ETV Bharat / business

ಜಗತ್ತಿಗಾಗಿ ಮೇಕ್ ಇನ್ ಇಂಡಿಯಾ: 73 ವರ್ಷಗಳ ಆರ್ಥಿಕ ವೈಫಲ್ಯಗಳಿಗೆ ಪ್ರಧಾನಿ ಇತಿಶ್ರೀ

author img

By

Published : Aug 15, 2020, 5:19 PM IST

ಜಗತ್ತಿಗಾಗಿ ಮೇಕ್ ಇನ್ ಇಂಡಿಯಾ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. ಪೂರ್ವ ಏಷ್ಯಾದ ರಾಷ್ಟ್ರಗಳು ಮತ್ತು ಚೀನಾ ಹೆಣೆದ ತಂತ್ರಗಳಂತೆ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸಾಧಿಸಲು ಉದ್ಯಮಕ್ಕೆ ಇದು ಅಗತ್ಯವಾಗಿದೆ. ಪ್ರಧಾನಿ, 'ಆತ್ಮನಿರ್ಭರ ಭಾರತ ಕೇವಲ ಸರಕುಗಳನ್ನು ಆಮದು ಮಾಡಿಕೊಳ್ಳುವುದಲ್ಲ. ಭಾರತದಲ್ಲಿ ತಯಾರಿಸಿದ ಸರಕುಗಳ ಸಾಮರ್ಥ್ಯ, ಕೌಶಲ್ಯ ಮತ್ತು ಸೃಜನಶೀಲತೆಯನ್ನು ದ್ವಿಗುಣಗೊಳಿಸುವುದನ್ನೂ ಒಳಗೊಂಡಿರುತ್ತದೆ' ಎಂದಿದ್ದಾರೆ. ಈ ವಿಚಾರವನ್ನು ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಧೀರಜ್ ನಾಯರ್ ತಮ್ಮ ಅಂಕಣದಲ್ಲಿ ವಿವರಿಸಿದ್ದಾರೆ.

PM
ಪ್ರಧಾನಿ

ಹೈದರಾಬಾದ್​: 'ನಾವು ಕಚ್ಚಾ ವಸ್ತುಗಳನ್ನು ರಫ್ತು ಮಾಡಿಕೊಳ್ಳುವ ಮತ್ತು ಸಿದ್ಧಪಡಿಸಿದ ಸರಕುಗಳನ್ನು ಆಮದು ಮಾಡಿಕೊಳ್ಳುವ ದೇಶವಾಗುವುದನ್ನು ನಿಲ್ಲಿಸಬೇಕು'.

ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮಂತ್ರಿಯೊಬ್ಬರು ಇಂತಹ ಹೇಳಿಕೆ ಪ್ರತಿಪಾದಿಸುತ್ತಿರುವುದು ವ್ಯಂಗ್ಯದಿಂದ ಕೂಡಿದೆ. 1947ರಲ್ಲಿ ಭಾರತದ ಉದ್ಯಮಿ ಆಕಾಂಕ್ಷೆಯ ಅನ್ವೇಷಣೆಯಾಗಿತ್ತು. ವಸಾಹತುಶಾಹಿ ಆಡಳಿತ ಹೇರಿದ್ದ ವ್ಯಾಪಾರದ ಸ್ವರೂಪದಿಂದ ಕೊನೆಗೊಳಬೇಕಿತ್ತು. ಆದರೆ, ಭಾರತ ಯಶಸ್ವಿಯಾಗಲಿಲ್ಲ.

1991ರ ಮುಂಚಿನ ಆರ್ಥಿಕತೆಯ ಮುಚ್ಚಿದ ಶೈಲಿಯದ್ದಾಗಿತ್ತು. ಹಾಗಂತ ಅದರ ಮೇಲೆ ಆಪಾದನೆ ಹೊರಿಸುವುದು ನ್ಯಾಯವಲ್ಲ, ಅದು ತೀವ್ರ ಸ್ಪರ್ಧಾತ್ಮಕವಲ್ಲದ ಕೈಗಾರಿಕೆಗಳನ್ನು ಪೋಷಿಸಿತು. ಮೂವತ್ತು ವರ್ಷಗಳ ಉದಾರೀಕರಣ ಜೊತೆಗೆ ವ್ಯಾಪಾರ ಉದಾರೀಕರಣ ಮತ್ತು ಸಾಗರೋತ್ತರ ಮುಕ್ತ ವ್ಯಾಪಾರ ಒಪ್ಪಂದಗಳು ಸಹ ಸ್ಪರ್ಧಾತ್ಮಕ ಉತ್ಪಾದನಾ ವಲಯಕ್ಕೆ ಅನುಕೂಲ ಮಾಡಿಕೊಡುವಲ್ಲಿ ವಿಫಲವಾಗಿವೆ.

