ನವದೆಹಲಿ: ಮೊಬೈಲ್ ಪಾವತಿ ಅಪ್ಲಿಕೇಷನ್ ಭೀಮ್ ಆ್ಯಪ್ ಬಳಕೆದಾರರ ಸುಮಾರು 70.26 ಲಕ್ಷ ವೈಯಕ್ತಿಕ ಡಾಟಾ ವೆಬ್‌ಸೈಟ್ ಮೂಲಕ ಸೋರಿಕೆಯಾಗಿದೆ ಎಂದು ಭದ್ರತಾ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಬಹಿರಂಗಪಡಿಸಿದ ದತ್ತಾಂಶವು ಬಳೆಕದಾರರ ಹೆಸರು, ಜನ್ಮ ದಿನಾಂಕ, ವಯಸ್ಸು, ಲಿಂಗ, ಮನೆಯ ವಿಳಾಸ, ಜಾತಿ ಸ್ಥಿತಿ ಮತ್ತು ಆಧಾರ್ ಕಾರ್ಡ್ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ ಎಂದು ವಿಪಿಎನ್ ವಿಮರ್ಶೆ ವೆಬ್‌ಸೈಟ್ ವಿಪಿಎನ್‌ಮೆಂಟರ್ ವರದಿ ತಿಳಿಸಿದೆ.
ಬಹಿರಂಗಗೊಂಡ ಡೇಟಾ ಪ್ರಮಾಣವು ಅಸಾಧಾರಣವಾಗಿದೆ. ಇದು ಭಾರತದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ವಿನಾಶಕಾರಿ ವಂಚನೆ, ಕಳ್ಳತನ ಮತ್ತು ಹ್ಯಾಕರ್‌ಗಳು ಹಾಗೂ ಸೈಬರ್ ಅಪರಾಧಿಗಳ ದಾಳಿಗೆ ಒಡ್ಡಿಕೊಳ್ಳಬಹುದು ಎಂದು ವಿಪಿಎನ್‌ಮೆಂಟರ್‌ನ ಭದ್ರತಾ ಸಂಶೋಧಕರು ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ದೇಶಿಯ ಭೀಮ್ ಆ್ಯಪ್ ಡಾಟಾ ಸೋರಿಕೆ ಕುರಿತು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಆ್ಯಪ್ ಬಳಕೆದಾರರು ಕೂಡಲೇ ತಮ್ಮ ಪಾಸ್ವರ್ಡ್ ಬದಲಾಯಿಸುವುದು ಉತ್ತಮ ಎಂಬ ಮಾತುಗಳು ಕೇಳಿಬರುತ್ತಿವೆ.