ETV Bharat / business

ಸಿಎಎ ಜಾರಿಯಿಂದ ಮಹಾತ್ಮ ಗಾಂಧೀಜಿ ಕನಸುಗಳು ಈಡೇರಿವೆ: ರಾಷ್ಟ್ರಪತಿ ಕೋವಿಂದ್ - ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​

ಬಜೆಟ್​ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರು, ಸಂಸತ್ತಿನ ಉಭಯ ಸದನಗಳಿಂದ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ಬರುವ ಮೂಲಕ ರಾಷ್ಟ್ರ ಪಿತಾಮಹ ಮಹಾತ್ಮ ಗಾಂಧಿಯವರ ಆಶಯ ಈಡೇರಿಸಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದರು.

President Kovind
ರಾಷ್ಟ್ರಪತಿ
author img

By

Published : Jan 31, 2020, 12:37 PM IST

ನವದೆಹಲಿ: ಬಜೆಟ್​ ಅಧಿವೇಶನದ ಜಂಟಿ ಸದನ ಉದ್ದೇಶಿಸಿ ಮಾತನಾಡುವ ವೇಳೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​ ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಉಲ್ಲೇಖಿಸಿದ್ದು ಸಂಸತ್ತಿನಲ್ಲಿ ಕೆಲ ಹೊತ್ತ ಕೋಲಾಹಲ/ ಗದ್ದಲಕ್ಕೆ ಕಾರಣವಾಯಿತು.

ಸಂಸತ್ತಿನ ಉಭಯ ಸದನಗಳಿಂದ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ಬರುವ ಮೂಲಕ ರಾಷ್ಟ್ರ ಪಿತಾಮಹ ಮಹಾತ್ಮ ಗಾಂಧಿಯವರ ಆಶಯ ಈಡೇರಿಸಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದರು.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಸಂವಿಧಾನದ ಆರ್ಟಿಕಲ್​ 35ಎ ಹಾಗೂ 370 ರದ್ದುಗೊಳಿಸಲು ಸಂಸತ್ತಿನ ಉಭಯ ಸದನಗಳ ಸದಸ್ಯರ ಬೆಂಬಲ ನೀಡಿದ್ದು ಐತಿಹಾಸಿಕವಾದದ್ದು. ಇದರ ಜೊತೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅಭಿವೃದ್ಧಿಗೆ ಸಮಾನವಾದ ಆಧ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಗ್ರಾಮೀಣ ಭಾರತದಲ್ಲಿ ಸುಮಾರು 15 ಕೋಟಿ ಮನೆಗಳಿದ್ದು, ಕೊಳವೆ ನೀರು ಪೂರೈಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದು ನಮ್ಮ ಮಹಿಳೆಯರ ಜೀವನವನ್ನು ಕಷ್ಟಕರವಾಗಿಸುತ್ತಿದೆ. ಕಲುಷಿತ ನೀರು ಕುಟುಂಬದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶುದ್ಧ ನೀರಿನ ತಲುಪುವಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬ ಭಾರತೀಯ, ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯಡಿ ಶ್ರಮಿಸಬೇಕು. ಕೇಂದ್ರ, ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ಮತ್ತು ಎನ್‌ಜಿಒಗಳು ಇದನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದರು.

ಅಭಿವೃದ್ಧಿಯ ಕೊರತೆಯಿರುವ ದೇಶದ 112 ಜಿಲ್ಲೆಗಳಿಗೆ ಆದ್ಯತೆ ನೀಡಲಾಗಿದೆ. ಈ ಪ್ರದೇಶಗಳ ಜನರು ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ಕೆಲಸಗಳು ಪ್ರಗತಿಯಲ್ಲಿವೆ ಎಂದು ಹೇಳಿದ್ದಾರೆ.

ದೇಶದಲ್ಲಿ 8 ಕೋಟಿ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್​ ಸಂಪರ್ಕ ನೀಡಲಾಗಿದೆ. 2 ಕೋಟಿ ಜನರಿಗೆ ವಸತಿಗಳನ್ನು ನಿರ್ಮಿಸಿ ಕೊಡಲಾಗಿದೆ. 38 ಕೋಟಿ ಜನರಿಗೆ ಬ್ಯಾಂಕ್ ಖಾತೆಗಳ ಸಂಪರ್ಕ ಕಲ್ಪಿಸಲಾಗಿದೆ. 50 ಕೋಟಿ ಜನರಿಗೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಅಡಿಯಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. 24 ಕೋಟಿ ಜನರು ವಿಮಾ ಯೋಜನೆಗಳಿಂದ ಲಾಭ ಪಡೆದಿದ್ದಾರೆ. 2.5 ಕೋಟಿ ಜನರಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ನೀಡಲಾಗಿದೆ ಎಂದು ಕೇಂದ್ರದ ಸಾಧನೆಗಳಿಗೆ ಧ್ವನಿಯಾದರು.

ಕಳೆದ 5 ವರ್ಷಗಳಲ್ಲಿ ಈ ಸರ್ಕಾರವು ಮಾಡಿದ ಕಾರ್ಯಗಳಿಂದಾಗಿ ಅಂತಾರಾಷ್ಟ್ರೀಯ ಶ್ರೇಯಾಂಕ ಸೂಚ್ಯಂಕಗಳಲ್ಲಿ ಭಾರತದ ಸೂಚ್ಯಾಂಕ ಏರಿಕೆಯಾಗಿದೆ. ವಿಶ್ವ ಬ್ಯಾಂಕ್​ನ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಶ್ರೇಯಾಂಕದಲ್ಲಿ ಭಾರತ 79 ಶ್ರೇಯಾಂಕಗಳಿಂದ 63ನೇ ಸ್ಥಾನಕ್ಕೆ ಬಂದಿದೆ. ದಿವಾಳಿತನವನ್ನು ಪರಿಹರಿಸುವ ಸೂಚ್ಯಂಕದಲ್ಲಿ 108ನೇ ಸ್ಥಾನದಿಂದ 52ನೇ ಸ್ಥಾನಕ್ಕೆ ಏರಿದೆ ಎಂದು ಕೋವಿಂದ್ ಹೇಳಿದ್ದಾರೆ.

ಪಾರದರ್ಶಕವಾದ ಚರ್ಚೆ ಮತ್ತು ಅಭಿಪ್ರಾಯಗಳ ವಿನಿಮಯವು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನನ್ನ ಸರ್ಕಾರ ನಂಬಿದೆ. ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ ಮತ್ತು ಶಾಂತಿಗೆ ಭಂಗತರವ ಕೃತ್ಯಗಳು ದೇಶವನ್ನು ದುರ್ಬಲಗೊಳಿಸುತ್ತವೆ. ನವ ಭಾರತ ನಿರ್ಮಾಣಕ್ಕೆ ಭಾರತೀಯ ನಾಗರಿಕರು ನನ್ನ ಸರ್ಕಾರಕ್ಕೆ ಜನಾದೇಶವನ್ನು ನೀಡಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.