ಭಾರತದ ಹೊರಗೆ ಸಂಗ್ರಹವಾಗಿರುವ ಕಪ್ಪು ಹಣ 21,600 ಕೋಟಿಯಿಂದ 49,000 ಕೋಟಿ ಎಂದು ಅಂದಾಜಿಸಲಾಗಿದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. 2009-10 ಮತ್ತು 2010-11ರಲ್ಲಿ ದೇಶದ ಒಟ್ಟು ದೇಶಿಯ ಉತ್ಪನ್ನದ (ಜಿಡಿಪಿ) ಶೇಕಡಾ 7 ರಿಂದ 120 ರಷ್ಟು ಕಪ್ಪು ಹಣ ದೇಶ ಹೊರಗೆ ಚಲಾವಣೆಯಾಗಿದೆ ಎಂದು ಅಧ್ಯಯನಗಳು ತಿಳಿಸಿವೆ.
ವಿವಿಧ ಅಧ್ಯಯನಗಳನ್ನು ಉಲ್ಲೇಖಿಸಿ ಹಣಕಾಸು ಸ್ಥಾಯಿ ಸಮಿತಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಲೆಕ್ಕವಿಲ್ಲದ ಆದಾಯ ಮತ್ತು ಸಂಪತ್ತಿನ ವಿಶ್ವಾಸಾರ್ಹ ಅಂದಾಜಿನ ಕೊರತೆಯನ್ನು ಇದು ಎತ್ತಿ ತೋರಿಸಿದೆ.
ಈ ಅಂದಾಜುಗಳನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿ (ಎನ್‌ಐಪಿಎಫ್‌ಪಿ), ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (ಎನ್‌ಸಿಎಇಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫೈನಾನ್ಸ್ ಮ್ಯಾನೇಜ್‌ಮೆಂಟ್ (ಎನ್‌ಐಎಫ್‌ಎಂ) ನೀಡಿದೆ. ಹಿಂದಿನ ಯುಪಿಎ ಸರ್ಕಾರವು ಈ ಸಂಸ್ಥೆಗಳಿಂದ ಅಧ್ಯಯನವನ್ನು ನಿಯೋಜಿಸಿತ್ತು. ಸೋಮವಾರ ಸಂಸತ್ತಿಗೆ ಸಲ್ಲಿಸಿದ ವರದಿಯು ಈ ಅಧ್ಯಯನಗಳನ್ನು ಉಲ್ಲೇಖಿಸಿ, ವಿದೇಶದಲ್ಲಿ ಭಾರತೀಯರು ಸಂಗ್ರಹಿಸಿರುವ ಕಪ್ಪು ಹಣವು 1980 ಮತ್ತು 2010 ರ ನಡುವೆ 216.48 ಬಿಲಿಯನ್ ಡಾಲರ್‌ನಿಂದ 490 ಬಿಲಿಯನ್ ಡಾಲರ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ.
ಮಾಜಿ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರ ಅಧ್ಯಕ್ಷತೆಯಲ್ಲಿರುವ ಈ ಸಮಿತಿಯು ದೇಶದಲ್ಲಿ ನೇರ ತೆರಿಗೆ ಕಾನೂನುಗಳನ್ನು ಸರಳಗೊಳಿಸುವ ಮತ್ತು ತರ್ಕಬದ್ಧಗೊಳಿಸುವ ಸಲುವಾಗಿ ನೇರ ತೆರಿಗೆ ಸಂಹಿತೆಯನ್ನು (ಡಿಟಿಸಿ) ಶೀಘ್ರವಾಗಿ ಪರಿಚಯಿಸುವಂತೆ ಒತ್ತಾಯಿಸಿತು. ಆದಾಯ ತೆರಿಗೆ ಕಾಯ್ದೆಯನ್ನು ಅತಿಕ್ರಮಿಸಲು ಹಣಕಾಸು ಸಚಿವಾಲಯದ ಅಡಿಯಲ್ಲಿ ಮತ್ತು ಅಖಿಲೇಶ್ ರಂಜನ್ ನೇತೃತ್ವದ ನೇರ ತೆರಿಗೆ ಸಂಹಿತೆಯ ಸಮಿತಿಯು ಜುಲೈ 31 ರಂದು ತನ್ನ ವರದಿಯನ್ನು ಸಲ್ಲಿಸಲಿದೆ. ಹೆಚ್ಚಿನ ಲೆಕ್ಕವಿಲ್ಲದ ಆದಾಯ ಹೊಂದಿರುವ ಕ್ಷೇತ್ರಗಳಲ್ಲಿ ರಿಯಲ್ ಎಸ್ಟೇಟ್, ಗಣಿಗಾರಿಕೆ, ಔಷಧಿಯ ವಸ್ತುಗಳು, ಪಾನ್ ಮಸಾಲಾ, ಗುಟ್ಕಾ ಮತ್ತು ತಂಬಾಕು, ಬೆಳ್ಳಿ ಮತ್ತು ಸರಕು ಮಾರುಕಟ್ಟೆಗಳು, ಚಲನಚಿತ್ರೋದ್ಯಮ, ಶಿಕ್ಷಣ ಸಂಸ್ಥೆಗಳು ಮತ್ತು ವೃತ್ತಿಪರರು ಸೇರಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ. ಇತರ ವಲಯಗಳಾದ ಸೆಕ್ಯುರಿಟೀಸ್ ಮಾರುಕಟ್ಟೆ ಮತ್ತು ಉತ್ಪಾದನೆ, ಲೆಕ್ಕವಿಲ್ಲದ ಆದಾಯದ ಹೆಚ್ಚಿನ ಪ್ರಮಾಣವನ್ನು ತೋರಿಸಿದೆ.
ಎನ್‌ಸಿಎಇಆರ್ ಅಂದಾಜಿನ ಪ್ರಕಾರ ಇದು ಆರ್ಥಿಕತೆಯ ಶೇಕಡಾ 55 ರಿಂದ 120 ರಷ್ಟಿದೆ. ನ್ಯಾ, ಎಂ ಬಿ ಷಾ ನೇತೃತ್ವದ ಎಸ್‌ಐಟಿ, 20 ಲಕ್ಷ ರೂ.ಗಳ ಹಿಂದಿನ ಸಲಹೆಯ ಬದಲು ನಗದು ಹಿಡುವಳಿ ಮಿತಿಯನ್ನು 1 ಕೋಟಿ ರೂ.ಗೆ ಬದಲಿಸಬೇಕು. ಆ ಮಿತಿಯನ್ನು ಮೀರಿದ ಮುಟ್ಟುಗೊಲು ಹಾಕಿಕೊಂಡ ಸಂಪೂರ್ಣ ಮೊತ್ತವು ಸರ್ಕಾರದ ಖಜಾನೆಗೆ ಹೋಗಬೇಕು ಎಂದು ಶಿಫಾರಸು ಮಾಡಿತ್ತು. ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ಸರ್ಕಾರವು 2014 ರ ಮೇ ತಿಂಗಳಲ್ಲಿ ಎಸ್‌ಐಟಿಯನ್ನು ರಚಿಸಿತ್ತು. ಇದುವರೆಗೆ ಕನಿಷ್ಠ 5 ವರದಿಗಳನ್ನು ನ್ಯಾ. ಷಾ ನೇತೃತ್ವದ ಎಸ್‌ಐಟಿ ಸಲ್ಲಿಸಿದೆ ಎನ್ನಲಾಗ್ತಿದೆ.