ETV Bharat / business

ಕೊರೊನಾ ಕಾಲದಲ್ಲಿ ಆರ್ಥಿಕತೆ ಕಾಪಾಡಿದ ಕೃಷಿ ಕ್ಷೇತ್ರಕ್ಕೆ ನಿರ್ಮಲಾ ಬಜೆಟ್​​ನಲ್ಲಿ ಏನೆಲ್ಲಾ ಸಿಗಬಹುದು? - Union budget Live

ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆ, ಪ್ರಧಾನ ಮಂತ್ರಿ ಕೃಷಿ ನೀರಾವರಿ ಯೋಜನೆ ಸೇರಿದಂತೆ ಕೃಷಿ ಕ್ಷೇತ್ರದ ಇತರ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಮಹತ್ವ ಸಿಗಬಹುದು. ಕೃಷಿಯ ಜೊತೆಗೆ ಆಹಾರ ಸಂಸ್ಕರಣಾ ಉದ್ಯಮದ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಲಿದೆ. ಇದು ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಸಾಧನೆಗೆ ನೆರವಾಗುತ್ತದೆ..

Budget 2021
Budget 2021
author img

By

Published : Jan 31, 2021, 8:12 PM IST

ನವದೆಹಲಿ : ಕೊರೊನಾ ವೈರಸ್​​ ಮಧ್ಯೆ ಉತ್ಪಾದನೆ ಮತ್ತು ಸೇವಾ ಕ್ಷೇತ್ರದ ವೇಗ ಸ್ಥಗಿತಗೊಂಡಾಗ ಕೃಷಿ ಕ್ಷೇತ್ರದ ಬಲವನ್ನು ಭಾರತದಲ್ಲಿ ಬೇಸಾಯ ಹಾಗೂ ಅದರ ಸಂಬಂಧಿತ ಕ್ಷೇತ್ರಗಳು ವೇಗ ಪಡೆದುಕೊಳ್ಳಲು ಕಾರಣವಾಗಿವೆ.

ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಹೆಚ್ಚಿನ ಜನಸಂಖ್ಯೆಯನ್ನು ಸರ್ಕಾರ ಗಮನ ಹರಿಸಿತ್ತು. ಕೃಷಿ ಕ್ಷೇತ್ರದಲ್ಲಿ ಸುಧಾರಣೆಯ ಅಲೆ ತರಲು ಹೊಸ ಕಾನೂನುಗಳನ್ನು ಜಾರಿಗೆ ತಂದಿತು. ಈ ಕೃಷಿ ಸುಧಾರಣೆಯ ಬಗ್ಗೆ ವ್ಯಾಜ್ಯಗಳು ನಡೆಯುತ್ತಿರುವ ಮಧ್ಯೆ 2021-22ರ ಬಜೆಟ್‌ನ ಸೋಮವಾರ ಸಂಸತ್ತಿನಲ್ಲಿ ಮಂಡನೆಯಾಗಲಿದೆ.

ಕೊರೊನಾದಂತಹ ಪರಿಸ್ಥಿತಿಯಲ್ಲಿ ಗ್ರಾಮಗಳು, ಬಡವರು ಮತ್ತು ರೈತರ ಪ್ರಗತಿಗೆ ಆದ್ಯತೆ ನೀಡುವುದಾಗಿ ಹೇಳಿರುವ ಮೋದಿ ಸರ್ಕಾರ, ಮುಂಬರುವ ಮುಂಗಡ ಲೆಕ್ಕಪತ್ರದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ಆರ್ಥಿಕ ಪರಿಶೀಲನೆ 2020-21ರ ಪ್ರಕಾರ, ಕೈಗಾರಿಕಾ ಮತ್ತು ಸೇವಾ ವಲಯಗಳು ಕ್ರಮವಾಗಿ ಶೇ.9.6ರಷ್ಟು ಮತ್ತು ಶೇ.8.8ರಷ್ಟು ಕುಸಿಯುವ ನಿರೀಕ್ಷೆಯಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಬೆಳವಣಿಗೆಯ ದರವು ಶೇ.3.4ರಷ್ಟಿದೆ. ಕೃಷಿ ಮತ್ತು ಈ ಸಂಬಂಧಿತ ವಲಯಗಳು 2020-21ರ ಹಣಕಾಸು ವರ್ಷದಲ್ಲಿ (ಮೊದಲ ಮುಂಗಡ ಅಂದಾಜು) ಸ್ಥಿರ ಬೆಲೆಯಲ್ಲಿ ಶೇ. 3.4ರಷ್ಟು ಬೆಳವಣಿಗೆ ದಾಖಲಿಸಿದೆ.

2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದು ಮತ್ತು ದೇಶದ ಎಲ್ಲ ಬಡವರಿಗೆ 'ಪಕ್ಕಾ' ಮನೆ ಸೇರಿದಂತೆ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಮೋದಿ ಸರ್ಕಾರದ ಆದ್ಯತೆಯಾಗಿದೆ. ಆದ್ದರಿಂದ, ಈ ಗುರಿ ಸಾಧಿಸುವ ಉದ್ದೇಶದಿಂದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯದ ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಸಿಗಲಿದೆ ಎಂದು ನಿರೀಕ್ಷಿಸಬಹುದು.