ಎರಡೂ ವೈಫಲ್ಯಗಳಿಗೆ ಒಂದು ಸಾಮಾನ್ಯ ಎಳೆ ಇದೆ:

ದೇಶೀಯ ರಚನಾತ್ಮಕ ಸುಧಾರಣೆಯಲ್ಲಿ ಮಾರುಕಟ್ಟೆಯ ಅನುಪಸ್ಥಿತಿ. ಇವು ಸ್ಪರ್ಧಾತ್ಮಕ ಮುಕ್ತ ಮಾರುಕಟ್ಟೆಯನ್ನು ಸೃಷ್ಟಿಸಬೇಕಿತ್ತು. ಆದರೆ, ಅದು ಕಾರ್ಯಸಾಧು ಆಗಲಿಲ್ಲ. ಕೆಲ ತಿಂಗಳ ಹಿಂದೆ ಪ್ರಧಾನಿ ಕರೆ ನೀಡಿದ 'ಆತ್ಮನಿರ್ಭಾರ ಭಾರತ'ದ ವ್ಯಾಖ್ಯಾನದ ಬಗ್ಗೆ ಸ್ವಲ್ಪ ಕಾಳಜಿ ಕಾಣಿಸುತ್ತಿದೆ. ಈ ಗುರಿ ಸಾಧಿಸುವ ಏಕೈಕ ಮಾರ್ಗವೆಂದರೇ ವ್ಯಾಪಾರ ನೀತಿ ಮತ್ತು ರಕ್ಷಣೆ. ಆದರೂ ಯಶಸ್ಸಿನ ಸಾಧ್ಯತೆಗಳು ಸೀಮಿತವಾಗಿರಲಿವೆ.

ಆತ್ಮನಿರ್ಭರ ಭಾರತದಲ್ಲಿನ ಕೊರತೆಯು ದುಬಾರಿ ದರದ ಆರ್ಥಿಕತೆ ಎಂದು ಅರ್ಥೈಸುವಂತಿಲ್ಲ (1991ರ ಮುಂಚಿನಂತೆ) ವ್ಯಾಪಾರ ಸಂರಕ್ಷಣೆಯು ಇತರ ರಚನಾತ್ಮಕ ಸುಧಾರಣೆಗೆ ನೆರವಾಗದಿದ್ದರೇ ಏನಾಗಬಹುದು. ಅದೃಷ್ಟವಶಾತ್, ಪ್ರಧಾನಿಗಳು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಈ ಹಿಂದಿನ ಅವಧಿಯಲ್ಲಿ ಇದ್ದಂತೆ ಇರುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಜಗತ್ತಿಗಾಗಿ ಮೇಕ್ ಇನ್ ಇಂಡಿಯಾ ಗುರಿ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. ಪೂರ್ವ ಏಷ್ಯಾದ ರಾಷ್ಟ್ರಗಳು ಮತ್ತು ಚೀನಾ ಹೆಣೆದ ತಂತ್ರಗಳಂತೆ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸಾಧಿಸಲು ಉದ್ಯಮಕ್ಕೆ ಇದು ಅಗತ್ಯವಾಗಿದೆ. ಪ್ರಧಾನಿ, 'ಆತ್ಮನಿರ್ಭರ ಭಾರತ ಕೇವಲ ಸರಕುಗಳನ್ನು ಆಮದು ಮಾಡಿಕೊಳ್ಳುವುದಲ್ಲ. ಭಾರತದಲ್ಲಿ ತಯಾರಿಸಿದ ಸರಕುಗಳ ಸಾಮರ್ಥ್ಯ, ಕೌಶಲ್ಯ ಮತ್ತು ಸೃಜನಶೀಲತೆಯನ್ನು ದ್ವಿಗುಣಗೊಳಿಸುವುದನ್ನು ಒಳಗೊಂಡಿರುತ್ತದೆ' ಎಂದಿದ್ದಾರೆ.

ಪೂರ್ವ ಏಷ್ಯಾದ ಉದಯೋನ್ಮುಖ ಆರ್ಥಿಕತೆಗಳ ಯಶಸ್ಸಿನ ಸೂತ್ರ ಅಲ್ಲಿನ ಶಿಕ್ಷಣ. ಶಿಕ್ಷಣವು ಬಲವಾದ ಅಡಿಪಾಯದ ಮೇಲೆ ತಳವೂರಿ ಜನರ ಸಾಮರ್ಥ್ಯ, ಕೌಶಲ್ಯ ಮತ್ತು ಸೃಜನಶೀಲತೆ ಬದಲಾಯಿಸಲು ಅವಕಾಶವಿಬೇಕು. ಇತ್ತೀಚೆಗೆ ಘೋಷಿಸಲಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನವು ಉದಾರೀಕರಣ ಪೂರ್ವ ಮತ್ತು ನಂತರ ಭಾರತದ ಭಿನ್ನವಾದ ಕೋರ್ಸ್​ ಆಗಿದೆ.

