ನವದೆಹಲಿ: ಅಧ್ಯಕ್ಷ ಎನ್ ಕೆ ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗ 2021- 22ರಿಂದ 2025 - 26ರ ಆರ್ಥಿಕ ವರ್ಷಗಳ ವರದಿಯ ಪ್ರತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿದೆ.
ಆಯೋಗದ ಸದಸ್ಯರಾದ ಅಜಯ್ ನಾರಾಯಣ್ ಝಾ, ಅನೂಪ್ ಸಿಂಗ್, ಅಶೋಕ್ ಲಹಿರಿ ಮತ್ತು ರಮೇಶ್ ಚಂದ್ ಸಮಿತಿ ಕಾರ್ಯದರ್ಶಿ ಅರವಿಂದ್ ಮೆಹ್ತಾ ಅವರು ಇದ್ದಾರೆ.
15ನೇ ಹಣಕಾಸು ಆಯೋಗ 2021 - 22ರಿಂದ 2025 - 26ರ ಆರ್ಥಿಕ ವರ್ಷಗಳ ವರದಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ನ.4 ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನ.16ರಂದು ಸಲ್ಲಿಸಿತ್ತು. ಇಂದು ವಿತ್ತ ಸಚಿವರಿಗೆ ತಮ್ಮ ವರದಿಯನ್ನು ನೀಡಿದೆ.
-
Chairman @NKSingh_MP and Members of the 15th Finance Commission presented a copy of the Commission’s report for the period 2021-22 to 2025-26 to Finance Minister Smt. @nsitharaman today. pic.twitter.com/vawgwL0Dj1
— Ministry of Finance (@FinMinIndia) November 17, 2020 " class="align-text-top noRightClick twitterSection" data="
">Chairman @NKSingh_MP and Members of the 15th Finance Commission presented a copy of the Commission’s report for the period 2021-22 to 2025-26 to Finance Minister Smt. @nsitharaman today. pic.twitter.com/vawgwL0Dj1
— Ministry of Finance (@FinMinIndia) November 17, 2020Chairman @NKSingh_MP and Members of the 15th Finance Commission presented a copy of the Commission’s report for the period 2021-22 to 2025-26 to Finance Minister Smt. @nsitharaman today. pic.twitter.com/vawgwL0Dj1
— Ministry of Finance (@FinMinIndia) November 17, 2020
ಕಳೆದ ವರ್ಷ ಆಯೋಗವು 2020-21ರ ಹಣಕಾಸು ವರ್ಷದ ಶಿಫಾರಸು ಒಳಗೊಂಡ ವರದಿ ಸಲ್ಲಿಸಿದೆ. ಇದನ್ನು ಕೇಂದ್ರ ಸರ್ಕಾರ ಅಂಗೀಕರಿಸಿ 2020ರ ಜನವರಿ 30ರಂದು ಸಂಸತ್ತಿನಲ್ಲಿ ಮಂಡಿಸಿತು.
ಅನೇಕ ವಿಶಿಷ್ಟ ಮತ್ತು ವ್ಯಾಪಕ ವಿಷಯಗಳ ಕುರಿತು ಆಯೋಗವು ತನ್ನ ಶಿಫಾರಸು ನೀಡುವಂತೆ ಕೇಳಲಾಯಿತು. ತೆರಿಗೆ ಹಂಚಿಕೆ, ಸ್ಥಳೀಯ ಸರ್ಕಾರದ ಅನುದಾನ, ವಿಪತ್ತು ನಿರ್ವಹಣಾ ಅನುದಾನದ, ವಿದ್ಯುತ್ ಕ್ಷೇತ್ರ, ಡಿಬಿಟಿ ಅಳವಡಿಸಿಕೊಳ್ಳುವಿಕೆ, ಘನತ್ಯಾಜ್ಯ ನಿರ್ವಹಣೆ ಸೇರಿದೆಂತೆ ಹಲವು ಕ್ಷೇತ್ರಗಳಲ್ಲಿನ ರಾಜ್ಯಗಳ ಕಾರ್ಯಕ್ಷಮತೆ ಪ್ರೋತ್ಸಾಹ ಪರೀಕ್ಷೆ ಮತ್ತು ಶಿಫಾರಸು ಮಾಡಲು ಆಯೋಗಕ್ಕೆ ಮನವಿ ಮಾಡಲಾಯಿತು.
ರಕ್ಷಣಾ ಮತ್ತು ಆಂತರಿಕ ಭದ್ರತೆಗೆ ಧನಸಹಾಯಕ್ಕಾಗಿ ಪ್ರತ್ಯೇಕ ಕಾರ್ಯವಿಧಾನ ಸ್ಥಾಪಿಸಬೇಕೇ ಎಂದು ಪರೀಕ್ಷಿಸಲು ಸಮಿತಿಗೆ ಮನವಿ ಮಾಡಲಾಯಿತು. ಒಂದು ಅಂತಹ ಕಾರ್ಯವಿಧಾನಗಳು ಇದ್ದರೆ ಅದನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ಪ್ರಶ್ನಿಸಲಾಯಿತು.
ಒಕ್ಕೂಟ ವ್ಯವಸ್ಥೆಯಲ್ಲಿ ಕಂಪನಿ, ಸೀಮಾಸುಂಕ, ಅಬಕಾರಿ, ಆದಾಯ ಮತ್ತಯ ಸೇವಾ ತೆರಿಗೆಗಳಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯೋಚಿತ ಪಾಲು ನೀಡುವುದು; ಕೇಂದ್ರ ಸರ್ಕಾರ ವಿಧಿಸುವ ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ನಿಗದಿತ ಅವಧಿಯಲ್ಲಿ ಹಂಚಿಕೆ ಮಾಡುವ ಬಗ್ಗೆ ಸಂವಿಧಾನದ ಆಶಯದಂತೆ ಆಯೋಗ ತನ್ನ ಕಾರ್ಯ ನಿರ್ವಹಿಸುತ್ತದೆ.