ಪ್ರಧಾನಿ ಕಿಸಾನ್ ಸಮ್ಮನ್ ನಿಧಿ (ಪಿಎಂ-ಕಿಸಾನ್) ಸೇರಿದಂತೆ ಕೃಷಿ ಕ್ಷೇತ್ರದ ಎಲ್ಲಾ ಯೋಜನೆಗಳ ಬಗ್ಗೆ ರೈತರ ಜಾಗೃತಿ ಹೆಚ್ಚುತ್ತಿದೆ. ಈ ಯೋಜನೆಗಳ ಪ್ರಯೋಜನಗಳ ಪ್ರಗತಿ ಸ್ಪಷ್ಟವಾಗಿ ಕಾಣುತ್ತಿವೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈತರಿಗೆ ಕೈಗೆಟುಕುವ ಬಡ್ಡಿದರದಲ್ಲಿ ಅಲ್ಪಾವಧಿಯ ಕೃಷಿ ಸಾಲ ನೀಡುವ ಯೋಜನೆಯ ಬಗ್ಗೆಯೂ ಸರ್ಕಾರ ಗಮನ ಹರಿಸಲಿದೆ.

ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆ, ಪ್ರಧಾನ ಮಂತ್ರಿ ಕೃಷಿ ನೀರಾವರಿ ಯೋಜನೆ ಸೇರಿದಂತೆ ಕೃಷಿ ಕ್ಷೇತ್ರದ ಇತರ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಮಹತ್ವ ಸಿಗಬಹುದು. ಕೃಷಿಯ ಜೊತೆಗೆ ಆಹಾರ ಸಂಸ್ಕರಣಾ ಉದ್ಯಮದ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಲಿದೆ. ಇದು ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಸಾಧನೆಗೆ ನೆರವಾಗುತ್ತದೆ ಎಂದು ಕೃಷಿ ಅರ್ಥಶಾಸ್ತ್ರಜ್ಞರ ಅಭಿಪ್ರಾಯ.

ಇದನ್ನೂ ಓದಿ: ಇನ್ಮುಂದೆ ಅಮೇಜಾನ್​​​ನಲ್ಲಿ ಮಾರಾಟ ಮಾಡಲು ಕನ್ನಡ ಬಂದ್ರೆ ಸಾಕು!!

ಕೊರೊನಾ ಅವಧಿಯಲ್ಲಿ ನಗರಗಳಿಂದ ವಲಸೆ ಬರುವ ಕಾರ್ಮಿಕರಿಗೆ ಉದ್ಯೋಗಾವಕಾಶ ಒದಗಿಸಲು ಗ್ರಾಮಗಳ ಅಭಿವೃದ್ಧಿಗೆ ಪ್ರಮುಖ ಯೋಜನೆಗಳು ಬಹಳ ಸಹಾಯಕವೆಂದು ಸಾಬೀತಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎ) ಹಳ್ಳಿಗಳಲ್ಲಿನ ಕೂಲಿ ಕಾರ್ಮಿಕರಿಗೆ ನಿತ್ಯ ಉದ್ಯೋಗ ನೀಡುವುದರ ಜೊತೆಗೆ ಹಳ್ಳಿಗಳಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ನಿರ್ಣಾಯಕವಾಗಿವೆ. ಇಂತಹ ವಿಪತ್ತಿನಡಿ ಸ್ವಾವಲಂಬಿ ಭಾರತ ಪ್ಯಾಕೇಜ್ ಕೂಡ ಘೋಷಿಸಲಾಯಿತು.

ಮುಂಬರುವ ಬಜೆಟ್‌ನಲ್ಲಿಯೂ ಎಂಎನ್‌ಆರ್‌ಇಜಿಎ ಸೇರಿದಂತೆ ಇತರ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುದಾನ ಹೆಚ್ಚಿಸಬಹುದು ಎಂದು ತಜ್ಞರ ಇಂಗಿತ. 2020-21ರಲ್ಲಿ ಎಂಎನ್‌ಆರ್‌ಇಜಿಎಯ ಬಜೆಟ್ ಹಂಚಿಕೆ 61,500 ಕೋಟಿ ರೂ.ಯಷ್ಟಿದೆ. ಆದರೆ, ಕೊರೊನಾ ಯುಗದಲ್ಲಿ ಸ್ವಾವಲಂಬಿ ಪ್ಯಾಕೇಜ್ ಅಡಿಯಲ್ಲಿ ಈ ಯೋಜನೆಗೆ ಹೆಚ್ಚುವರಿ 40,000 ಕೋಟಿ ರೂ. ನೀಡಬೇಕಿದೆ.

ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಬೆಳೆಗಳನ್ನು ಖರೀದಿಸಲು ಕಾನೂನು ಖಾತರಿ ನೀಡುವಂತೆ ರೈತರು ದೆಹಲಿಯ ಗಡಿಯಲ್ಲಿ ಎರಡು ತಿಂಗಳಿಂದ ಆಂದೋಲನ ನಡೆಸುತ್ತಿದ್ದಾರೆ.

ರೈತರ ಚಳವಳಿಯಲ್ಲಿ ಎಂಎಸ್‌ಪಿ ಒಂದು ದೊಡ್ಡ ವಿಷಯವಾಗಿದ್ದು, ಈ ಸಂಬಂಧ ಬಜೆಟ್‌ನಲ್ಲಿ ಕೆಲವು ಪ್ರಕಟಣೆ ನಿರೀಕ್ಷಿಸಬಹುದು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22ರ ಹಣಕಾಸು ವರ್ಷದ ಸಾಮಾನ್ಯ ಬಜೆಟ್ ಅನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.