ETV Bharat / business

ಬಜೆಟ್‌ 2022: ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ದೇಶದ ಅರ್ಧದಷ್ಟು ಜನರ ಒತ್ತಾಯ - ಸಮೀಕ್ಷೆ - ಬಜೆಟ್‌ 2022

ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ವಿಸ್ತರಿಸಬೇಕು ಎಂದು ಬಜೆಟ್‌ ಕುರಿತ ಸಮೀಕ್ಷೆಯೊಂದರಲ್ಲಿ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Budget 2022: Nearly half of citizens want health to be top priority says survey
ಬಜೆಟ್‌ 2022: ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ದೇಶದ ಅರ್ಧದಷ್ಟು ಜನರ ಬೇಡಿಕೆ - ಸಮೀಕ್ಷೆ
author img

By

Published : Jan 31, 2022, 12:36 PM IST

ನವದೆಹಲಿ: ಕೋವಿಡ್‌ 3ನೇ ಅಲೆ ದೇಶದಲ್ಲಿ ಇನ್ನೂ ತನ್ನ ಪ್ರತಾಪ ಮುಂದುವರಿಸಿರುವ ಬೆನ್ನಲ್ಲೇ ನಾಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2022-23ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರವನ್ನು ಪ್ರಮುಖ ಕೇಂದ್ರೀಕರಿಸಬೇಕೆಂದು ದೇಶದ ಅರ್ಧದಷ್ಟು ಮಂದಿ ಬಯಸಿದ್ದಾರೆ ಎಂದು ಸಮೀಕ್ಷೆಯ ವರದಿಯೊಂದು ಹೇಳಿದೆ.

ಸಮುದಾಯ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಸುಮಾರು ಅರ್ಧದಷ್ಟು (ಶೇ47ರಷ್ಟು) ಜನರು ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರವನ್ನು ಪ್ರಮುಖ ಕೇಂದ್ರೀಕರಿಸಲು ಒತ್ತಾಯಿಸಿದ್ದಾರೆ.

ಚೀನಾದ ವುಹಾನ್ ಪ್ರದೇಶದಿಂದ 2019ರ ನವೆಂಬರ್‌ನಲ್ಲಿ ಮೊದಲು ಪತ್ತೆಯಾದ ಮಾರಣಾಂತಿಕ ಕೋವಿಡ್‌ ವೈರಸ್‌ ಸೋಂಕಿತರು ಹಾಗೂ ಸಾವಿನ ವಿಷಯದಲ್ಲಿ ವಿಶ್ವದಲ್ಲಿ ಅಮೆರಿಕ ನಂತರ ಭಾರತ ಎರಡನೇ ಸ್ಥಾನದಲ್ಲಿದೆ. ಕೊರೊನಾ ವೈರಸ್‌ ಮತ್ತದರ ರೂಪಾಂತರಗಳು ದೇಶದಲ್ಲಿ 4,95,000 ಕ್ಕೂ ಹೆಚ್ಚು ಜನರನ್ನ ಬಲಿ ಪಡೆದಿದೆ. ವೈರಸ್‌ ಕಾಣಿಸಿಕೊಂಡಾಗಿನಿಂದ ವಿಶ್ವದಾದ್ಯಂತ 5.67 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವೈರಸ್‌ನಿಂದ ಮೃತಪಟ್ಟಿದ್ದಾರೆ.

ಬಜೆಟ್‌ನಿಂದ ಜನರಿಗೆ ಏನು ಬೇಕು?

ಸಮೀಕ್ಷೆಯ ಪ್ರಕಾರ 9,500 ಕ್ಕೂ ಹೆಚ್ಚು ಪ್ರತಿಕ್ರಿಯಿಸಿದವರಲ್ಲಿ ಶೇ.47 ರಷ್ಟು ಮಂದಿ ಆರೋಗ್ಯ ಕ್ಷೇತ್ರವು ಮೊದಲ ಆದ್ಯತೆಯಾಗಿರಬೇಕು ಎಂದು ಹೇಳಿದ್ದಾರೆ. ಆರೋಗ್ಯ ಕ್ಷೇತ್ರವನ್ನು ಶಿಕ್ಷಣ ಕ್ಷೇತ್ರ ಮತ್ತು ಆನ್‌ಲೈನ್ ಶಿಕ್ಷಣ ಪಡೆಯುವ ಸಾಮರ್ಥ್ಯವನ್ನು ಅನುಸರಿಸಲಾಗಿದೆ. ಏಕೆಂದರೆ ಸುಮಾರು 20ರಷ್ಟು ಪ್ರತಿಕ್ರಿಯಿಸಿದವರು ಸರ್ಕಾರವು ಶಿಕ್ಷಣ ಕ್ಷೇತ್ರದ ಮೇಲೆ ಕೇಂದ್ರೀಕರಿಸಬೇಕೆಂದು ಬಯಸಿದ್ದಾರೆ.

