ನವದೆಹಲಿ: ದೇಶದ 'ಪ್ರಮುಖ ವಿಮಾನ ನಿಲ್ದಾಣ'ದ ವ್ಯಾಖ್ಯಾನ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರವು ಬುಧವಾರ ಲೋಕಸಭೆಯಲ್ಲಿ ಮಸೂದೆ ಮಂಡಿಸಿತು.
ಬಹುಉದ್ದೇಶಿತ ಮಸೂದೆಯಿಂದಾಗಿ ಒಂದು ಗ್ರೂಪ್ನ ವಿಮಾನ ನಿಲ್ದಾಣಗಳಿಗೆ ಸುಂಕ ನಿರ್ಧರಿಸಲು ಹಾಗೂ ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿ ಉತ್ತೇಜಿಸುವ ಪರದೆ ವಿಸ್ತರಣೆಯಾಗುತ್ತದೆ ಎಂದು ಹೇಳಿದೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, 2021ರ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಪರಿಚಯಿಸಿದರು. ಇದು ಪ್ರಮುಖ ವಿಮಾನ ನಿಲ್ದಾಣದ ವ್ಯಾಖ್ಯಾನವನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಿದೆ.
ಇದನ್ನೂ ಓದಿ: ಅತ್ಯಾಧುನಿಕ ಟೆಸ್ಲಾ ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಬಿಗ್ ಆಫರ್ ಕೊಟ್ಟ ಎಲಾನ್ ಮಸ್ಕ್!
ಭಾರತದ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವು ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಏರೋನಾಟಿಕಲ್ ಶುಲ್ಕದ ಸುಂಕ ನಿರ್ಧರಿಸುತ್ತಿದೆ.
ಪ್ರಸ್ತುತ ಕಾಯ್ದೆಯಡಿ, ಪ್ರಮುಖ ವಿಮಾನ ನಿಲ್ದಾಣ ಎಂದರೆ ವಾರ್ಷಿಕ ಪ್ರಯಾಣಿಕರ ಸಂಖ್ಯೆ ಮೂರೂವರೆ ದಶಲಕ್ಷಕ್ಕಿಂತ ಹೆಚ್ಚು ಹೊಂದಿರುವ ಯಾವುದೇ ವಿಮಾನ ನಿಲ್ದಾಣ ಇದರ ವ್ಯಾಪ್ತಿಗೆ ಒಳಪಡುತ್ತದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಹೆಚ್ಚಿನ ಸಂಖ್ಯೆಯ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ದೂರದ ಪ್ರದೇಶಗಳಿಗೆ ವಾಯು ಸಂಪರ್ಕ ವಿಸ್ತರಣೆಗೂ ಅನುಕೂಲವಾಗುತ್ತದೆ. ಲಾಭದಾಯಕ ಮತ್ತು ಲಾಭರಹಿತ ವಿಮಾನ ನಿಲ್ದಾಣಗಳನ್ನು ಹೊಂದಿರುವ ವಿಮಾನ ನಿಲ್ದಾಣಗಳನ್ನು ಜೋಡಿಸಲು ಸರ್ಕಾರ ನಿರ್ಧರಿಸಿದೆ.