ETV Bharat / business

589 ಕೋಟಿ ರೂ.ಗೆ ಯುರೋಪಿ​ನ 4C ಕಂಪನಿ ಖರೀದಿಸಲಿರುವ ವಿಪ್ರೊ!

2020ರ ಜನವರಿ 31ಕ್ಕೆ ಕೊನೆಗೊಂಡ ವರ್ಷಕ್ಕೆ 4ಸಿ ಆದಾಯ 31.8 ಮಿಲಿಯನ್ ಯುರೋಗಳಷ್ಟಿತ್ತು. ಸ್ವಾಧೀನವು ರೂಢಿಗತ ಮುಕ್ತಾಯದ ಷರತ್ತುಗಳಿಗೆ ಒಳಪಟ್ಟಿರುತ್ತದೆ. 2020ರ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಮುಚ್ಚುವ ನಿರೀಕ್ಷೆಯಿದೆ ಎಂದು ಫೈಲಿಂಗ್​ನಲ್ಲಿ ತಿಳಿಸಿದೆ.

Wipro
ವಿಪ್ರೊ
author img

By

Published : Jul 23, 2020, 5:43 PM IST

ನವದೆಹಲಿ: ಯುರೋಪ್ ಮತ್ತು ಮಧ್ಯಪ್ರಾಚ್ಯದ ಅತಿದೊಡ್ಡ ಸೇಲ್ಸ್ ‌ಫೋರ್ಸ್ ಪಾಲುದಾರರಲ್ಲಿ ಒಂದಾದ '4ಸಿ'ಯನ್ನು 68 ಮಿಲಿಯನ್ ಯುರೋಗಳಿಗೆ (ಸುಮಾರು 589 ಕೋಟಿ ರೂ.) ಸ್ವಾಧೀನಪಡಿಸಿಕೊಳ್ಳುವುದಾಗಿ ಐಟಿ ದಿಗ್ಗಜ ವಿಪ್ರೋ ತಿಳಿಸಿದೆ.

1997ರಲ್ಲಿ ಮೆಚೆಲೆನ್​ನಲ್ಲಿ (ಬೆಲ್ಜಿಯಂ) ಪ್ರಧಾನ ಕಚೇರಿ ಸ್ಥಾಪಿಸಿದ 4ಸಿ, 500ಕ್ಕೂ ಅಧಿಕ ಗ್ರಾಹಕರನ್ನು ಹೊಂದಿದ್ದು, 1,500ಕ್ಕೂ ಹೆಚ್ಚು ಪ್ರಾಜೆಕ್ಟ್​​ಗಳನ್ನು ಪೂರ್ಣಗೊಳಿಸಿದೆ. ಲಂಡನ್, ಪ್ಯಾರಿಸ್, ಬ್ರಸೆಲ್ಸ್, ಕೋಪನ್ ಹ್ಯಾಗನ್ ಮತ್ತು ದುಬೈನಲ್ಲಿನ ಸ್ಥಳೀಯ ಕಚೇರಿಗಳಿಂದ 350ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಇಂಗ್ಲೆಂಡ್​, ಫ್ರಾನ್ಸ್, ಬೆನೆಲಕ್ಸ್, ನಾರ್ಡಿಕ್ಸ್ ಮತ್ತು ಯುಎಇನಲ್ಲಿ ಸೇಲ್ಸ್‌ ಫೋರ್ಸ್ ಹೊಂದಿದೆ.

ವಿಪ್ರೊ ಸಲ್ಲಿಸಿದ ನಿಯಂತ್ರಕ ದಾಖಲೆಯ ಪ್ರಕಾರ, 2020ರ ಜನವರಿ 31ಕ್ಕೆ ಕೊನೆಗೊಂಡ ವರ್ಷಕ್ಕೆ ಇದರ ಆದಾಯ 31.8 ಮಿಲಿಯನ್ ಯುರೋಗಳಷ್ಟಿತ್ತು. ಸ್ವಾಧೀನವು ರೂಢಿಗತ ಮುಕ್ತಾಯದ ಷರತ್ತುಗಳಿಗೆ ಒಳಪಟ್ಟಿರುತ್ತದೆ. 2020ರ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಮುಚ್ಚುವ ನಿರೀಕ್ಷೆಯಿದೆ ಎಂದು ಫೈಲಿಂಗ್​ನಲ್ಲಿ ತಿಳಿಸಿದೆ.

ಈ ಸ್ವಾಧೀನದ ಮೂಲಕ ಸೇಲ್ಸ್‌ ಫೋರ್ಸ್ ಇತ್ಯರ್ಥಗಳ ಪ್ರಮುಖ ಪೂರೈಕೆದಾರನಾಗಿ ವಿಪ್ರೊ ಸ್ಥಾನ ಮತ್ತಷ್ಟು ಬಲಗೊಳ್ಳಲಿದೆ. ವಿಪ್ರೊ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದಲ್ಲಿ ಉತ್ತಮ ಸೇಲ್ಸ್ ‌ಫೋರ್ಸ್ ವ್ಯವಹಾರ ಹೊಂದಿದೆ. 2016ರಲ್ಲಿ ಅಪ್ಪಿರಿಯೊ ಸ್ವಾಧೀನ ಪಡಿಸಿಕೊಳ್ಳಲಾಯಿತು ಎಂದು ವಿಪ್ರೊ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.