ETV Bharat / business

ರೈತರೇ ಉದ್ಯಮಿಗಳಾಗಲು ಮೋದಿ 'ಆತ್ಮನಿರ್ಭರ ಅಗ್ರಿಕಲ್ಚರ್​' ರೂಪಿಸಿದ್ದಾರೆ: ಗೌತಮ್ ಅದಾನಿ - Rural India

ರೈತರನ್ನು ಉದ್ಯಮಿಗಳಾಗಿ ಪರಿವರ್ತಿಸಲು ಕರೆ ನೀಡಿ 'ಆತ್ಮನಿರ್ಭರ ಅಗ್ರಿಕಲ್ಚರ್' ದೃಷ್ಟಿಕೋನವನ್ನು ಪ್ರಧಾನಿ ನರೇಂದ್ರ ಮೋದಿ ರೂಪಿಸಿದ್ದಾರೆ ಎಂದು ಉದ್ಯಮಿ ಗೌತಮ್‌ ಅದಾನಿ ಶ್ಲಾಘಿಸಿದರು.

Rural India
ಗ್ರಾಮೀಣ ಭಾರತ
author img

By

Published : Aug 14, 2020, 5:29 PM IST

ನವದೆಹಲಿ: ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಲಸೆ ಹೋಗುವುದನ್ನು ನಿಭಾಯಿಸದ ಹೊರತು ಭಾರತದ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಉದ್ಯಮಿ ಗೌತಮ್ ಅದಾನಿ ಹೇಳಿದ್ದಾರೆ.

ಗುಜರಾತ್‌ನ ಆನಂದ್ ಮೂಲದ ಗ್ರಾಮೀಣ ನಿರ್ವಹಣಾ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷಿ ಮತ್ತು ಆಹಾರ ಸಂಸ್ಕರಣಾ ಘಟಕಗಳನ್ನು ಉತ್ತೇಜಿಸಲು ಕ್ಲಸ್ಟರ್ ಆಧಾರಿತ ನೀತಿ ಮತ್ತು ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಭಾರತದಲ್ಲಿ ಒಟ್ಟಾರೆ ವಲಸೆ ಕಾರ್ಮಿಕರ ಸಂಖ್ಯೆ 100 ಮಿಲಿಯನ್ ದಾಟಿದೆ. ಭಾರತದಲ್ಲಿ ನಾಲ್ವರು ಕಾರ್ಮಿಕರಲ್ಲಿ ಓರ್ವ ವಲಸಿಗರಿದ್ದಾರೆ. ಕೆಲವು ವಲಸೆ ಪ್ರಯೋಜನಕಾರಿಯಾಗಿದೆ. ಹೀಗಿದ್ದರೂ ಗ್ರಾಮೀಣದಿಂದ ನಗರಕ್ಕೆ ವಲಸೆ ಹೆಚ್ಚುತ್ತಿರುವ ಸಮಸ್ಯೆಯನ್ನು ನಾವು ನಿಭಾಯಿಸದಿದ್ದರೆ, ಭಾರತದ ಬೆಳವಣಿಗೆಗೆ ಅಡ್ಡಿಯಾಗುತ್ತದೆ.

ಕೋವಿಡ್​-19 ಬಿಕ್ಕಟ್ಟಿನಿಂದಾಗಿ ತಮ್ಮ ಹಳ್ಳಿಗಳಿಗೆ ಮರಳಲು ಪ್ರಯತ್ನಿಸುತ್ತಿರುವ ಲಕ್ಷಾಂತರ ವಲಸೆ ಕಾರ್ಮಿಕರ ಇತ್ತೀಚಿನ ಸಂಕಷ್ಟದ ಚಿತ್ರಗಳನ್ನು ನೀವೆಲ್ಲರೂ ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೀರಿ ಎಂದು ನನಗೆ ಖಾತ್ರಿಯಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ, ನಾವು ಈಗ ಗ್ರಾಮೀಣ ಆರ್ಥಿಕತೆಯ ಮಾದರಿ ಅಭಿವೃದ್ಧಿಪಡಿಸಬೇಕು. ಇದರಲ್ಲಿ ಸ್ಥಳೀಯರನ್ನು ಸ್ಥಳೀಯವಾಗಿ ಬಳಸಿಕೊಳ್ಳಬಹುದು. ಇದರರ್ಥ ನಮ್ಮ ಸ್ಥಳೀಯ ಆರ್ಥಿಕತೆಗಳು ಹೇಗೆ ರಚನಾತ್ಮಕ ಮತ್ತು ಸಮೂಹವಾಗಿರುತ್ತವೆ ಎಂಬುದನ್ನು ಮರುಪರಿಶೀಲಿಸಬೇಕಾಗಿದೆ ಎಂದು ತಿಳಿಸಿದರು.

ಇಸ್ರೇಲ್​ ನಡೆಯನ್ನು ಉದಾಹರಣೆ ನೀಡಿದ ಅದಾನಿ, ಗ್ರಾಮೀಣ ಮೂಲದ ಸಂಸ್ಕೃತಿಯ ಕಲಿಕೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ವಿಲೀನಗೊಳಿಸಿ ಸ್ವಾವಲಂಬನೆಯನ್ನೇ ಸಂಪೂರ್ಣ ಮಂತ್ರವನ್ನಾಗಿ ಮಾಡಿಕೊಂಡವರು ಇಸ್ರೇಲಿಗರು. ಕೋವಿಡ್​-19 ಬಿಕ್ಕಟ್ಟು ಗ್ರಾಮೀಣಾಭಿವೃದ್ಧಿ ಮಾದರಿಯನ್ನು ಪುನರ್ವಿಮರ್ಶಿಸಲು ನಮಗೆ ಅವಕಾಶ ನೀಡಿದೆ ಎಂದು ಹೇಳಿದರು.

ರೈತರನ್ನು ಉದ್ಯಮಿಗಳಾಗಿ ಪರಿವರ್ತಿಸಲು ಕರೆ ನೀಡಿ 'ಆತ್ಮನಿರ್ಭರ ಅಗ್ರಿಕಲ್ಚರ್' ದೃಷ್ಟಿಕೋನವನ್ನು ಪ್ರಧಾನಿ ನರೇಂದ್ರ ಮೋದಿ ರೂಪಿಸಿದ್ದಾರೆ ಎಂದು ಶ್ಲಾಘಿಸಿದರು.

ಭಾರತವು ಈಗಾಗಲೇ ವಿಶ್ವದ ಅತಿದೊಡ್ಡ ಹಾಲು, ದ್ವಿದಳ ಧಾನ್ಯಗಳು, ಬಾಳೆಹಣ್ಣು, ಮಾವು ಮತ್ತು ಪಪ್ಪಾಯಿ ಉತ್ಪಾದಿಸುತ್ತಿದೆ. ಅಕ್ಕಿ, ಗೋಧಿ, ಕಬ್ಬು, ನೆಲಗಡಲೆ, ತರಕಾರಿಗಳು, ಹಣ್ಣು ಮತ್ತು ಹತ್ತಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದು ಉತ್ತಮ ಕಾರ್ಯಗಳು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.