ETV Bharat / business

ಪ್ರಧಾನಿಯ 'ಜನತಾ ಕರ್ಫ್ಯೂ'ಗೆ ಬ್ಯಾಂಕ್​ ನೌಕರರ ಮುಷ್ಕರ ವಾಪಸ್... ಮೋದಿ ನಡೆಗೆ ಕೇರಳ ಸಿಎಂ ಸಾಥ್​ - ಕೊರೊನಾ ವೈರಸ್

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರ ಹೇಳಿಕೆಯ ಹಿಂದಿನ ಆಶಯಗಳನ್ನು ಅರಿತುಕೊಂಡು ಮುಷ್ಕರವನ್ನು ಕೈಬಿಡಲಾಗಿದೆ. ರಾಷ್ಟ್ರೀಯ ಆರೋಗ್ಯಕ್ಕೆ ಕೊರೊನಾ ರೂಪದಲ್ಲಿ ಕಠಿಣ ಸನ್ನಿವೇಶ ಎದುರಾಗಿದೆ. ಹೀಗಾಗಿ, ಇದಕ್ಕೆ ಪ್ರತಿಯಾಗಿ ಬ್ಯಾಂಕ್​ ಕರೆ ನೀಡಿದ್ದ ಪ್ರತಿಭಟನೆಯನ್ನು ಕೈಬಿಡಲಾಗಿದೆ. ಎಲ್ಲಾ ಆಂದೋಲನ ಕಾರ್ಯಕ್ರಮಗಳು ಸಹ ರದ್ದುಗೊಂಡಿವೆ ಎಂದು ಎಐಬಿಇಎ ಕಾರ್ಯದರ್ಶಿ ಚಿ.ಎಚ್​. ವೆಂಕಟಚಲಂ ಹೇಳಿದ್ದಾರೆ.

Janata Curfew
ಜನತಾ ಕರ್ಪ್ಯೂ
author img

By

Published : Mar 20, 2020, 8:45 PM IST

ನವದೆಹಲಿ: ಬ್ಯಾಂಕಿಂಗ್ ವಲಯದ ಎರಡು ದೊಡ್ಡ ಸಂಘಟನೆಗಳಾದ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ (ಎಐಬಿಇಎ) ಹಾಗೂ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಎ) ಮಾರ್ಚ್​ 27ರಂದು ಕರೆ ನೀಡಿದ ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಂಡಿವೆ.

ಈ ಎರಡೂ ಬ್ಯಾಂಕ್​ ಒಕ್ಕೂಟಗಳು ಸಾರ್ವಜನಿಕ ಬ್ಯಾಂಕ್​​ಗಳ ವಿಲೀನ ಹಾಗೂ ಐಡಿಬಿಐ ಬ್ಯಾಂಕ್​ನ ಖಾಸಗೀಕರಣದ ಕೇಂದ್ರದ ನೀತಿಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭನೆಗೆ ಕರೆ ನೀಡಿದ್ದವು.

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರ ಹೇಳಿಕೆಯ ಹಿಂದಿನ ಆಶೆಯಗಳನ್ನು ಅರಿತುಕೊಂಡು ಮುಷ್ಕರವನ್ನು ಕೈಬಿಡಲಾಗಿದೆ. ರಾಷ್ಟ್ರೀಯ ಆರೋಗ್ಯಕ್ಕೆ ಕೊರೊನಾ ರೂಪದಲ್ಲಿ ಕಠಿಣ ಸನ್ನಿವೇಶ ಎದುರಾಗಿದೆ. ಹೀಗಾಗಿ, ಇದಕ್ಕೆ ಪ್ರತಿಯಾಗಿ ಬ್ಯಾಂಕ್​ ಕರೆ ನೀಡಿದ್ದ ಪ್ರತಿಭಟನೆಯನ್ನು ಕೈಬಿಡಲಾಗಿದೆ. ಎಲ್ಲಾ ಆಂದೋಲನ ಕಾರ್ಯಕ್ರಮಗಳು ಸಹ ರದ್ದುಗೊಂಡಿವೆ ಎಂದು ಎಐಬಿಇಎ ಕಾರ್ಯದರ್ಶಿ ಚಿ.ಎಚ್​. ವೆಂಕಟಚಲಂ ಹೇಳಿದ್ದಾರೆ.

ಕೇರಳ ಸಿಎಂ ಸಾಥ್

: ಪ್ರಧಾನಿ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೆಂಬಲಿಸುವುದಾಗಿ ತಿಳಿಸಿದ್ದಾರೆ.

  • Kerala CM Pinarayi Vijayan: State govt will fully support the 'Janata Curfew' called by Prime Minister on March 22. State Transport Corporation buses & public transports will be kept off roads. Metro will also not operate on that day. People should stay at home. pic.twitter.com/wTRK5RV5n8

    — ANI (@ANI) March 20, 2020 " class="align-text-top noRightClick twitterSection" data=" ">

ಪ್ರಧಾನಿ ಮೋದಿ ಮಾರ್ಚ್​ 22ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಕೇರಳ ರಾಜ್ಯ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಲಿದೆ. ರಾಜ್ಯ ಸಾರಿಗೆ ನಿಗಮದ ಬಸ್​​ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳು ಅಂದು ರಸ್ತೆಗೆ ಇಳಿಯುವುದಿಲ್ಲ. ಕೊಚ್ಚಿ ಮೆಟ್ರೋ ರೈಲು ಸಹ ತನ್ನ ಸಂಚಾರ ಸ್ಥಗಿತಗೊಳಿಸಲಿದೆ. ಜನರು ಮನೆಯಲ್ಲಿ ಇರಬೇಕು ಎಂದು ವಿಜಯನ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.