ಮುಂಬೈ: ಕಳೆದ ವಾರ ಮಂಡಿಸಿದ ಬಜೆಟ್ 'ವಿವೇಚನೆಯುಕ್ತ ಮತ್ತು ಉದಾರತೆ'ಯ ಚಟುವಟಿಕೆಗಳಿಗೆ ಪ್ರಚೋದನೆ ನೀಡುವಂತಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಉದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರವು ಬೆಳವಣಿಗೆಯನ್ನು ನಿಧಾನಗೊಳಿಸಬೇಕಾದ ಹಿಂದಿನ ಎಲ್ಲಾ ನಿದರ್ಶನಗಳ ಅನುಭವಗಳನ್ನು ಬಜೆಟ್ನಲ್ಲಿ ಬಳಸಿಕೊಳ್ಳಲಾಗಿದೆ. ಕೆಲವು ಕ್ಷೇತ್ರಗಳಿಗೆ ಯಾವುದೇ ದೊಡ್ಡ ಪ್ರಕಟಣೆಗಳನ್ನು ಹೊರಡಿಸದ ಕಾರಣ ಬಜೆಟ್ ಬಗ್ಗೆ ಕೆಲವರು ನಿರಾಶೆ ವ್ಯಕ್ತಪಡಿಸಿದ್ದನ್ನು ಕಂಡುಕೊಂಡಿದ್ದೇವೆ. ವಿತ್ತೀಯ ಬೆಳವಣಿಗೆಯು ಈ ದಶಕದಲ್ಲಿ ಕೆಳಮಟ್ಟಕ್ಕೆ ಇಳಿದಿದ್ದೇ ಇದಕ್ಕೆ ಕಾರಣವೆಂದು ಸಚಿವೆ ಸ್ಪಷ್ಟನೆ ನೀಡಿದ್ದಾರೆ.
ಆರ್ಥಿಕ ಬೆಳವಣಿಗೆಗೆ ಪ್ರಚೋದನೆ ನೀಡುವಂತಹ ನಡೆಗಳನ್ನು ಸರ್ಕಾರವು ತನ್ನ ಕೊನೆಯ ಸುತ್ತಿನವರೆಗೂ ಅನುಭವಗಳ ಆಧಾರದ ಮೇಲೆ ಮೇಲೆತ್ತಲು ಪ್ರಯತ್ನಿಸುತ್ತಿದೆ ಎಂದು ಸಂವಾದದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದರು.
-
Smt @nsitharaman lights the ceremonial lamp and inaugurates the interactive session with industry representatives in Mumbai. #JanJanKaBudget pic.twitter.com/eOdmqFCQ6I
— NSitharamanOffice (@nsitharamanoffc) February 7, 2020 " class="align-text-top noRightClick twitterSection" data="
">Smt @nsitharaman lights the ceremonial lamp and inaugurates the interactive session with industry representatives in Mumbai. #JanJanKaBudget pic.twitter.com/eOdmqFCQ6I
— NSitharamanOffice (@nsitharamanoffc) February 7, 2020Smt @nsitharaman lights the ceremonial lamp and inaugurates the interactive session with industry representatives in Mumbai. #JanJanKaBudget pic.twitter.com/eOdmqFCQ6I
— NSitharamanOffice (@nsitharamanoffc) February 7, 2020
ಆಯವ್ಯಯ ಮಂಡನೆಯಲ್ಲಿ ಒಟ್ಟಾರೆ ಆರ್ಥಿಕ ಮೂಲಭೂತ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆವು. ಪ್ರಸ್ತುತ ಸಮಯದಲ್ಲಿ ಪ್ರಚೋದನೆ ನೀಡುವಂತಹದ್ದು ಮೂಲ ಬೇಡಿಕೆಯಾಗಿತ್ತು. ಅನುಭೋಗ ಹೆಚ್ಚಿಸುವುದಕ್ಕಾಗಿ ಮತ್ತು ಉತ್ತೇಜನವನ್ನು ಒದಗಿಸಲು ದೀರ್ಘಕಾಲೀನ ಆಸ್ತಿ ನಿರ್ಮಾಣದ ಹೂಡಿಕೆಗಳತ್ತ ಹೆಚ್ಚು ಗಮನಹರಿಸಿದ್ದೇವೆ ಎಂದು ಅವರು ವಿವರಿಸಿದರು.