ETV Bharat / business

'ಲ್ಯಾಂಬ್ರೆಟ್ಟಾ' ಸ್ಕೂಟರ್ ಕಂಪನಿ ಮುಚ್ಚಲು ಸಜ್ಜು.. ನೌಕರರ ಭವಿಷ್ಯ?

ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಉದ್ಯಮ ಸ್ಕೂಟರ್ಸ್​ ಇಂಡಿಯಾವನ್ನು ಮುಚ್ಚಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಲು ತಯಾರಾಗಿದೆ. ಒಂದು ಕಾಲದಲ್ಲಿ ಲ್ಯಾಂಬ್ರೆಟ್ಟಾ, ವಿಜಯ್ ಮುಂತಾದ ಸ್ಕೂಟರ್​ಗಳನ್ನು ಉತ್ಪಾದಿಸಿ ನಂತರ ನೇಪಥ್ಯಕ್ಕೆ ಸರಿದ ಉದ್ಯಮ ಈ ಮುಚ್ಚುವ ಹಂತಕ್ಕೆ ಬಂದಿದೆ.

Cabinet
Cabinet
author img

By

Published : Jan 21, 2021, 4:32 PM IST

ನವದೆಹಲಿ: ಒಂದು ಕಾಲದಲ್ಲಿ ಲ್ಯಾಂಬ್ರೆಟ್ಟಾ ಮತ್ತು ವಿಜಯ್ ಸೂಪರ್ ಮುಂತಾದ ಪ್ರಸಿದ್ಧ ಸ್ಕೂಟರ್​ಗಳನ್ನು ತಯಾರಿಸುತ್ತಿದ್ದ, ಸದ್ಯ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಸ್ಕೂಟರ್ಸ್​ ಇಂಡಿಯಾ ಸಂಸ್ಥೆಯನ್ನು ಮುಚ್ಚುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಲು ತಯಾರಾಗಿದೆ ಎಂದು ಮೂಲಗಳು ತಿಳಿಸಿವೆ.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಬುಧವಾರ ನಡೆದ ಸಭೆಯಲ್ಲಿ ಲಖ್ನೋ ಮೂಲದ ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಸ್ಥಗಿತಗೊಳಿಸಲು ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.

ಕಂಪನಿಯ ಪ್ರಸಿದ್ಧ ಬ್ರಾಂಡ್‌ಗಳಾದ ಲ್ಯಾಂಬ್ರೆಟ್ಟಾ, ವಿಜಯ್ ಸೂಪರ್, ವಿಕ್ರಮ್ ಮತ್ತು ಲ್ಯಾಂಬ್ರೊ ಉತ್ಪನ್ನಗಳ ಬ್ರಾಂಡ್​ ನೇಮ್​ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದು. ವಿಕ್ರಮ್ ಬ್ರಾಂಡ್ ಅಡಿಯಲ್ಲಿ ಕಂಪನಿಯು ಹಲವು ರೀತಿಯ ತ್ರಿಚಕ್ರ ವಾಹನಗಳನ್ನು ಸಹ ಉತ್ಪಾದಿಸುತ್ತದೆ.

ಮುಚ್ಚುವಿಕೆಯ ಪ್ರಸ್ತಾಪಕ್ಕೆ ಸರ್ಕಾರ ಮುಂದಾಗಿರುವ ಜವಾಬ್ದಾರಿಯನ್ನು ಬೃಹತ್​ ಕೈಗಾರಿಕಾ ಸಚಿವಾಲಯ ವಹಿಸಿಕೊಳ್ಳಲಿದೆ. ಕ್ಯಾಬಿನೆಟ್‌ಗೆ ಮಂಡಿಸಿದ ಪ್ರಸ್ತಾವಿತ ಯೋಜನೆಯ ಪ್ರಕಾರ, ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಅನ್ನು ಮುಚ್ಚಲು ಅಗತ್ಯವಿರುವ 65.12 ಕೋಟಿ ರೂ. ಕೇಂದ್ರ ಸರ್ಕಾರದಿಂದ ಬಡ್ಡಿಯೊಂದಿಗೆ ಸಾಲವಾಗಿ ಪಡೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಾಕಷ್ಟು ಹಣದ ಪ್ರಮಾಣ ಲಭ್ಯವಾದ ನಂತರ ಹೆಚ್ಚುವರಿ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆ / ಸ್ವಯಂಪ್ರೇರಿತ ಬೇರ್ಪಡಿಕೆ ಯೋಜನೆ (ವಿಆರ್​ಎಸ್ / ವಿಎಸ್ಎಸ್)ಯನ್ನು ಜಾರಿಗೊಳಿಸಲಾಗುವುದು. ಲಖ್ನೋ ಪ್ರಧಾನ ಕಚೇರಿಯಲ್ಲಿ ಸುಮಾರು 100 ಉದ್ಯೋಗಿಗಳಿದ್ದಾರೆ.

ಇದನ್ನೂ ಓದಿ: ವ್ಯಾಕ್ಸಿನೇಷನ್​ ಡ್ರೈವ್​ನಿಂದಾಗಿ ಭಾರತದ ಆರ್ಥಿಕತೆ 'ವಿ'ಕಾರದಲ್ಲಿ ಚೇತರಿಕೆ: ಆರ್​ಬಿಐ

ಕೈಗಾರಿಕಾ ವಿವಾದ ಕಾಯ್ದೆ 1947ರ ಪ್ರಕಾರ ವಿಆರ್‌ಎಸ್ / ವಿಎಸ್‌ಎಸ್ ಆಯ್ಕೆ ಮಾಡದ ನೌಕರರನ್ನು ಮರುನೇಮಕ ಮಾಡಿಕೊಳ್ಳಲಾಗುವುದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಹೇಳಿದ್ದಾರೆ.

ಕಂಪನಿಯ 147.49 ಎಕರೆ ಭೂಮಿಯನ್ನು ಪರಸ್ಪರ ಒಪ್ಪಿದ ದರದಲ್ಲಿ ಉತ್ತರ ಪ್ರದೇಶದ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಿಂದಿರುಗಿಸಬೇಕು. ಈ ಪ್ರಕ್ರಿಯೆಯು ಒಂದಿಷ್ಟು ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಸ್ಕೂಟರ್ಸ್ ಇಂಡಿಯಾಕ್ಕೆ ಖರೀದಿದಾರರನ್ನು ಹುಡುಕಲು ಮತ್ತು ರೋಗಗ್ರಸ್ತ ಸಂಸ್ಥೆಯನ್ನು ಆರೋಗ್ಯಯುಕ್ತವಾಗಿ ಮರಳಿಸಲು ಕೇಂದ್ರವು ಈ ಹಿಂದೆ ಹಲವು ಪ್ರಯತ್ನಗಳನ್ನು ಮಾಡಿತ್ತು. ಆದರೆ ಅವು ಯಾವುವೂ ಫಲಕೊಡಲಿಲ್ಲ.

2018ರಲ್ಲಿ ಸ್ಕೂಟರ್ಸ್ ಇಂಡಿಯಾದಲ್ಲಿ ಸಾಕಷ್ಟು ನಷ್ಟ ಕಂಡುಬಂದು ನಿರ್ವಹಣಾ ನಿಯಂತ್ರಣದ ವರ್ಗಾವಣೆಯೊಂದಿಗೆ ತನ್ನ ಸಂಪೂರ್ಣ ಪಾಲು ಮಾರಾಟ ಮಾಡಲು ಸರ್ಕಾರವು ಆಸಕ್ತಿಯ ಅಭಿವ್ಯಕ್ತಿಗೆ (ಇಒಐ) ಆಹ್ವಾನ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.