ETV Bharat / business

ತೆವಳುತ್ತಾ ಸಾಗಿದ ವಾಹನ ಬಿಡಿಭಾಗಗಳ ಉದ್ಯಮ: ಏಕರೂಪದ ಶೇ 18% ಜಿಎಸ್​ಟಿ ಸ್ಲ್ಯಾಬ್​ಗೆ ಮನವಿ

ಕೋವಿಡ್​ 19 ವೈರಾಣು ತಂದೊಡ್ಡಿದ ಸವಾಲಿನಿಂದ ಉದ್ಯಮದ ವಹಿವಾಟು ಕ್ಷೀಣಿಸಿದೆ. ದೇಶದ 50 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸುವ ಉದ್ಯಮವು ತನ್ನ ಪುನರುಜ್ಜೀವನಕ್ಕೆ ಆಟೋ ಘಟಕಗಳ ಮತ್ತು ವಾಹನಗಳ ಮೇಲೆ ಜಿಎಸ್​​​ ಕಡಿತವನ್ನು ಬಯಸುತ್ತಿದೆ.

Auto component
ವಾಹನ ಬಿಡಿಭಾಗ
author img

By

Published : Aug 19, 2020, 9:27 PM IST

ನವದೆಹಲಿ: ದೇಶದ ಜಿಡಿಪಿಯಲ್ಲಿ ಶೇ 2.3ರಷ್ಟು ಪಾಲು ಹೊಂದಿರುವ ಆಟೋ ಕಾಂಪೊನೆಂಟ್ ಉದ್ಯಮವು ತೆರಿಗೆ ಕಡಿತದ ಬೆಂಬಲದ ಎದುರು ನೋಡುತ್ತಿದೆ ಎಂದು ಉದ್ಯಮ ಸಂಸ್ಥೆ ಎಸಿಎಂಎ ಹೇಳಿದೆ.

ಕೋವಿಡ್​ 19 ವೈರಾಣು ತಂದೊಡ್ಡಿದ ಸವಾಲಿನಿಂದ ಉದ್ಯಮದ ವಹಿವಾಟು ಕ್ಷೀಣಿಸಿದೆ. ದೇಶದ 50 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸುವ ಉದ್ಯಮವು ತನ್ನ ಪುನರುಜ್ಜೀವನಕ್ಕೆ ಆಟೋ ಘಟಕಗಳ ಮತ್ತು ವಾಹನಗಳ ಮೇಲೆ ಜಿಎಸ್​​​ ಕಡಿತ ಬಯಸುತ್ತಿದೆ.

ವಾಹನ ಉದ್ಯಮ ಚೇತರಿಕೆ ಅನುಕೂಲ ಆಗುವಂತೆ ಜಿಎಸ್​ಟಿ ದರದಲ್ಲಿ ಸ್ಲ್ಯಾಬ್ ಕಡಿತ ಮಾಡಬೇಕು. ಸದ್ಯದ ಸಂಕಷ್ಟದ ಪರಿಸ್ಥಿತಿಯಲ್ಲಿ ಉದ್ಯಮದ ನೆರವಿಗೆ ಬರುವಂತೆ ಭಾರತೀಯ ವಾಹನ ಬಿಡಿಭಾಗಗಳ ತಯಾರಕರ ಒಕ್ಕೂಟ (ಎಂಸಿಎಂಎ) ಸರ್ಕಾರವನ್ನು ಕೋರಿದೆ.

ಎಲ್ಲಾ ವಾಹನ ವಿಭಾಗಗಳ ಮೇಲಿನ ಜಿಎಸ್‌ಟಿ ಸ್ಲ್ಯಾಬ್​ ಶೇ 18ಕ್ಕೆ ಇಳಿಸಬೇಕು. ಪ್ರೋತ್ಸಾಹ ಆಧಾರಿತ ಸ್ಕ್ರ್ಯಾಪೇಜ್ ನೀತಿ ಪರಿಚಯಿಸುವ ಮೂಲಕ ದೇಶದಲ್ಲಿ ವಾಹನ ಬೇಡಿಕೆ ಹೆಚ್ಚಿಸಬೇಕು ಎಂದು ಎಸಿಎಂಎ ಅಧ್ಯಕ್ಷ ದೀಪಕ್ ಜೈನ್ ಸುದ್ದಿಗಾರರಿಗೆ ತಿಳಿಸಿದರು.

ಘಟಕಗಳ ವಲಯಕ್ಕೆ ಸಂಬಂಧಿಸಿದಂತೆ ವಾಹನಗಳ ಬಿಡಿಭಾಗಗಳ ವಲಯದಾದ್ಯಂತ ಏಕರೂಪದ ಶೇ 18ರಷ್ಟು ಜಿಎಸ್​​ಟಿ ದರ ನಿಗದಿಪಡಿಸುವಂತೆ ಶಿಫಾರಸು ಮಾಡುವುದನ್ನು ಮುಂದುವರೆಸಿದೆ. ಪ್ರಸ್ತುತ 60 ಪ್ರತಿಶತ ಬಿಡಿಭಾಗಗಳಿಗೆ ಶೇ 18 ತೆರಿಗೆ, ಉಳಿದ ಶೇ 40ರಷ್ಟು ಯೂನಿಟ್​ಗಳಿಗೆ ಶೇ 28ರಷ್ಟು ಜಿಎಸ್​ಟಿ ವಿಧಿಸಲಾಗುತ್ತಿದೆ. ಇದನ್ನು ಏಕರೂಪಗೊಳಿಸುವಂತೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.