ಬೆಂಗಳೂರು: ಯೆಸ್ ಬ್ಯಾಂಕ್ ಮೇಲೆ ವಹಿವಾಟಿನ ನಿರ್ಬಂಧ ಆರ್ಬಿಐ ಹೇರಿದ್ದರಿಂದ ರಾಜ್ಯಾದ್ಯಂತ ಹಲವಾರು ಯೆಸ್ ಬ್ಯಾಂಕ್ ಠೇವಣಿದಾರರು ಬ್ಯಾಂಕ್ನ ಎಟಿಎಂಗಳಲ್ಲಿ ಹಣದ ಅಭಾವ ಹಾಗೂ ಶಾಖೆಗಳಲ್ಲಿನ ವಿತರಣೆಯ ಬಿಕ್ಕಟ್ಟು ಎದುರಿಸಬೇಕಾಯಿತು.
ಬೆಂಗಳೂರಿನಲ್ಲಿ 37 ಮತ್ತು ಕರ್ನಾಟಕದಲ್ಲಿ 74 ಶಾಖೆಗಳನ್ನು ಯೆಸ್ ಬ್ಯಾಂಕ್ ಹೊಂದಿದೆ. ಖಾತೆದಾರರಿಗೆ ಬ್ಯಾಂಕ್ ತನ್ನ ಬದ್ಧತೆಯನ್ನು ಉಳಿಸಿಕೊಳ್ಳುತ್ತದೆ ಎಂದು ಯೆಸ್ ಬ್ಯಾಂಕ್ ಉದ್ಯೋಗಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
ಅನೇಕ ಗ್ರಾಹಕರು ತಮ್ಮ ಹಣ ವಾಪಸ್ ಪಡೆಯಲು ಬ್ಯಾಂಕ್ ಮತ್ತು ಎಟಿಎಂಗಳತ್ತ ಧಾವಿಸಿದರು. ಇದರ ಪರಿಣಾಮವಾಗಿ ಶುಕ್ರವಾರ ಕೆಲವೇ ಗಂಟೆಗಳಲ್ಲಿ ಹಣವೆಲ್ಲ ಖಾಲಿಯಾಗಿ ಎಟಿಎಂಗಳನ್ನು ಮುಚ್ಚಬೇಕಾಯಿತು ಎಂದು ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ ಬ್ಯಾಂಕ್ ಗ್ರಾಹಕರು ಪ್ರತಿ ಖಾತೆಯಿಂದ ₹ 50,000 ಮಾತ್ರ ಹಣ ಹಿಂದೆ ಪಡೆಯಲು ಗರಿಷ್ಠ ಮಿತಿ ವಿಧಿಸಿದೆ. ಮುಂದಿನ ಆದೇಶ ನೀಡುವವರೆಗೆ ಇದು ಜಾರಿಯಲ್ಲಿ ಇರಲಿದೆ ಎಂದಿದೆ.