ಬೆಂಗಳೂರು: ಸಿಲಿಕಾನ್ ಸಿಟಿಯ ಐಟಿ ದಿಗ್ಗಜ ಕಂಪನಿ ವಿಪ್ರೋ ಇದುವರೆಗೂ ಮಾರಾಟ ಮಾಡದಿರುವಷ್ಟು ಅತೀ ಹೆಚ್ಚಿನ ಪ್ರಮಾಣದಲ್ಲಿ ಷೇರುಗಳ ಮರು ಖರೀದಿಗೆ (ಬೈ ಬ್ಯಾಕ್) ಮುಂದಾಗಿದೆ.
ವಿಪ್ರೋ ತನ್ನ ಸುಮಾರು ₹ 12,000 ಕೋಟಿ ರೂ (1.7 ಶತಕೋಟಿ ಡಾಲರ್) ಮೌಲ್ಯದ ಷೇರುಗಳನ್ನು ವಿಪ್ರೊ ಮರು ಖರೀದಿಸಲಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮರು ಖರೀದಿಯನ್ನು ಅನುಮೋದಿಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.
2016ರಲ್ಲಿ ವಿಪ್ರೋ ₹ 2,500 ಕೋಟಿ ಹಾಗೂ 2017ರಲ್ಲಿ ₹ 11,000 ಕೋಟಿ ರೂ ಮೌಲ್ಯದ ಷೇರುಗಳನ್ನು ಮರು ಖರೀದಿಸಿತ್ತು. ಈ ಸಲ ಪ್ರತಿ ಷೇರನ್ನು ₹ 320 ರೂ ದರದಲ್ಲಿ ಕೊಳ್ಳುವ ಸಾಧ್ಯತೆ ಇದೆ. ಕಂಪನಿಯ 6 ತಿಂಗಳಿನ ಸರಾಸರಿ ದರದ (₹ 240 ) ಶೇ 33ರಷ್ಟು ಹೆಚ್ಚಿನ ಮೌಲ್ಯ ಇದಾಗಿದೆ.