ್ಟಾರೆ ಮೌಲ್ಯ 89ಸಾವಿರ ಕೋಟಿ ಎಂದು ಅಂದಾಜಿಸಿದೆ. ಈ ಜವಾಬ್ದಾರಿಯನ್ನ ಪ್ರಾಥಮಿಕವಾಗಿ ಎನ್​​ಎಆರ್​ಸಿಎಲ್​ಗೆ ವರ್ಗಾವಣೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.