ETV Bharat / business

ವಾಯುಮಾಲಿನ್ಯ ಗುಣಮಟ್ಟ ಸುಧಾರಣೆಗೆ ಕರ್ನಾಟಕಕ್ಕೆ 139 ಕೋಟಿ ರೂ. ಕೊಟ್ಟ ಕೇಂದ್ರ!

15ನೇ ಹಣಕಾಸು ಆಯೋಗದ ಶಿಫಾರಸುಗಳ ಆಧಾರದ ಮೇಲೆ ಸರ್ಕಾರವು 15 ರಾಜ್ಯಗಳಿಗೆ ತಮ್ಮ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿನ ವಾಯು ಗುಣಮಟ್ಟ ಸುಧಾರಣೆ ಕ್ರಮಗಳಿಗಾಗಿ ಮೊದಲ ಕಂತಿ 2,200 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

air quality
ವಾಯು ಮಾಲಿನ್ಯ
author img

By

Published : Nov 2, 2020, 10:09 PM IST

ನವದೆಹಲಿ: ಕೊರೊನಾ ಭೀತಿಯಿಂದಾಗಿ ಭಾರತದಾದ್ಯಂತ ವಿಧಿಸಲಾದ ಲಾಕ್​ಡೌನ್​ ಪರಿಣಾಮವಾಗಿ ದೇಶದ ಸುಮಾರು 100ಕ್ಕೂ ಅಧಿಕ ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣವು ಗಣನೀಯವಾಗಿ ತಗ್ಗಿತ್ತು.

ಲಾಕ್​ಡೌನ್​ ಅನ್ನು ಹಂತ-ಹಂತವಾಗಿ ತೆರವುಗೊಳಿಸಿದ ಬಳಿಕ ಮತ್ತೆ ಗುಣಮಟ್ಟದಲ್ಲಿ ಕುಸಿತಕಂಡುಬಂದು ಸಿಟಿ ನಾಗರಿಕರು ಆತಂಕಕ್ಕೆ ಒಳಗಾಗುವಂತಾಯಿತು. ವಾಯುಗುಣಮಟ್ಟದ ಹೋರಾಟದ ಭಾಗವಾಗಿ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರವು ಅನುದಾನ ಬಿಡುಗಡೆ ಮಾಡಿದೆ.

15ನೇ ಹಣಕಾಸು ಆಯೋಗದ ಶಿಫಾರಸುಗಳ ಆಧಾರದ ಮೇಲೆ ಸರ್ಕಾರವು 15 ರಾಜ್ಯಗಳಿಗೆ ತಮ್ಮ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿನ ವಾಯು ಗುಣಮಟ್ಟ ಸುಧಾರಣೆ ಕ್ರಮಗಳಿಗಾಗಿ ಮೊದಲ ಕಂತಿ 2,200 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

  • This will help the beneficiary States to undertake air quality measures, including capacity-building of the local bodies within their million-plus cities/agglomerations.

    — NSitharamanOffice (@nsitharamanoffc) November 2, 2020 " class="align-text-top noRightClick twitterSection" data=" ">

ಇದು ಫಲಾನುಭವಿ ರಾಜ್ಯಗಳಿಗೆ ತಮ್ಮ ಮಿಲಿಯನ್-ಪ್ಲಸ್ ನಗರಗಳು ಸ್ಥಳೀಯ ಸಂಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಸೇರಿದಂತೆ ಗಾಳಿಯ ಗುಣಮಟ್ಟ ಸುಧಾರಣೆಗೆ ಯೋಜನೆ ಕೈಗೊಳ್ಳಲು ನೆರವಾಗಲಿದೆ ಎಂದಿದ್ದಾರೆ.

ಆಂಧ್ರಪ್ರದೇಶ (67.5 ಕೋಟಿ ರೂ), ಬಿಹಾರ (102 ಕೋಟಿ ರೂ), ಚತ್ತೀಸಗಢ (53.5 ಕೋಟಿ ರೂ), ಗುಜರಾತ್ (202.5 ಕೋಟಿ ರೂ), ಹರಿಯಾಣ ( 24 ಕೋಟಿ ರೂ), ಜಾರ್ಖಂಡ (79.5 ಕೋಟಿ ರೂ), ಕರ್ನಾಟಕ (139.5ಕೋಟಿ ರೂ), ಮಧ್ಯಪ್ರದೇಶ (145.5 ಕೋಟಿ ರೂ), ಮಹಾರಾಷ್ಟ್ರ (396.5 ಕೋಟಿ ರೂ), ಪಂಜಾಬ್ (45 ಕೋಟಿ ರೂ), ರಾಜಸ್ಥಾನ ( 140.5 ಕೋಟಿ ರೂ), ತಮಿಳುನಾಡು (116.5 ಕೋಟಿ ರೂ), ತೆಲಂಗಾಣ (117 ಕೋಟಿ ರೂ), ಉತ್ತರ ಪ್ರದೇಶ ( 357 ಕೋಟಿ ರೂ) ಮತ್ತು ಪಶ್ಚಿಮ ಬಂಗಾಳಕ್ಕೆ (209.5 ಕೋಟಿ ರೂ) ಸೇರಿ ಒಟ್ಟು 2,200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.