ETV Bharat / business

ಪದೇ ಪದೆ ಮುಷ್ಕರ ಹೂಡುವ ಬ್ಯಾಂಕ್​ ನೌಕರರಿಗೆ ಕೇಂದ್ರದ ಮೂಗುದಾರ..!?

ಬ್ಯಾಂಕ್ ನೌಕರರು ಪದೇ ಪದೆ ಮುಷ್ಕರಕ್ಕೆ ಕರೆ ನೀಡಿ ಸಾರ್ವಜನಿಕರಿಗೆ ತೊಂದರೆ ಕೊಡದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಮುಷ್ಕರಕ್ಕೆ ಕನಿಷ್ಠ 14 ದಿನಗಳ ಮೊದಲು ಬ್ಯಾಂಕ್​ಗಳು ನೋಟಿಸ್ ನೀಡಬೇಕಾಗುತ್ತದೆ ಎಂದು ಹಣಕಾಸು ಸಚಿವಾಲಯವನ್ನು ಉಲ್ಲೇಖಿಸಿದ ವರದಿ ಆಧಾರಸಿ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.

ಸಾಂದರ್ಭಿಕ ಚಿತ್ರ
author img

By

Published : Oct 23, 2019, 11:30 PM IST

Updated : Oct 24, 2019, 7:01 AM IST

ನವದೆಹಲಿ: ಸಾರ್ವಜನಿಕರ ನಿತ್ಯದ ಉಪಯುಕ್ತ ಕ್ಷೇತ್ರದಲ್ಲಿರುವ ಬ್ಯಾಂಕ್ ನೌಕರರು ಪದೇ ಪದೆ ಮುಷ್ಕರಕ್ಕೆ ಕರೆ ನೀಡಿ ತೊಂದರೆ ಕೊಡದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ಹೇಳಲಾಗುತ್ತಿದೆ.

ಮುಷ್ಕರಕ್ಕೆ ಕನಿಷ್ಠ 14 ದಿನಗಳ ಮೊದಲು ಬ್ಯಾಂಕ್​ಗಳು ನೋಟಿಸ್ ನೀಡಬೇಕಾಗುತ್ತದೆ ಎಂದು ಹಣಕಾಸು ಸಚಿವಾಲಯವನ್ನು ಉಲ್ಲೇಖಿಸಿದ ವರದಿ ಆಧಾರಸಿ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.

ಇತ್ತೀಚೆಗೆ ಎರಡು ಬ್ಯಾಂಕ್​ ಒಕ್ಕೂಟಗಳ ನೌಕರರು ಒಂದು ದಿನದ ಮುಷ್ಕರಕ್ಕೆ ಕುಳಿತಿದ್ದರಿಂದ ಭಾರತದಾದ್ಯಂತ ಬ್ಯಾಂಕಿಂಗ್​ ವ್ಯವಸ್ಥೆ ಕಾರ್ಯಾಚರಣೆಗಳ ಮೇಲೆ ಭಾಗಶಃ ಹೊಡೆತ ಬಿದ್ದಿದೆ. ಕೆಲವು ಬ್ಯಾಂಕ್ ಅಧಿಕಾರಿಗಳ ಸಂಘವು ಮುಷ್ಕರ ನಿರತರಿಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದರು.

ಸಾರ್ವಜನಿಕ ವಲಯದ 10 ಬ್ಯಾಂಕ್​ಗಳನ್ನು ನಾಲ್ಕು ದೊಡ್ಡ ಬ್ಯಾಂಕ್​ಗಳಾಗಿ ವಿಲೀನಗೊಳಿಸುವ ಪ್ರಧಾನಿ ಮೋದಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಹಾಗೂ ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್‌ಐ) ಪ್ರತಿಭಟನೆಗೆ ಕರೆ ನೀಡಿದ್ದವು. ಬ್ಯಾಂಕಿಂಗ್ ಸೇವೆಗಳಾದ ನಗದು ಹಿಂಪಡೆಯುವಿಕೆ, ಠೇವಣಿ ಇರಿಸುವಿಕೆ, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಇತರ ಸೇವೆಗಳಲ್ಲಿ ದೇಶಾದ್ಯಂತ ವ್ಯತ್ಯಯ ಉಂಟಾಗಿತ್ತು.

Intro:Body:Conclusion:
Last Updated : Oct 24, 2019, 7:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.