ಸೋಂಕು ಸಮುದಾಯದ ಹರಡುವಿಕೆಯನ್ನು ತಡೆಯಲು ವಿಧಿಸಲಾದ ನಿರ್ಬಂಧಗಳು ಮತ್ತು ಲಾಕ್‌ಡೌನ್‌ಗಳಿಂದ ಶಿಕ್ಷಣ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಶೇ.6 ರಷ್ಟು ಜನರು ಇತರ ಎಲ್ಲ ಕ್ಷೇತ್ರಗಳಿಗಿಂತ ಸ್ವಚ್ಛ ಪರಿಸರಕ್ಕೆ ಆದ್ಯತೆ ನೀಡಬೇಕೆಂದು ಹೇಳಿದ್ದಾರೆ.

ಶುದ್ಧ ಗಾಳಿಗೆ ಸರ್ಕಾರವು ಮೊದಲ ಆದ್ಯತೆಯನ್ನು ನೀಡಬೇಕು ಎಂತಲೂ ಇವರು ಒತ್ತಾಯಿಸಿದ್ದಾರೆ. ಶೇ.6 ರಷ್ಟು ಮಂದಿ ಸರ್ಕಾರವು ಮಹಿಳಾ ಮತ್ತು ಮಕ್ಕಳ ಸುರಕ್ಷತೆಯ ವಿಷಯಕ್ಕೆ ಗರಿಷ್ಠ ಗಮನವನ್ನು ನೀಡಬೇಕು ಎಂದು ಹೇಳಿದ್ದಾರೆ. ಒಟ್ಟು 9,541 ಮಂದಿಯ ಪ್ರತಿಕ್ರಿಯೆಗಳ ಪೈಕಿ ಶೇ. 4ರಷ್ಟು ಜನರು ಈ ವಿಷಯದ ಬಗ್ಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.

ಕಳೆದ ವರ್ಷ ಏಪ್ರಿಲ್-ಮೇ ಅವಧಿಯಲ್ಲಿ ದೇಶವನ್ನು ತಲ್ಲಣಗೊಳಿಸಿದ್ದ ಕೋವಿಡ್‌ 2ನೇ ಅಲೆಯಲ್ಲಿ ರೂಪಾಂತರಿ ಡೆಲ್ಟಾ ಆರೋಗ್ಯ ಸೇವೆಗಳ ಬೇಡಿಕೆಯಲ್ಲಿ ಹಠಾತ್ ಏರಿಕೆಯನ್ನು ಎದುರಿಸಲು ಭಾರತ ಸರಿಯಾದ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ ಎಂಬ ವಿಚಾರಗಳನ್ನು ವರದಿ ಬಹಿರಂಗಪಡಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆಗೆ ಆಗ್ರಹ

ಸಮೀಕ್ಷೆಯಲ್ಲಿ ಭಾಗವಹಿಸಿದ ಬಹುತೇಕ ಜನರು, ಕೇಂದ್ರವು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ವಿಸ್ತರಿಸಬೇಕು ಎಂದು ಹೇಳಿದ್ದಾರೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಈ ಕೇಂದ್ರಗಳ ಕೊರತೆಯನ್ನು ಮಾತ್ರ ಪರಿಹರಿಸುವುದಿಲ್ಲ. ಆದರೆ, ಭವಿಷ್ಯದ ಯಾವುದೇ ಸಾಂಕ್ರಾಮಿಕ ಸಮಯದಲ್ಲಿ ಗ್ರಾಮಸ್ಥರ ತುರ್ತು ಅಗತ್ಯಗಳನ್ನು ಪೂರೈಸುತ್ತದೆ ಎಂದಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.