ETV Bharat / business

2008ರ ಡಾ.ಸಿಂಗ್​ರ ಆರ್ಥಿಕತೆಗಿಂತ ಮೋದಿ 2.0 ಹಣಕಾಸು ಬಿಕ್ಕಟ್ಟು ಕೆಟ್ಟದಾಗಿದೆ: RBI ಸಮೀಕ್ಷೆ

2020ರ ಹಣಕಾಸು ವರ್ಷದಲ್ಲಿನ ವ್ಯವಹಾರ ಚಟುವಟಿಕೆ ಎರಡನೇ ತ್ರೈಮಾಸಿಕದಲ್ಲೂ ಸಂಕುಚಿತಗೊಂಡಿದೆ. ಇದು 2013-14ರ ನಂತರದ ಮೊದಲ ಸಂಕುಂಚಿತ ಹಾಗೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ಎರಡನೇ ಸಂಕುಚಿತವಾಗಿದೆ. ಉತ್ಪಾದನಾ ಕಂಪನಿಗಳ ಆರ್ಡರ್ ಪುಸ್ತಕಗಳಲ್ಲಿ ಜೂನ್ ತ್ರೈಮಾಸಿಕದಲ್ಲಿ (ಹಣಕಾಸು ವರ್ಷ 2020ರ ಪ್ರಥಮ ತ್ರೈಮಾಸಿಕ) ಶೇ 23ರಷ್ಟು ಸಂಕುಚಿತಗೊಂಡಿದೆ. ಇದು 2008ರ ಆರ್ಥಿಕ ಬಿಕ್ಕಟ್ಟಿನ ನಂತರದ ಅತ್ಯಂತ ಕೆಟ್ಟಮಟ್ಟದ ಕುಸಿತವಾಗಿದೆ ಎಂದು ತ್ರೈಮಾಸಿಕ ಸಮೀಕ್ಷೆಯಲ್ಲಿ ತಿಳಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Oct 5, 2019, 1:53 PM IST

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತ್ರೈಮಾಸಿಕ ಸಮೀಕ್ಷೆಗಳ ಪ್ರಕಾರ, 2008ರ ಆರ್ಥಿಕ ಬಿಕ್ಕಟ್ಟಿನ ನಂತರ ಇತ್ತೀಚೆಗೆ ಕೊನೆಗೊಂಡ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವ್ಯಾಪಾರ- ವಹಿವಾಟಿನ ವಾತಾವರಣವು ಅತ್ಯಂತ ಕೆಟ್ಟದಾಗಿದೆ ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಪ್ರಸ್ತುತ ದಿನಗಳಲ್ಲಿ ಮಂದಗತಿ ತೀವ್ರತೆ ಮತ್ತು ಕಳೆದ ತಿಂಗಳು ಘೋಷಿಸಿದ ಕಾರ್ಪೊರೇಟ್​ ತೆರಿಗೆ ದರ ಕಡಿತ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಶಂಕಿಸಲಾಗುತ್ತಿದೆ.

2020ರ ಹಣಕಾಸು ವರ್ಷದಲ್ಲಿನ ವ್ಯವಹಾರ ಚಟುವಟಿಕೆ ಎರಡನೇ ತ್ರೈಮಾಸಿಕದಲ್ಲೂ ಸಂಕುಚಿತಗೊಂಡಿದೆ. ಇದು 2013-14ರ ನಂತರದ ಮೊದಲ ಸಂಕುಂಚಿತ ಹಾಗೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ಎರಡನೇ ಸಂಕುಚಿತವಾಗಿದೆ. ಉತ್ಪಾದನಾ ಕಂಪನಿಗಳ ಆರ್ಡರ್ ಪುಸ್ತಕಗಳಲ್ಲಿ ಜೂನ್ ತ್ರೈಮಾಸಿಕದಲ್ಲಿ (ಹಣಕಾಸು ವರ್ಷ 2020ರ ಪ್ರಥಮ ತ್ರೈಮಾಸಿಕ) ಶೇ 23ರಷ್ಟು ಸಂಕುಚಿತಗೊಂಡಿದೆ. ಇದು 2008ರ ಆರ್ಥಿಕ ಬಿಕ್ಕಟ್ಟಿನ ನಂತರದ ಅತ್ಯಂತ ಕೆಟ್ಟಮಟ್ಟದ ಕುಸಿತವಾಗಿದೆ ಎಂದು ತ್ರೈಮಾಸಿಕ ಸಮೀಕ್ಷೆಯಲ್ಲಿ ತಿಳಿಸಿದೆ.

ಆರ್ಥಿಕ ಬೆಳವಣಿಗೆಯು ಈ ತ್ರೈಮಾಸಿಕದಲ್ಲಿ ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5ಕ್ಕೆ ಇಳಿದಿದೆ. ಇದು ತ್ರೈಮಾಸಿಕಗಳ ಹಿಂಜರಿತವನ್ನು ಸೂಚಿಸುತ್ತದೆ. ಇದೇ ತ್ರೈಮಾಸಿಕದಲ್ಲಿ ಉದ್ಯಮಗಳ ಸಾಮರ್ಥ್ಯದ ಬಳಕೆಯು ಶೇ 73.6ಕ್ಕೆ ಇಳಿಕೆಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದು ಶೇ 76.1ರಷ್ಟಿತ್ತು. 2020ರ ಹಣಕಾಸು ವರ್ಷದಲ್ಲಿ ಬಂಡವಾಳದ ಒಳಹರಿವು, ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿ ಕುಸಿತ ಕಂಡುಬಂದಿದೆ. ರಫ್ತು ಮತ್ತು ಆಮದಿನ ಮೇಲಿನ ಆಶಾವಾದ ಕ್ಷೀಣಿಸುತ್ತಿದೆ ಎಂದು ಕೈಗಾರಿಕಾ ಇಂಡಸ್ಟ್ರಿಯಲ್​ ಔಟ್​ಲುಕ್​ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.