ಮುಂಬೈ: ಬ್ಯಾಂಕ್ಗಳಿಂದ ಪಡೆದ ಸಾಲವನ್ನು ಮರುಪಾವತಿಸಿದ ವಂಚಿಸಿದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ವರದಿಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಬ್ಯಾಂಕ್ಗಳಿಗೆ ವಂಚನೆಯ ಪ್ರಮಾಣ ಶೇ 15ರಷ್ಟು ಹೆಚ್ಚಳವಾಗಿದೆ. 2018-19ನೇ ಸಾಲಿನಲ್ಲಿ ಒಟ್ಟು ₹ 71,542.93 ಕೋಟಿ ವಂಚನೆ ಆಗಿರುವುದು ಕಂಡುಬಂದಿದೆ.
ಕಳೆದ ವರ್ಷದ 2017-18ನೇ ಸಾಲಿನಲ್ಲಿ ₹ 41,167.04 ಕೋಟಿ ವಂಚನೆ ನಡೆದಿತ್ತು. ಆದರೆ, ಈ ವರ್ಷದ ಹೆಚ್ಚುವರಿಯಾಗಿ ₹ 30,000 ಕೋಟಿ ನಷ್ಟ ಉಂಟಾಗಿದೆ. ವಂಚನೆಯಾಗಿರುವ ಬಹುಪಾಲು ಹಣ ಸಾಲದ ರೂಪದಲ್ಲಿದ್ದು, ಒಟ್ಟು 6,801 ಬ್ಯಾಂಕ್ ವಂಚನೆಯ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 5,916 ಬ್ಯಾಂಕ್ ವಂಚನೆ ಪ್ರಕರಣಗಳಿದ್ದವು. ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ 3,766 ಪ್ರಕರಣಗಳಿಂದ ಒಟ್ಟು ₹ 64,509.43 ಕೋಟಿ ವಂಚನೆಯಾಗಿದೆ.