ETV Bharat / business

ಹೊಸ ಜಿಎಸ್​ಟಿ ನೋಂದಣಿಗೆ ಆಧಾರ್ ಕಡ್ಡಾಯ: 3 ದಿನಗಳಲ್ಲಿ ವರ್ತಕರ ಕೈಸೇರಲಿದೆ GST ನೋಂದಣಿ! - ವಾಣಿಜ್ಯ ಸುದ್ದಿ

ಕೋವಿಡ್​-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ವಿಧಿಸಲಾಗಿದ್ದ ಲಾಕ್​ಡೌನ್​ನಿಂದ ಅದರ ಅನುಷ್ಠಾನವನ್ನು ಮುಂದೂಡಲಾಯಿತು. ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಕಳೆದ ವಾರ ಜಿಎಸ್​​ಟಿ ನೋಂದಣಿಗೆ ಆಧಾರ್ ದೃಢೀಕರಣವನ್ನು 2020ರ ಆಗಸ್ಟ್ 21ರಿಂದ ಜಾರಿಗೆ ತಂದಿತು.

GST
ಜಿಎಸ್​ಟಿ
author img

By

Published : Aug 24, 2020, 4:06 PM IST

ನವದೆಹಲಿ: ಹೊಸದಾಗಿ ಜಿಎಸ್​​ಟಿ ನೋಂದಣಿ ಮಾಡುವವರಿಗೆ ಜಿಎಸ್​​​ಟಿ ಸಮಿತಿ ಬಹುಮುಖ್ಯ ಮಾಹಿತಿಯೊಂದನ್ನು ಈ ಹಿಂದೆ ನೀಡಿತ್ತು. ಜಿಎಸ್​​​ಟಿ ನೋಂದಣಿಗೆ ಇನ್ಮುಂದೆ ಆಧಾರ್ ಸಂಖ್ಯೆ ಕಡ್ಡಾಯವಾಗಿ ನೀಡಬೇಕೆಂದು ಸೂಚಿಸಿತ್ತು.

ಕೋವಿಡ್​-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ವಿಧಿಸಲಾಗಿದ್ದ ಲಾಕ್​ಡೌನ್​ನಿಂದ ಅದರ ಅನುಷ್ಠಾನವನ್ನು ಮುಂದೂಡಲಾಯಿತು. ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಕಳೆದ ವಾರ ಜಿಎಸ್​​ಟಿ ನೋಂದಣಿಗೆ ಆಧಾರ್ ದೃಢೀಕರಣವನ್ನು 2020ರ ಆಗಸ್ಟ್ 21ರಿಂದ ಜಾರಿಗೆ ತಂದಿತು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ನೋಂದಣಿಗೆ ಅರ್ಜಿ ಸಲ್ಲಿಸುವ ಆಧಾರ್ ಸಂಖ್ಯೆ ನೀಡುವ ವ್ಯವಹಾರಗಳಿಗೆ ಮೂರು ಕೆಲಸದ ದಿನಗಳಲ್ಲಿ ಅನುಮೋದನೆ ಸಿಗಲಿದೆ. ವ್ಯವಹಾರಗಳಿಗೆ ಆಧಾರ್ ಸಂಖ್ಯೆ ಒದಗಿಸದಿದ್ದಲ್ಲಿ ವ್ಯವಹಾರಿಕ ಸ್ಥಳದ ಭೌತಿಕದ ಪರಿಶೀಲನೆಯ ನಂತರವೇ ಜಿಎಸ್​​ಟಿ ನೋಂದಣಿ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಿದೆ.

2020ರ ಮಾರ್ಚ್ 14 ರಂದು ನಡೆದ ಜಿಎಸ್‌ಟಿ ಮಂಡಳಿಯ 39ನೇ ಸಭೆಯಲ್ಲಿ ಹೊಸ ತೆರಿಗೆದಾರರಿಗೆ ಆಧಾರ್ ದೃಢೀಕರಣ ಕಾರ್ಯಗತಗೊಳಿಸಲು ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಹೊಸ ಜಿಎಸ್​ಟಿ ನೋಂದಣಿಗೆ ಆಧಾರ್ ದೃಢೀಕರಣಕ್ಕೆ ಮುಂದಾಗುವ ವರ್ತಕರಿಗೆ ಕೇವಲ ಮೂರು ಕೆಲಸದ ದಿನಗಳಲ್ಲಿ ಲಭ್ಯವಾಗಲಿದೆ. ಯಾವುದೇ ಸೂಚನೆ ನೀಡದಿದ್ದರೆ ಮತ್ತು ದೈಹಿಕ ಪರಿಶೀಲನೆಗಾಗಿ ಕಾಯಬೇಕಾಗಿಲ್ಲ ಎಂದು ಹೇಳಿದೆ.

ಜಿಎಸ್​ಟಿ ನೋಂದಣಿಗೆ ಆಧಾರ್ ದೃಢೀಕರಣ ಆಯ್ದುಕೊಳ್ಳದ ಅರ್ಜಿದಾರರಿಗೆ ವ್ಯವಹಾರ ಸ್ಥಳದ ಭೌತಿಕ ಪರಿಶೀಲನೆ ಅಥವಾ ಸಾಕ್ಷ್ಯ ಪರಿಶೀಲನೆಯ ನಂತರವೇ ಅರ್ಜಿ ನೀಡಲಾಗುವುದು. ಅದು 21 ಕೆಲಸದ ದಿನಗಳು ಅಥವಾ ಅದಕ್ಕೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.