ನವದೆಹಲಿ: ಟೆಲಿಕಾಂ ಕಂಪನಿಗಳು (ಏರ್‌ಸೆಲ್, ರಿಲಯನ್ಸ್ ಮತ್ತು ವಿಡಿಯೋಕಾನ್) ತಮ್ಮ ದಿವಾಳಿತನ ದಾಖಲೆಗಳನ್ನು ಆಗಸ್ಟ್ 7ರೊಳಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಳಿದೆ. ಟೆಲಿಸ್ಕೋಗಳಿಂದ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಪಾವತಿಸುವ ಅಂತಿಮ ಗಡುವಿನ ಆದೇಶದ ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಟೆಲಿಕಾಂ ಕಂಪನಿಗಳ ಮೊತ್ತವನ್ನು ಮರು ಮೌಲ್ಯಮಾಪನ ಮಾಡುವುದಿಲ್ಲ ಅಥವಾ ಬಾಕಿಗಳನ್ನು ಮರು ಲೆಕ್ಕಾಚಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬಾಕಿ ಮೊತ್ತದ ಬಗ್ಗೆ ಯಾವುದೇ ಹೊಂದಾಣಿಕೆ ಮಾಡಬೇಡಿ. ಯಾವುದೇ ಆಕ್ಷೇಪಣೆಗಳನ್ನು ಎಂಟರ್ಟೈನ್ ಮಾಡುವುದಿಲ್ಲ ಎಂದು ನ್ಯಾಯಪೀಠ ತನ್ನ ಅಭಿಪ್ರಾಯ ತಿಳಿಸಿದೆ.
ವೊಡಾಫೋನ್, ಟಾಟಾ ಮತ್ತು ಏರ್‌ಟೆಲ್ ಯಾವುದೇ ಮರುಮೌಲ್ಯಮಾಪನಕ್ಕಾಗಿ ಪ್ರಯತ್ನಿಸುತ್ತಿಲ್ಲ. ಪಾವತಿಸಲು ಕೇವಲ ಸಮಯ ನೀಡಿ ಎಂದು ನ್ಯಾಯಾಲಯಕ್ಕೆ ಕೋರಿದರು.
ಎಸ್‌ಜಿ ತುಷಾರ್ ಮೆಹ್ತಾ ಅವರು, ಸರ್ಕಾರವು ತೀರ್ಪನ್ನು ಅನುಸರಿಸುತ್ತದೆ. ಬಾಕಿ ಹಣವನ್ನು ಮರು ಮೌಲ್ಯಮಾಪನ ಮಾಡುವುದಿಲ್ಲ ಎಂದರು. ವೊಡಾಫೋನ್ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು, ಭಾರತದಲ್ಲಿ ಕಂಪನಿಯ ಸಂಪೂರ್ಣ ಹೂಡಿಕೆ ಕೊಚ್ಚಿಹೋಗಿದೆ. ಸುಮಾರು 1 ಲಕ್ಷ ಕೋಟಿ ರೂ. ಯಾವುದೇ ಗಳಿಕೆ ಇಲ್ಲದೆ ಖರ್ಚಿನಲ್ಲಿ ಕರಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ನಾವು ಮೊದಲ ವರ್ಷದಲ್ಲಿ 2,800 ಕೋಟಿ ರೂ., ಮುಂದಿನ ವರ್ಷದಲ್ಲಿ 1,800 ಕೋಟಿ ರೂ. ಮತ್ತು ನಂತರ 523 ಕೋಟಿ ರೂ. ನಷ್ಟ ಅನುಭವಿಸಿದ್ದೇವೆ. 10 ವರ್ಷಗಳ ಅವಧಿಯಲ್ಲಿ ಒಟ್ಟು ಆದಾಯವು 6 ಲಕ್ಷ ಕೋಟಿ ರೂ.ಯಷ್ಟಿದೆ. ಅದರಲ್ಲಿ 495 ಕೋಟಿ ರೂ. ಖರ್ಚಿದೆ ಎಂದು ರೋಹ್ಟಿಗಿ ಹೇಳಿದರು.
ದಶಕಗಳಿಂದ ನಷ್ಟದಲ್ಲಿದ್ದರೆ ಬಾಕಿ ಹಣವನ್ನು ತೀರಿಸಲು ಏನು ಯೋಜನೆ ಹಾಕಿಕೊಂಡಿದ್ದೀರಾ. ನಿಮ್ಮನ್ನು ನಾವು ಹೇಗೆ ನಂಬಬಹುದು ಎಂದು ಕೋರ್ಟ್ ಪ್ರಶ್ನಿಸಿತು. ವೊಡಾಫೋನ್ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತದೆ ಎಂದು ಭರವಸೆ ನೀಡಿತು.
ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಟಾಟಾ ಗಳಿಕೆಯ ಬಗ್ಗೆ ತರಾಟೆಗೆ ತೆಗೆದುಕೊಂಡು, "ಖಾತೆಗಳ ಕುಶಲತೆಯು ಹೇಗೆ ನಡೆಯುತ್ತದೆ ಎಂಬುದು ನಮಗೆ ತಿಳಿದಿದೆ. ಆದ್ದರಿಂದ ನಮಗೆ ಕಲಿಸಲು ಬರಬೇಡಿ. ಈ ದೇಶವು ನಿಮ್ಮೆಲ್ಲರ ಕಾರಣದಿಂದಾಗಿ ಬಳಲುತ್ತಿದೆ. ನೀವು ಆದೇಶ ಪಾಲಿಸದಿದ್ದರೆ ನಾವು ದಂಡ ವಿಧಿಸುತ್ತೇವೆ. ನಾವು ಏನು ಯೋಚಿಸುತ್ತಿದ್ದೇವೆಂಬುದು ನಿಮಗೆ ತಿಳಿದಿಲ್ಲ" ಎಂದು ಖಡಕ್ ಆಗಿ ಹೇಳಿದರು.