ETV Bharat / business

ಧೂಮಪಾನಿಗಳಿಗೆ ಶಾಕಿಂಗ್​! ಸೇದಿದ್ರೆ 5 ಲಕ್ಷ ರೂ. ದಂಡ, 3 ವರ್ಷ ಜೈಲು ಶಿಕ್ಷೆ, ಯಾವುದೀ ಸಿಗರೇಟ್​?

ಸಾರ್ವಜನಿಕ ಹಿತದೃಷ್ಟಿಯಿಂದ ಇ-ಸಿಗರೇಟ್​ ಬಳಕೆ ನಿಷೇಧಿಸುವುದು ಉಪಯುಕ್ತ. ಇವುಗಳು ಮಕ್ಕಳು ಮತ್ತು ವಯಸ್ಕರಲ್ಲಿ ಕೆಟ್ಟ ಹವ್ಯಾಸಗಳನ್ನು ಹುಟ್ಟುಹಾಕುತ್ತವೆ. ಇಂತಹ ದುಷ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಹೀಗಾಗಿ, ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ಸಿಗರೇಟ್​ ನಿಷೇಧಿಸಬೇಕೆಂದು ಆರೋಗ್ಯ ಸಚಿವಾಲಯ ಪ್ರಸ್ತಾಪ ಸಲ್ಲಿಸಿತ್ತು. ಈ ಮನವಿ ಪುರಸ್ಕರಿಸಿದ ಕೇಂದ್ರ ಸಚಿವ ಸಂಪುಟ ಇದೀಗ ನಿಷೇಧಕ್ಕೆ ಅನುಮೋದನೆ ನೀಡಿದೆ.

ಸಾಂದರ್ಭಿಕ ಚಿತ್ರ
author img

By

Published : Sep 18, 2019, 4:02 PM IST

ನವದೆಹಲಿ: ಕೇಂದ್ರ ಸಚಿವ ಸಂಪುಟವು ಆರೋಗ್ಯ ಸಚಿವಾಲಯದ ಪ್ರಸ್ತಾವನೆಗೆ ಅನುಮೋದಿಸಿದ್ದು, ಇ-ಸಿಗರೇಟ್ ಉತ್ಪಾದನೆ ಮತ್ತು ಆಮದು ನಿಷೇಧಿಸಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಸಾಧನಗಳ ಬಳಕೆಯನ್ನು ನಿಷೇಧಿಸುವುದು ಉಪಯುಕ್ತ. ಇ-ಸಿಗರೇಟ್‌ಗಳು ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಸಾಂಕ್ರಾಮಿಕ ಹವ್ಯಾಸಗಳನ್ನು ಹುಟ್ಟು ಹಾಕುತ್ತದೆ. ಇಂತಹ ದುಷ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಹೀಗಾಗಿ, ಕೇಂದ್ರ ಸರ್ಕಾರವು ಇ-ಸಿಗರೇಟ್​ ನಿಷೇಧಿಸಬೇಕೆಂದು ಸಚಿವಾಲಯವು ಪ್ರಸ್ತಾಪ ಸಲ್ಲಿಸಿತ್ತು.

ಇ-ಸಿಗರೇಟ್‌ ಮತ್ತು ತಂಬಾಕು ಬಳಕೆಯನ್ನು ಉತ್ತೇಜಿಸುವ ಅಥವಾ ಸಾರ್ವಜನಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ತಂತ್ರಜ್ಞಾನಗಳನ್ನು ಸಕ್ರಿಯವಾಗಿ ನಿಷೇಧಿಸಬೇಕು ಎಂದು ಆರೋಗ್ಯ ಸಚಿವಾಲಯ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹಾಗಾಗಿ ಕೇಂದ್ರ, ಇ-ಸಿಗರೇಟ್​ ಉತ್ಪಾದನೆ, ತಯಾರಿಕೆ, ಆಮದು/ರಫ್ತು, ಸಾಗಣೆ, ಮಾರಾಟ, ಹಂಚಿಕೆ, ಸಂಗ್ರಹ ಮತ್ತು ಜಾಹೀರಾತಿನ ಮೇಲೆ ನಿಷೇಧ ಹೇರಿಕೆಗೆ ಅಸ್ತು ಎಂದಿದೆ.

ಕಾರ್ಯನಿರ್ವಾಹಕ ಆದೇಶದ ಕರಡು ಅನ್ವಯ, ಹೊಸ ನಿಯಮಗಳ ವಿರುದ್ಧ ಪುನರಾವರ್ತಿತ ಅಪರಾಧಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ 5 ಲಕ್ಷ ರೂ.ವರೆಗೂ ದಂಡಾರ್ಹ ಶಿಕ್ಷೆ ವಿಧಿಸುವಂತೆ ಉಲ್ಲೇಖಿಸಲಾಗಿದೆ. ಮೊದಲ ಬಾರಿಯ ಅಪರಾಧಕ್ಕೆ 1 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡವಿರಬೇಕು ಎಂದು ಹೇಳಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.