ಉತ್ಪನ್ನಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗಬೇಕಷ್ಟೇ ಅಲ್ಲ, ನೀತಿಗಳು ಮತ್ತು ಪ್ರಕ್ರಿಯೆಗಳ ಅಗತ್ಯವೂ ಪ್ರಧಾನಮಂತ್ರಿ ಒತ್ತಿ ಹೇಳಿದ್ದಾರೆ. ಸರ್ಕಾರಿ ಆಡಳಿತಯಂತ್ರ ಇದರಿಂದ ಸರಿಯಾದ ಮಾರ್ಗದರ್ಶನ ಪಡೆದರೆ ಭೂಮಿ, ಕಾರ್ಮಿಕತರ ಲಭ್ಯತೆ, ಬಂಡವಾಳ, ಮೂಲಸೌಕರ್ಯ ಹಾಗೂ ವ್ಯಾಪಾರದತಹ ಉತ್ಪಾದನಾ ಸ್ನೇಹಿ ಸುಧಾರಣೆಗಳ ಅನುಷ್ಠಾನದ ಅಗತ್ಯವಿರುತ್ತದೆ. ಇವುಗಳ ಸಹಕಾರವಿಲ್ಲದೇ ಜಾಗತಿಕ ಸ್ಪರ್ಧಾತ್ಮಕ ನೀತಿ ರೂಪುಗೊಳ್ಳಲ್ಲ.

1991ರ ಪೂರ್ವ ಮತ್ತು ನಂತರದಲ್ಲಿ ಕಾಣ ಸಿಗದ ರಚನಾತ್ಮಕ ಸುಧಾರಣೆಗಳು ಸಂಪೂರ್ಣವಾಗಿ ಜಾರಿಗೆ ಬಂದರೇ ವ್ಯಾಪಾರ ರಕ್ಷಣೆಯ ಅಗತ್ಯವು ಸೀಮಿತವಾಗಿರುತ್ತದೆ. ಭಾರತೀಯ ಉದ್ಯಮಿಗಳು ಮತ್ತು ವ್ಯವಸ್ಥಾಪಕರು ಜಾಗತಿಕ ಮಟ್ಟದ ಕೌಶಲ್ಯ ಮತ್ತು ಸಾಮರ್ಥ್ಯ ಹೊಂದಲಿದ್ದಾರೆ. ಅವರಿಗೆ ಕೇವಲ ಒಂದು ಹಂತದ ಆಟದ ಮೈದಾನದ ಅಗತ್ಯವಿದೆ.

ಕಚ್ಚಾ ವಸ್ತು ರಫ್ತು ರಾಷ್ಟ್ರ ಹಣೆಪಟ್ಟಿಯಿಂದ ಮುಕ್ತಿ

ಇತ್ತೀಚಿನ ದಶಕಗಳಲ್ಲಿ ಆಸ್ಟ್ರೇಲಿಯಾದಂತಹ ಹಲವು ದೇಶಗಳು ಭಾರತದಂತೆಯೇ ಒಂದು ಕಾಲದಲ್ಲಿ ಕಚ್ಚಾ ವಸ್ತುಗಳನ್ನು ರಫ್ತು ಮಾಡುವ ಬಗ್ಗೆ ನಿರಾಶಾವಾದಿಗಳಾಗಿದ್ದವು. ಕೃಷಿ ಉತ್ಪನ್ನಗಳು ಮತ್ತು ಖನಿಜಗಳನ್ನು ರಫ್ತು ಮಾಡುವ ಶೈಲಿಯನ್ನು ಬದಲಾಯಿಸಿಕೊಂಡವು. ಭಾರತದಂತಹ ವಿಶಾಲ ದೇಶಕ್ಕೆ ದೃಢವಾದ ಉತ್ಪಾದನಾ ವಲಯದ ಅಗತ್ಯವಿದೆ.

ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳು ಮತ್ತು ಖನಿಜಗಳು ರಫ್ತಿಗೆ ಅವಕಾಶಗಳನ್ನು ಒದಗಿಸಬಲ್ಲವು. ಉತ್ಪಾದನಾ ನೆಲೆಯನ್ನಾಗಿ ನಿರ್ಮಿಸುವಾಗ ಲಕ್ಷಾಂತರ ಭಾರತೀಯರಿಗೆ ಸಮೃದ್ಧಿಯನ್ನು ಒದಗಿಸುತ್ತದೆ. ಆರ್ಥಿಕತೆಗೆ ದರ ನೀತಿ ಚೌಕಟ್ಟು ಬೇಕಿದೆ. ಇದಕ್ಕೆ ಅನುಗುಣವಾಗಿ ಪ್ರಧಾನಿ ಸರಿಯಾದ ಸಂದೇಶವನ್ನು ನೀಡಿದ್ದಾರೆ.

-ಧೀರಜ್ ನಾಯರ್, ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಮುಖ್ಯ ಅರ್ಥಶಾಸ್ತ್ರಜ್ಞ. (ಮೇಲೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರವು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.