ETV Bharat / business

ರೆಸ್ಟೋರೆಂಟ್​ ಗ್ರಾಹಕರಿಗೆ ಕೋವಿಡ್​-19 ಹರಡದಂತೆ ಕಾಂಟ್ಯಾಕ್ಟ್​ಲೆಸ್ ಡೈನಿಂಗ್ ಸರ್ವೀಸ್​​​ - ಜೊಮ್ಯಾಟೊ ಕಾಂಟ್ಯಾಕ್ಟ್​ಲೆಸ್ ಡೈನಿಂಗ್

ಜೊಮ್ಯಾಟೊದ ಸಂಪರ್ಕವಿಲ್ಲದ ಡೈನಿಂಗ್​ ಮೂರು ಅಂಶಗಳನ್ನು ಹೊಂದಿರುತ್ತದೆ. ಸಂಪರ್ಕವಿಲ್ಲದ ಮೆನು, ಸಂಪರ್ಕವಿಲ್ಲದ ಆರ್ಡರ್​ ಮತ್ತು ಸಂಪರ್ಕವಿಲ್ಲದ ಪಾವತಿ ಒಳಗೊಂಡಿದೆ. ಕಾಂಟ್ಯಾಕ್ಟ್​ಲೆಸ್​ ಮೆನು ಜತೆಗೆ ಡಿಶಸ್​ ಆಯ್ಕೆಗಳನ್ನು ರೆಸ್ಟೊರೇಂಟ್​ಗಳಲ್ಲಿನ ಮೇಜಿನ ಮೇಲೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದು. ಜೊಮ್ಯಾಟೊ ಅಪ್ಲಿಕೇಷನ್​ನಲ್ಲಿ ಸಂಪರ್ಕವಿಲ್ಲದ ಆರ್ಡರ್​ ಮತ್ತು ಹಣ ಪಾವತಿಗೂ ಅವಕಾಶವಿದೆ.

foodtech  Zomato
ಜೊಮ್ಯಾಟೊ
author img

By

Published : Apr 18, 2020, 9:13 PM IST

ನವದೆಹಲಿ: ಫುಡ್‌ಟೆಕ್ ಯುನಿಕಾರ್ನ್ ಜೊಮ್ಯಾಟೊ, ರೆಸ್ಟೋರೆಂಟ್​​ ತಿನಿಸು ಗ್ರಾಹಕರಿಗೆ ಕೋವಿಡ್​-19 ಸಾಂಕ್ರಾಮಿಕ ರೋಗ ತಾಗದಂತೆ 'ಕಾಂಟ್ಯಾಕ್ಟ್​ಲೆಸ್ ಡೈನಿಂಗ್'​ (ಸಂಪರ್ಕವಿಲ್ಲದ ಆಹಾರ ವಿತರಣೆ) ಸೇವೆ ಪರಿಚಯಿಸಿದೆ.

ಈ ಸೇವೆಯು ರೆಸ್ಟೋರೆಂಟ್‌ ಗ್ರಾಹಕರ ಸುರಕ್ಷತೆ ಮತ್ತು ನೈರ್ಮಲ್ಯ ಬಗ್ಗೆ ವಿಶ್ವಾಸ ಹೆಚ್ಚಿಸಲು ನೆರವಾಗಲಿದೆ. ಸಂಪರ್ಕವಿಲ್ಲದ ಡೈನಿಂಗ್​ ಮೂರು ಅಂಶಗಳನ್ನು ಹೊಂದಿರುತ್ತದೆ. ಸಂಪರ್ಕವಿಲ್ಲದ ಮೆನು, ಸಂಪರ್ಕವಿಲ್ಲದ ಆರ್ಡರ್​ ಮತ್ತು ಸಂಪರ್ಕವಿಲ್ಲದ ಪಾವತಿ.

ಕಾಂಟ್ಯಾಕ್ಟ್​ಲೆಸ್​ ಮೆನು ಜತೆಗೆ ಡಿಶಸ್​ ಆಯ್ಕೆಯನ್ನು ರೆಸ್ಟೊರೇಂಟ್​ಗಳಲ್ಲಿನ ಮೇಜಿನ ಮೇಲೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದು. ಜೊಮ್ಯಾಟೊ ಅಪ್ಲಿಕೇಷನ್​ನಲ್ಲಿ ಸಂಪರ್ಕವಿಲ್ಲದ ಆರ್ಡರ್​ ಮತ್ತು ಹಣ ಪಾವತಿಗೂ ಅವಕಾಶವಿದೆ.

ಇದು ಮೆನು ಕಾರ್ಡ್‌ ಮತ್ತು ಬಿಲ್ ಪುಸ್ತಕಗಳ ಅಗತ್ಯವನ್ನು ನಿವಾರಿಸುತ್ತದೆ. ಗ್ರಾಹಕರು ಹೆಚ್ಚಾಗಿ ಕಾರ್ಡ್​ ಹಾಗೂ ಬಿಲ್​ ಬುಕ್​ ಸ್ಪರ್ಶಿಸುತ್ತಾರೆ. ಇವುಗಳು ಪರಿಶುದ್ಧವಾಗಿಲ್ಲ ಎಂಬುದು ಅವರ ಕಳವಳಕ್ಕೆ ಕಾರಣವಾಗಬಹುದು ಎಂದು ಜೊಮ್ಯಾಟೊದ ಸಹ ಸಂಸ್ಥಾಪಕ/ ಮುಖ್ಯ ಕಾರ್ಯಾಚರಣಾ ಅಧಿಕಾರಿ ಗೌರವ್ ಗುಪ್ತಾ ತಮ್ಮ ಬ್ಲಾಗ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ವೇಟರ್​ ಸಿಬ್ಬಂದಿ ಆರ್ಡರ್​ ಮಾಡಿದ ಆಹಾರವನ್ನು ಅಡುಗೆ ಮನೆಯಿಂದ ನಿಮ್ಮ ಬಳಿಗೆ ತರುತ್ತಾರೆ. ಈ ವೇಳೆ ಸಿಬ್ಬಂದಿ ಮುಖಗವಸು ಧರಿಸಿರುತ್ತಾರೆ. ವೇಟರ್​ ಸಿಬ್ಬಂದಿ ನೈರ್ಮಲ್ಯದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ. ನಾವೆಲ್ಲರೂ ಸರಿಯಾಗಿರಬೇಕು ಅಷ್ಟೆ ಎಂದರು.

ಆ್ಯಪ್​ನಲ್ಲಿ ಹೆಚ್ಚುವರಿ ಫೀಚರ್​ಗಳನ್ನು ಸೇರಿಸಲಾಗಿದೆ. ಜಗಳ ಮುಕ್ತ ಆಹಾರ ವಿತರಣೆ ಸೇವೆ ಒದಗಿಸುವಂತಹ ಸ್ವಯಂ ಅಥವಾ ಸಂಪೂರ್ಣ ಟೇಬಲ್‌ ಪಾವತಿಸುವ ಆಯ್ಕೆಯಂತಹ ವೈಶಿಷ್ಟ್ಯ ಅಪ್ಲಿಕೇಷನ್‌ನಲ್ಲಿದೆ. ಸಂಪರ್ಕವಿಲ್ಲದ ಆಹಾರ ಸೇವನೆಗೆ ಗ್ರಾಹಕರು ತಮ್ಮ ಆರ್ಡರ್​ ನೀಡಲು ಅಥವಾ ಬಿಲ್ ಪಾವತಿಸಲು ಕಾಯಬೇಕಾಗಿಲ್ಲ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.