ನವದೆಹಲಿ: ಬಿಕ್ಕಟ್ಟಿನ ಸುಳಿಗೆ ಸಿಲುಕಿದ್ದ ಯೆಸ್ ಬ್ಯಾಂಕ್ನ ಬ್ಯಾಂಕಿಂಗ್ ಸೇವೆಗಳು ಇಂದು (ಬುಧವಾರ) ಸಂಜೆ 6 ಗಂಟೆಯಿಂದ ಮತ್ತೆ ಈ ಮೊದಲಿನಂತೆ ಆರಂಭಗೊಂಡಿವೆ.
2020ರ ಮಾರ್ಚ್ 19ರ ಗುರುವಾರದಿಂದ ಬೆಳಗ್ಗೆಯಿಂದ ಸಂಜೆಯವರೆಗೂ ಎಂದಿನಂತೆ ಬ್ಯಾಂಕಿಂಗ್ ಸೇವೆ ನಡೆಯಲಿವೆ. ಕಳೆದ 13 ದಿನಗಳಿಂದ ಬ್ಯಾಂಕಿಂಗ್ ಸೇವೆಯ ಮೇಲೆ ಆರ್ಬಿಐ ನಿರ್ಬಂಧ ಹೇರಿತ್ತು.
-
Our banking services are now operational. You can now experience the full suite of our services. Thank you for your patience and co-operation. #YESforYOU @RBI @FinMinIndia
— YES BANK (@YESBANK) March 18, 2020 " class="align-text-top noRightClick twitterSection" data="
">Our banking services are now operational. You can now experience the full suite of our services. Thank you for your patience and co-operation. #YESforYOU @RBI @FinMinIndia
— YES BANK (@YESBANK) March 18, 2020Our banking services are now operational. You can now experience the full suite of our services. Thank you for your patience and co-operation. #YESforYOU @RBI @FinMinIndia
— YES BANK (@YESBANK) March 18, 2020
ಬುಧವಾರ ಸಂಜೆ 6 ಗಂಟೆಗೆ ನಿರ್ಬಂಧ ತೆರವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರು ಕೆಲವು ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಇಂಟರ್ನೆಟ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದರು.
ನಮ್ಮ ಬ್ಯಾಂಕಿಂಗ್ ಸೇವೆಗಳು ಇಂದಿನಿಂದ ಸೇವೆಯಲ್ಲಿರಲಿವೆ. ನಮ್ಮ ಎಲ್ಲ ಸೇವೆಗಳನ್ನು ನೀವು ಬಳಸಿಕೊಳ್ಳಬಹುದು. ನಿಮ್ಮ ಸಹಕಾರ ಹಾಗೂ ತಾಳ್ಮೆಗೆ ಧನ್ಯವಾದಗಳು ಎಂದು ಯೆಸ್ ಬ್ಯಾಂಕ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿತು.
ನಿಮಗೆ ಉತ್ತಮವಾದ ಸೇವೆಗಳನ್ನು ನೀಡಲು ನಮ್ಮ ಬ್ರಾಂಚ್ಗಳು 2020ರ ಮಾರ್ಚ್ 19ರಿಂದ 21ರವರೆಗೆ ಬೆಳಗ್ಗೆ 8.30ರಿಂದ ಕಾರ್ಯನಿರ್ವಹಿಸಲಿವೆ. ನಾವು ನಮ್ಮ ಹಿರಿಯ ನಾಗರಿಕ ಗ್ರಾಹಕರ ಸೇವೆಯ ಅವಧಿಯನ್ನು ವಿಸ್ತರಿಸುತ್ತಿದ್ದೇವೆ. ಮಾರ್ಚ್ 19ರಿಂದ 27ರ ವರೆಗೆ ಸಂಜೆ 4.30ರಿಂದ 5.30ಕ್ಕೆ ವಿಸ್ತರಿಸಿದ್ದೇವೆ ಎಂದು ತಿಳಿಸಿದೆ.