ನವದೆಹಲಿ: ದೇಶದಲ್ಲಿನ ಬ್ಯಾಂಕುಗಳು ಆಗಸ್ಟ್‌ನಲ್ಲಿ ಬರೋಬ್ಬರಿ 15 ದಿನಗಳವರೆಗೆ ಬಂದ್ ಆಗಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕ್ಯಾಲೆಂಡರ್ ಪ್ರಕಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ, ಆಗಸ್ಟ್ ತಿಂಗಳಲ್ಲಿ ಒಟ್ಟು ಎಂಟು ರಜಾದಿನಗಳಿವೆ. ಈ 8 ರಜಾದಿನಗಳಲ್ಲಿ ಕೆಲವು ರಾಜ್ಯಗಳ ನಿರ್ದಿಷ್ಟ ರಜಾದಿನಗಳಾಗಿದ್ದು ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುವುದಿಲ್ಲ.
ದೇಶದಲ್ಲಿ ಬ್ಯಾಂಕ್‌ಗಳ ರಜಾದಿನಗಳನ್ನು 3 ವಿಭಾಗಗಳಲ್ಲಿ ವರ್ಗೀಕರಣ
ನೆಗೋಶಿಯಬಲ್ ಇನ್‌ಸ್ಟ್ರೂಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನಗಳು, ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾದಿನಗಳು ಮತ್ತು ಬ್ಯಾಂಕುಗಳ ಖಾತೆಗಳನ್ನು ಮುಚ್ಚುವುದು. ಆಗಸ್ಟ್ ತಿಂಗಳಲ್ಲಿ ರಾಜ್ಯ ನಿರ್ದಿಷ್ಟ ರಜಾದಿನಗಳು ನೆಗೋಶಿಯಬಲ್ ಇನ್‌ಸ್ಟ್ರೂಮೆಂಟ್ಸ್ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ.
ಇಂಫಾಲದಲ್ಲಿರುವ ಬ್ಯಾಂಕ್‌ಗಳು ಆಗಸ್ಟ್ 13 ರಂದು ರಜಾದಿನವನ್ನು ಆಚರಿಸುತ್ತವೆ. ಆದರೆ ಪಾರ್ಸಿ ಹೊಸ ವರ್ಷದ ಆಗಸ್ಟ್ 16 ರಂದು ಮುಂಬೈ, ನಾಗ್ಪುರ ಮತ್ತು ಬೇಲಾಪುರದ ಬ್ಯಾಂಕುಗಳು ಬಂದ್ ಆಗಲಿವೆ.
ಆಗಸ್ಟ್ 19 ರಂದು ಮೊಹರಂ ಸಂದರ್ಭದಲ್ಲಿ ಬ್ಯಾಂಕ್‌ಗಳು ಬೆಂಗಳೂರು, ಭುವನೇಶ್ವರ, ಐಜ್ವಾವಾಲ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್‌ಟಾಕ್, ಗುವಾಹಟಿ, ಇಂಫಾಲ, ಕೊಚ್ಚಿ, ಪಣಜಿ, ಶಿಲ್ಲಾಂಗ್, ಶಿಮ್ಲಾ ಮತ್ತು ತಿರುವನಂತಪುರಂನಲ್ಲಿ ತೆರೆದಿರುತ್ತವೆ.
ಬೆಂಗಳೂರು, ಚೆನ್ನೈ, ಕೊಚ್ಚಿ, ಮತ್ತು ತಿರುವನಂತಪುರಂನಲ್ಲಿ ಮೊಹರಂ/ಓಣಂ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆದರೆ ಆನ್‌ಲೈನ್ ಸೇವೆಗಳು ಮತ್ತು ಎಟಿಎಂಗಳು ಮುಕ್ತ ಹಾಗೂ ವಾರದ 24 ಗಂಟೆ (24/7) ಕ್ರಿಯಾತ್ಮಕವಾಗಿರುತ್ತವೆ.