ETV Bharat / business

ಜಾಗತಿಕ ಶಸ್ತ್ರಾಸ್ತ್ರ ಮಾರಾಟ: ಅಮೆರಿಕ, ರಷ್ಯಾ, ಇಂಗ್ಲೆಂಡ್​​ ಮಧ್ಯೆ ಪೈಪೋಟಿ... ಮೂವರಲ್ಲಿ ನಂ-1 ಯಾರು? - ಎಸ್​​ಐಪಿಆರ್​ಐನ ಶಸ್ತ್ರಾಸ್ತ್ರ ಮಾರಾಟ ವರದಿ

ವಿಶ್ವದಲ್ಲೇ ಅತ್ಯಧಿಕ ಯುದ್ಧೋಪಕರಣಗಳನ್ನು ಮಾರಾಟ ಮಾಡುವ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲನೇ ಸ್ಥಾನದಲಿದೆ. ಜಾಗತಿಕವಾಗಿ ಶೇ 59ರಷ್ಟು 246 ಬಿಲಿಯನ್ ಡಾಲರ್​ (17.53 ಲಕ್ಷ ಕೋಟಿ ರೂ.) ಪಾಲನ್ನು ಈ ಒಂದು ರಾಷ್ಟ್ರ ಹೊಂದಿದೆ. ನಂತರದ ಸ್ಥಾನವನ್ನು ರಷ್ಯಾ, ಇಂಗ್ಲೆಂಡ್​ ಮತ್ತು ಫ್ರಾನ್ಸ್​ ಹೊಂದಿವೆ ಎಂದು ಸ್ಟಾಕ್​ಹೋಮ್​ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ.

Arms sales
ಶಸ್ತ್ರಾಸ್ತ್ರ ಮಾರಾಟ
author img

By

Published : Dec 9, 2019, 10:14 AM IST

ಸ್ಟಾಕ್​ಹೋಮ್​: ಜಾಗತಿಕ ಮಿಲಿಟರಿ ಸಂಬಂಧಿತ ಯುದ್ಧೋಪಕರಣಗಳ ಮಾರುಕಟ್ಟೆಯು 2018ರಲ್ಲಿ ಶೇ 5ರಷ್ಟು ಏರಿಕೆಯಾಗಿದೆ ಎಂದು ಸ್ಟಾಕ್​ಹೋಮ್​ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಎಸ್​​ಐಪಿಆರ್​ಐ) ತಿಳಿಸಿದೆ.

ಎಸ್​​ಐಪಿಆರ್​ಐ, ಶಸ್ತ್ರಾಸ್ತ್ರ ಮಾರಾಟದ ತನ್ನ ವರದಿಯನ್ನು ಇಂದು ಬಿಡುಗಡೆ ಮಾಡಿದೆ. ವಿಶ್ವದ ಅತಿದೊಡ್ಡ 100 ಯುದ್ಧೋಪಕರಣ ತಯಾರಿಕಾ ಘಟಕಗಳನ್ನು ಈ ವರದಿಗೆ ಬಳಸಿಕೊಂಡಿದ್ದು, ಒಟ್ಟಾರಿ ಮಾರಾಟದ ಮೊತ್ತವು 420 ಬಿಲಿಯನ್ ಡಾಲರ್​ನಷ್ಟಿದೆ (29.9 ಲಕ್ಷ ಕೋಟಿ ರೂ.) ಎಂದು ಹೇಳಿದೆ.

ವಿಶ್ವದಲ್ಲೇ ಅತ್ಯಧಿಕ ಯುದ್ಧೋಪಕರಣಗಳನ್ನು ಮಾರಾಟ ಮಾಡುವ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲನೇ ಸ್ಥಾನದಲಿದೆ. ಜಾಗತಿಕವಾಗಿ ಶೇ 59ರಷ್ಟು 246 ಬಿಲಿಯನ್ ಡಾಲರ್​ (17.53 ಲಕ್ಷ ಕೋಟಿ ರೂ.) ಪಾಲನ್ನು ಈ ಒಂದು ರಾಷ್ಟ್ರ ಹೊಂದಿದೆ ಎಂದು ಎಸ್​​ಐಪಿಆರ್​ಐ ತಿಳಿಸಿದೆ.

ಅಮೆರಿಕ ಶಸ್ತ್ರಾಸ್ತ್ರ ಮಾರಾಟವನ್ನು ಒಂದು ವರ್ಷದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಟ್ರಂಪ್ ಆಡಳಿತದ ನಿರ್ಧಾರಗಳಿಂದ ಪ್ರತಿ ಸ್ಪರ್ಧಿ ರಾಷ್ಟ್ರಗಳಾದ ರಷ್ಯಾ ಮತ್ತು ಫ್ರಾನ್ಸ್​ಗಿಂತಲೂ ಮುಂದಿದೆ ಎಂದು ಎಸ್​​ಐಪಿಆರ್​ಐನ ಶಸ್ತ್ರಾಸ್ತ್ರ ವರ್ಗಾವಣೆ ಮತ್ತು ಮಿಲಿಟರಿ ಖರ್ಚು ಯೋಜನಾ ನಿರ್ದೇಶಕ ಆಡ್ ಫ್ಲೆರಂಟ್ ಹೇಳಿದ್ದಾರೆ.

ಯುದ್ಧೋಪಕರಣಗಳ ತಯಾರಿಕೆಯ ಮಾರಾಟದಲ್ಲಿ ರಷ್ಯಾ (ಶೇ 8.6ರಷ್ಟು) ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್​ ಶೇ 8.4 ಮತ್ತು ಫ್ರಾನ್ಸ್​ ಶೇ 5.5ರ ಮುಖೇನ ನಂತರದ 3 ಮತ್ತು 4ನೇ ಸ್ಥಾನದಲ್ಲಿವೆ. ಸರಿಯಾದ ದತ್ತಾಂಶಗಳು ಸಿಗದ ಕಾರಣ ಚೀನಾವನ್ನು ವರದಿಯಲ್ಲಿ ಪರಿಗಣಿಸಲಾಗಿಲ್ಲ ಎಂದು ಎಸ್​​ಐಪಿಆರ್​ಐ ತಿಳಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.