ನವದೆಹಲಿ: ಔಷಧಗಳ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿಎಲ್ಐ) ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಕೇಂದ್ರದ ಈ ಕ್ರಮವು ಔಷಧ ಕ್ಷೇತ್ರಕ್ಕೆ 15 ಸಾವಿರ ಕೋಟಿ ರೂ. ಹೂಡಿಕೆ ಹರಿದು ಬರಲಿದೆ.
ಈ ಯೋಜನೆಯು ದೇಶೀಯ ತಯಾರಕರಿಗೆ ಪ್ರಯೋಜನ ನೀಡುತ್ತದೆ. ಉದ್ಯೋಗ ಅವಕಾಶಗಳನ್ನು ಉತ್ತೇಜಿಸುತ್ತದೆ. ಗ್ರಾಹಕರಿಗೆ ಕೈಗೆಟುಕುವ ಔಷಧಗಳ ವ್ಯಾಪಕ ಶ್ರೇಣಿಯ ಲಭ್ಯತೆಗೆ ಸಹಕಾರಿಯಾಗಿದೆ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಸರ್ಕಾರಿ ವ್ಯವಹಾರ ನಡೆಸಲು ಖಾಸಗಿ ಬ್ಯಾಂಕ್ಗಳಿಗೆ ಅವಕಾಶ: ಪ್ರೈವೇಟ್ ತೆಕ್ಕೆಗೆ ಯಾವೆಲ್ಲಾ ವಹಿವಾಟು?
ಫಾರ್ಮಾಗೆ ಪಿಎಲ್ಐ ಯೋಜನೆಯಾಗಿದ್ದು, ದೇಶದಲ್ಲಿ ಹೆಚ್ಚಿನ ಮೌಲ್ಯದ ಉತ್ಪನ್ನಗಳ ಉತ್ಪಾದನೆ ಉತ್ತೇಜಿಸುತ್ತದೆ ಮತ್ತು ರಫ್ತುಗಳಲ್ಲಿ ಮೌಲ್ಯವರ್ಧನೆಯನ್ನು ಹೆಚ್ಚಿಸುತ್ತದೆ. 2022-23 ರಿಂದ 2027-28ರವರೆಗಿನ ಆರು ವರ್ಷಗಳಲ್ಲಿ ಒಟ್ಟು 2,94,000 ಕೋಟಿ ರೂ. ವಹಿವಾಟು ಕಂಡುಬರಲಿದ್ದು, 1,96,000 ಕೋಟಿ ರೂ. ರಫ್ತು ವಹಿವಾಟಿನ ನಿರೀಕ್ಷೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.